ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ದುರಂತ ಪ್ರಕರಣದ ತನಿಖೆಯ ಪ್ರಾಥಮಿಕ ವರದಿ ಬಿಡುಗಡೆಯಾಗಿದ್ದು, ಟೇಕ್-ಆಫ್ ಆದ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್ಗಳು ಸ್ಥಗಿತಗೊಂಡಿದೆ ಎಂದು ತನಿಖಾ ವರದಿ ಬಹಿರಂಗಪಡಿಸಿದೆ. ಜೂನ್ 12ರಂದು ಅಹಮದಾಬಾದ್ನಲ್ಲಿ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್ಲೈನರ್ 787-8 ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ 242 ರಲ್ಲಿ 241 ಜನರು ಸೇರಿದಂತೆ ಕನಿಷ್ಠ 270 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯ ತನಿಖಾ ವರದಿ ಬಿಡುಗಡೆಗೊಂಡಿದೆ. ಶನಿವಾರ(ಜುಲೈ 12) ಬೆಳಗಿನ ಜಾವ 1 ಗಂಟೆಯ ನಂತರ ವರದಿ ಬಿಡುಗಡೆಯಾಗಿದೆ. ಹಲವು ಆಘಾತಕಾರಿ ಮಾಹಿತಿಗಳು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.
