ಹಣದ ವಿಚಾರಕ್ಕೆ ಯುವಕರಿಬ್ಬರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಓರ್ವ ಯುವಕನಿಗೆ ಚಾಕು ಇರಿದ ಘಟನೆ ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾವೇರಿ ಪೇಟೆಯಲ್ಲಿ ನಡೆದಿದೆ.
ಖ್ವಾಜಾ ಶಿರಹಟ್ಟಿ ಎಂಬುವವನು ಚಾಕು ಇರಿದ ಯುವಕ. ಒಟ್ಟು 6 ಗಾಯಗಳಾಗಿರುವ ಗಾಯಾಳು ರಾಘವೇಂದ್ರ ಗಾಯಕವಾಡ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಖ್ವಾಜಾ ಶಿರಹಟ್ಟಿಯನ್ನು ಪೊಲೀಸರು ವಿಚಾರಿಸಿದಾಗ; ಕೃತ್ಯದಲ್ಲಿ ಮತ್ತೋರ್ವ ಇದ್ದುದ್ದಾಗಿಯೂ, ಆತನನ್ನು ತೋರಿಸುವುದಾಗಿ ಹೇಳಿ ನಗರದ ಹೊರವಲಯಕ್ಕೆ ಕರೆದುಕೊಂಡು ಹೊಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಈ ಸಂದರ್ಭದಲ್ಲಿ ಆರೋಪಿ ಖ್ವಾಜಾ, ಪಿಎಸ್ಐ ದಯಾನಂದ ಹಾಗೂ ಪೊಲೀDharwadಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಪೊಲೀಸರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಕೂಡ ಆತ ಶರಣಾಗದೆ ಇದ್ದುದರಿಂದ ಆತನ ಎಡಗಾಲಿಗೆ ಒಂದು ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನಲಾಗಿದೆ.