ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿ ಇಡೀ ಹೋಟೆಲ್ ಗೆ ಬೆಂಕಿ ಹೊತ್ತಿಕೊಂಡು, ಸುಟ್ಟು ಕರಕಲಾಗಿರುವ ಘಟನೆ ಮಸ್ಕಿ ತಾಲ್ಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ವೀರಯ್ಯಸ್ವಾಮಿ ಅವರು ಬೆಳಿಗ್ಗೆ ಹೋಟೆಲ್ ತೆರೆದಾಗ ಅಡುಗೆ ಅನಿಲ ಗ್ಯಾಸ್ ಸಿಲಿಂಡರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ಗಮನಿಸಿದ ಹೋಟೆಲ್ ಮಾಲೀಕ ಸಾರ್ವಜನಿಕರು ಅಲ್ಲಿಂದ ತೆರಳಿದರು. ನಂತರ ಸಿಲಿಂಡರ್ ಸ್ಪೋಟವಾಗಿದೆ ಎನ್ನಲಾಗಿದೆ.

ಸ್ಪೋಟದ ಮುನ್ಸೂಚನೆಯಿಂದ ಮುಂಜಾಗೃತಾ ಕೈಗೊಂಡಿದ್ದರಿಂದ ಹೋಟೆಲ್ ಸುತ್ತಮುತ್ತ ಜನರನ್ನು ಕೂಡ ಬೇರೆಡೆಗೆ ಕಳುಹಿಸಿದರು. ಭಾರೀ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನೆ ಗೋಡೆ ಕುಸಿದು ಮಹಿಳೆ ಸಾವು ಓರ್ವ ಗಾಯ
ಗ್ರಾಮದ ಸ್ಥಳೀಯರು ಬೆಂಕಿ ನಂದಿಸಿದ್ದು ನಂತರದಲ್ಲಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು ತಕ್ಷಣ ಅಗ್ನಿಶಾಮಕ ಅಧಿಕಾರಿಗಳು ಧಾವಿಸಿ ಬೆಂಕಿ ನಂದಿಸಿ ತಪಾಸಣೆ ಮಾಡಿದ್ದಾರೆ.

