ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ದಿನದಾಟದಲ್ಲಿ ಬಾಝ್ ಬಾಲ್ ಬದಲಿಗೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ಬ್ಯಾಟರ್ಗಳನ್ನು ವ್ಯಂಗ್ಯವಾಡಿ ಗಮನ ಸೆಳೆದಿದ್ದ ಗಿಲ್, ಇದೀಗ ಮೂರನೇ ದಿನದಾಟದ ಅಂತ್ಯದ ವೇಳೆ ಆಂಗ್ಲ ಬ್ಯಾಟರ್ಗಳ ಚಳಿ ಬಿಡಿಸಲು ಮುಂದಾಗಿದ್ದಾರೆ. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ 387 ರನ್ಗಳಿಸಿ ಆಲೌಟ್ ಆದರೆ, ಟೀಮ್ ಇಂಡಿಯಾ ಕೂಡ 387 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತ್ತು.
ಇದರ ಬೆನ್ನಲ್ಲೇ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು. ಆದರೆ ಮೂರನೇ ದಿನದಾಟದ ಅಂತ್ಯದ ವೇಳೆ ಇನಿಂಗ್ಸ್ ಆರಂಭಿಸಿದ್ದರಿಂದ ಇಂಗ್ಲೆಂಡ್ ಆರಂಭಿಕ ಜೋಡಿ ಸಮಯ ವ್ಯರ್ಥ ಮಾಡುವ ಕಾಯಕಕ್ಕೆ ಕೈ ಹಾಕಿದ್ದರು. ಇತ್ತ ಅಲ್ಪ ಸಮಯದೊಳಗೆ ಎಷ್ಟು ಸಾಧ್ಯವೊ ಅಷ್ಟು ಓವರ್ಗಳನ್ನು ಎಸೆಯುವ ನಿರ್ಧಾರದೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾಗೆ ಇಂಗ್ಲೆಂಡ್ ಬ್ಯಾಟರ್ಗಳ ನಾಟಕ ಸ್ಪಷ್ಟವಾಗಿ ತಿಳಿಯಿತು.
ಜಸ್ಪ್ರೀತ್ ಬುಮ್ರಾ ಎಸೆದ 2ನೇ ಓವರ್ನ 5ನೇ ಎಸೆತವು ಇಂಗ್ಲೆಂಡ್ ಆಟಗಾರ ಝಾಕ್ ಕ್ರಾಲಿ ಗ್ಲೌಸ್ಗೆ ತಾಗಿದೆ. ಇದನ್ನೆ ನೆಪ ಮಾಡಿಕೊಂಡ ಕ್ರಾಲಿ ಕ್ರೀಸ್ನಿಂದ ಹೊರಗೆ ನಿಂತು ನೋವಾಗುತ್ತಿದೆ ಎಂದು ನಾಟಕ ಮಾಡಲಾರಂಭಿಸಿದ್ದಾರೆ. ಇತ್ತ ಟೀಮ್ ಇಂಡಿಯಾ ಆಟಗಾರರು ಝಾಕ್ ಕ್ರಾಲಿಯ ಈ ನಾಟಕವನ್ನು ಚಪ್ಪಾಳೆ ತಟ್ಟುತ್ತಾ ಗೇಲಿ ಮಾಡಿದರು. ಅಲ್ಲದೆ ಜ್ಯಾಕ್ ಕ್ರಾಲಿ ಹಲವಾರು ಬಾರಿ ಸ್ಕ್ರೀಜ್‌ನಿಂದ ದೂರ ಸರಿದು ಸಮಯ ವ್ಯರ್ಥ ಮಾಡಿದರು. ಇದಕ್ಕೆ ಭಾರತದ ನಾಯಕ ಶುಭ್‌ಮನ್ ಗಿಲ್ ಜ್ಯಾಕ್ ಕ್ರಾಲಿಯ ಬಳಿ ಬಂದು ತಮ್ಮ ಕೋಪವನ್ನು ವ್ಯಕ್ತಪಡಿಸಲು ಕೈಯಿಂದ ಸನ್ನೆ ಮಾಡಿದರು. “ಕೊನೆಯವರೆಗೂ ಆಡುವಷ್ಟು ತಾಕತ್ತು ಪ್ರದರ್ಶಿಸು” ಎಂದು ಜಾಕ್ ಕ್ರಾಲಿಗೆ ಸವಾಲೆಸೆದರು. ಆದಾದ ನಂತರ ಇಬ್ಬರ ನಡುವೆ ಕೆಲಕ್ಷಣಗಳವರೆಗಿನ ವಾಗ್ವಾದಕ್ಕೆ ಕಾರಣವಾಯಿತು.
ಇದನ್ನು ಓದಿದ್ದೀರಾ? ಇಂಗ್ಲೆಂಡ್ ನೆಲದಲ್ಲಿ ಹೊಸ ದಾಖಲೆ ಬರೆದ ಭಾರತದ ಮಹಿಳಾ ಕ್ರಿಕೆಟ್ ತಂಡ
ಆದರೆ ಇಷ್ಟಕ್ಕೆ ಸುಮ್ಮನಾಗದ ಜ್ಯಾಕ್ ಕ್ರಾಲಿ, ಕೆಲವು ಎಸೆತಗಳ ನಂತರ ಮತ್ತೆ ಸಮಯ ವ್ಯರ್ಥ ಮಾಡುವ ತಂತ್ರಗಾರಿಕೆಗೆ ಮೊರೆ ಹೋದರು. ಡಕೆಟ್ ಜೊತೆ ಮಾತನಾಡಲು ತೆರಳಿದ ಕ್ರಾಲಿ ಅವರಿಗೆ ಭಾರತೀಯ ಆಟಗಾರರು ವ್ಯಂಗ್ಯ ಮಾಡಲು ಚಪ್ಪಾಳೆ ತಟ್ಟಿದರು. ಈ ವೇಳೆ ಮತ್ತೊಮ್ಮೆ ಕ್ರಾಲಿ ಬಳಿ ಬಂದ ಗಿಲ್, ವಾಗ್ವಾದಕ್ಕಿಳಿದರು. ಇದಾದ ಬಳಿಕ ಮತ್ತೋರ್ವ ಆಟಗಾರ ಬೆನ್ ಡಕೆಟ್ ಹಾಗೂ ಶುಭ್‌ಮನ್ ಗಿಲ್ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಮಧ್ಯಪ್ರವೇಶಿದ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ಶುಭ್‌ಮನ್ ಗಿಲ್ ಅವರ ಈ ವಾರ್ನಿಂಗ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Shubman Gill & Co. didn’t come to be played around, 𝙠𝙮𝙪𝙣𝙠𝙞 𝙔𝙚 𝙨𝙚𝙚𝙠𝙝𝙣𝙚 𝙣𝙖𝙝𝙞, 𝙨𝙞𝙠𝙝𝙖𝙣𝙚 𝙖𝙖𝙮𝙚 𝙝𝙖𝙞𝙣!#ENGvIND 👉 3rd TEST, DAY 4 | SUN 13th JULY, 2:30 PM | Streaming on JioHotstar pic.twitter.com/ix13r7vtja
— Star Sports (@StarSportsIndia) July 12, 2025