ಸ್ವಮರುಕದ ಬಲೆಯೊಳಗೆ ಸಿಲುಕಿಕೊಂಡ ಗುರುದತ್

Date:

ಒಂದು ಹಂತಕ್ಕೆ ಬಂದು ಮತ್ತೊಂದು ನೆಲೆಗೆ ಜಿಗಿಯಬೇಕಾದ ಸಂದರ್ಭದಲ್ಲಿ ಗುರುದತ್ 'ಸ್ವಮರುಕ'ದ ಆಕರ್ಷಣೆಗೆ ಬಲಿಯಾದರು. ಈ self pity ಎನ್ನುವುದರ ಬಲೆಯೊಳಗೆ ಒಮ್ಮೆ ಸಿಲುಕಿಕೊಂಡರೆ ಹೊರಗೆ ಬರುವುದು ಕಷ್ಟ. ಅದರಿಂದ ಉಂಟಾಗುವ ಸೋಲುಗಳು ಸ್ವಯಂಕೃತ.

ಗುರುದತ್ ಅವರ ಬಹು ಚರ್ಚಿತ,‌ ಅತ್ಯಂತ ಜನಪ್ರಿಯ, ಅದ್ಭುತ ಎಂದು ಕರೆಯಲ್ಪಡುವ ‘ಪ್ಯಾಸಾ’ ಮತ್ತು ‘ಕಾಗಜ್ ಕೆ ಫೂಲ್’ ವಿಷಣ್ಣತೆಯನ್ನು ಆತ್ಮವಾಗಿಸಿಕೊಂಡ ನಾರ್ಸಿಸಂ ಮನಸ್ಥಿತಿಯ ಸಿನೆಮಾಗಳು.

- Advertisement -

ಇಲ್ಲಿನ ಪ್ರೊಟಗಾನಿಸ್ಟ್ ಈ ನಾರ್ಸಿಸಂ ವ್ಯಕ್ತಿತ್ವದ ಮೂಲಕ ಇಡೀ‌ ಸಿನೆಮಾದ ತುಂಬಾ ವ್ಯಾಪಿಸಿಕೊಳ್ಳುತ್ತಾನೆ. ಸ್ವಮರುಕ(self pity) ಎನ್ನುವುದು ಆತನ ಗೀಳಾಗಿ ಪ್ರೇಕ್ಷಕರಿಗೂ ದಾಟಿಸುವಷ್ಟು ಪರಿಣಾಮಕಾರಿಯಾಗಿದೆ. ಸಾಹಿರ್ ಅವರ ಮನ ಮಿಡಿಯುವ ಸಾಹಿತ್ಯ, ಎಸ್.ಡಿ.ಬರ್ಮನ್‌ರ ಸದಾ ಕಾಡುವ ಸಂಗೀತ, ವಿ.ಕೆ. ಮೂರ್ತಿಯವರ‌ ಚಕಿತಗೊಳಿಸುವ,‌ ಪ್ರಯೋಗಾತ್ಮಕ ಸಿನಿಮಾಟೋಗ್ರಫಿ ಎಲ್ಲವೂ ನಾಯಕನ‌ ಸ್ವ‌ಮರುಕದ ವೈಭವೀಕರಣಕ್ಕೆ ಬಳಕೆಯಾಗಿದೆ. ಇಂತಹ ಶ್ರಮ, ಸಾಮರ್ಥ್ಯ‌ ಹೀಗೆ ನಾಯಕನ ‘ದೇವದಾಸಿಸಂ’ಗೆ‌ ಸಂಕುಚಿತಗೊಳ್ಳುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

‘ಪ್ಯಾಸಾ’ದಲ್ಲಿನ ಪಲಾಯನವಾದಕ್ಕೆ ಈ ಸ್ವಯಂ ಕನಿಕರ ಹೊದಿಕೆ ಹಾಕಿ ಮುಚ್ಚಿದರೆ ಈ ನಾರ್ಸಿಸಂ ಗೀಳು ‘ಕಾಗಜ್‌ ಕೆ ಫೂಲ್’ನಲ್ಲಿನ ಸ್ಥಗಿತತೆಯನ್ನು ಮುಚ್ಚುತ್ತದೆ. ಆದರೆ ‘ಪ್ಯಾಸಾ’ದಲ್ಲಿ ಪಲಾಯನವಾದವನ್ನು‌ ರೋಮ್ಯಾಂಟಿಕ್‌ಗೊಳಿಸಿ ಯಶಸ್ವಿಯಾದ ಗುರುದತ್ ‘ಕಾಗಜ್ ಕೆ ಫೂಲ್’ನಲ್ಲಿ ಸ್ಥಗಿತತೆಯನ್ನು ರೋಮ್ಯಾಂಟಿಕ್‌ಗೊಳಿಸಲು ಹೋದಾಗ ಪ್ರೇಕ್ಷಕರು ತಿರಸ್ಕರಿಸಿದ್ದಾರೆ.

ಇದನ್ನು ಓದಿದ್ದೀರಾ?: ನೂರರ ನೆನಪು | ಉತ್ಕಟ ಪ್ರೇಮದ ದುರಂತ ನಾಯಕ ಗುರುದತ್

ಆದರೆ ಈ ಗುಣಲಕ್ಷಣಗಳೇ‌ ಆ‌ ಎರಡೂ ಸಿನೆಮಾಗಳಿಗೆ ‘ಸಾರ್ವತ್ರಿಕ ಶ್ರೇಷ್ಠತೆ’ ತಂದುಕೊಟ್ಟಿರುವುದು ಕುತೂಹಲಕರ. ‘ಪ್ಯಾಸಾ’ದ‌ ಸ್ವಮರುಕವನ್ನು ಸ್ವತಃ ತಾವೂ ಅನುಭವಿಸಿ ಅಭೂತಪೂರ್ವ ಎಂಬಂತೆ ಬೆಂಬಲಿಸಿದ ಪ್ರೇಕ್ಷಕರು, ‘ಕಾಗಜ್ ಕೆ ಫೂಲ್’ನಲ್ಲಿ ಮತ್ತೆ ಮತ್ತೆ ಅದೇ ಪುನರಾವರ್ತನೆಗೊಂಡಾಗ ತಿರಸ್ಕರಿಸಿದ್ದಕ್ಕೆ ‘ಇವರಿಗೆ ಟೇಸ್ಟ್ ಇಲ್ಲ’ ಎಂದು ಟೀಕೆಗೆ ಒಳಗಾಗುತ್ತಾರೆ.

ಇದರಾಚೆಗೂ… ಪ್ರತಿಯೊಂದನ್ನೂ ದೃಶ್ಯಕಾವ್ಯವಾಗಿಸುವ ಗುರುದತ್ ಅವರ‌ ಸಾಮರ್ಥ್ಯವೂ ಚಕಿತಗೊಳಿಸುತ್ತದೆ. ಈ ನಾರ್ಸಿಸ್ಟ್ ಕೃತಿಗಳಿಗಿಂತಲೂ ಗುರುದತ್ ತನ್ನ ವೃತ್ತಿಯ‌ ಆರಂಭದಲ್ಲಿ ದೇವ್ ಆನಂದ್ ಜೊತೆಗೂಡಿ ಮಾಡಿದ ‘ಬಾಝಿ’, ‘ಜಾಲ್’ ಸಿನೆಮಾಗಳು ಮುಖ್ಯವಾಗುತ್ತವೆ. ‘noir’ ಘರಾಣಾದ‌ ಈ ಸಿನೆಮಾಗಳು ಕೇವಲ ಟೈಮ್ ಪಾಸ್ ಆಗಿರಲಿಲ್ಲ. ಮುಂದಿನ ದೃಶ್ಯಗಳಲ್ಲಿ ಏನೋ ಸಂಭವಿಸುತ್ತದೆ ಎಂದು ಪ್ರೇಕ್ಷಕರನ್ನು ಕಾಯಿಸುವ ಶೈಲಿಯ ಈ‌ ಸಿನೆಮಾಗಳ ಪ್ರೊಟಗಾನಿಸ್ಟ್, ಬದುಕನ್ನು ಅರಸಿ ನಗರಕ್ಕೆ ಬಂದವ, ಅದರ ಸುಳಿಗಳ‌ ಆಳ,‌ ಅಗಲ‌ ಗೊತ್ತಾಗದೆ ಆ‌ ತಿರುಗಣಿಯಲ್ಲಿ ಸಿಕ್ಕಿಕೊಂಡು ಸುಳಿ‌ ಸುತ್ತುತ್ತಾ ಹೋಗುತ್ತಾನೆ.‌ ಇದನ್ನು noir ಶೈಲಿಯಲ್ಲಿ ನಿರೂಪಿಸಿರುವುದು‌ ಅದರ ವೈಶಿಷ್ಟತೆ. ನಿರ್ದಯಿ ಕ್ರಿಮಿನಲ್‌ಗಳು,‌ ಅಪರಾಧ ಜಗತ್ತು,‌ ಭ್ರಷ್ಟ ಪೊಲೀಸರು ಮತ್ತು ಅಸಹಾಯಕ ನಾಯಕನನ್ನು ಒಳಗೊಂಡ ಈ ಕಥನವನ್ನು ಕತ್ತಲು-ಬೆಳಕಿನ ಆಟದಲ್ಲಿ ನಿರೂಪಿಸಿರುವುದು ಈ ಸಿನೆಮಾಗಳ ಶಕ್ತಿ.

hq720 15
ಪ್ಯಾಸಾ ಚಿತ್ರ

‘ಬಾಝಿ’ ಸಿನೆಮಾದಲ್ಲಿ ‌ಸಾಹಿರ್ ಬರೆದ ಗೀತಾ ಬಾಲಿ ಅಭಿನಯಿಸಿ ಗೀತಾ ದತ್ ಹಾಡಿರುವ ‘ತದಬೀರ್ ಸೆ ಬಿಗಡೀ‌‌ ಹುಯಿ ತಕದೀರ್ ಬನಾಲೆ'(ದುರದೃಷ್ಟದಿಂದ ಕಳೆದುಕೊಂಡಿರುವುದನ್ನು ಪರಿಶ್ರಮದ ಮೂಲಕ ಗಳಿಸು) ಒಂದು ಕಲ್ಟ್. ಈ ಸಿನೆಮಾಗಳ ಕಥನದ ಅತಿ‌ ಎನಿಸುವ darkness ಅನ್ನು ಮುಂದೆ ‘ಆರ್ ಪಾರ್’, ‘ಸಿಐಡಿ'(ನಿರ್ದೇಶಕ: ರಾಜ್ ಖೋಸ್ಲಾ) ಸಿನೆಮಾಗಳಲ್ಲಿ ತಿಳಿಗೊಳಿಸಿ ಹಾಸ್ಯವನ್ನು ಲೇಪಿಸಿದರು.

ಎಲ್ಲವೂ ಒಂದು ಹಂತಕ್ಕೆ ಬಂದು ಮತ್ತೊಂದು ನೆಲೆಗೆ ಜಿಗಿಯಬೇಕಾದ ಸಂದರ್ಭದಲ್ಲಿ ಗುರುದತ್ ಸ್ವಮರುಕ ಆಕರ್ಷಣೆಗೆ ಬಲಿಯಾದರು. ಈ self pity ಎನ್ನುವುದರ ಬಲೆಯೊಳಗೆ ಒಮ್ಮೆ ಸಿಲುಕಿಕೊಂಡರೆ ಹೊರಗೆ ಬರುವುದು ಕಷ್ಟ. ಅದರಿಂದ ಉಂಟಾಗುವ ಸೋಲುಗಳು ಸ್ವಯಂಕೃತ. ಇದಕ್ಕೆ ಪ್ರೇಕ್ಷಕರನ್ನು ದೂಷಿಸುವುದು ಅರ್ಥಹೀನ.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ ಅಪರೂಪದ ಕಲಾವಿದ

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ ಪಿಳ್ಳೈ ಮುಡಿಗೇರಿದ ನೊಬೆಲ್ ಶಾಂತಿ ಪುರಸ್ಕಾರ!

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ ಕೆಫೆ’: 44 ಲಕ್ಷ ರೂ. ವಹಿವಾಟು!

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ...