ಜಯದೇವ ಪಿಸಿಎಡಿ ವರದಿ ಬಹಿರಂಗ: ಹಾಸನದ ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು?

Date:

Advertisements

ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿರುವವರಲ್ಲಿ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು ಕಾರ್ಡಿಯೋವಾಸ್ಕುಲರ್ ಡಿಸೀಸ್(ಹೃದಯರಕ್ತನಾಳೀಯ ಕಾಯಿಲೆ)ಗೆ ಗುರಿಯಾಗುವ ಸಾಧ್ಯತೆ ಹೊಸ ಪ್ರವೃತ್ತಿಯಲ್ಲ. ಆದರೆ ಮಧುಮೇಹ, ಮದ್ಯಪಾನ ಮತ್ತು ಕುಟುಂಬದ ಹಿನ್ನೆಲೆಯ ಕಾರಣದಿಂದ ಅಧಿಕ ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆಂದು ಶ್ರೀ ಜಯದೇವ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್‌ನ ಸಂಶೋಧನೆಯ ವರದಿ ಆಧಾರದ ಮೇಲೆ ವೈದ್ಯರು ಹೇಳುತ್ತಾರೆ.

2024ರಲ್ಲಿ ಹೃದಯಾಘಾತದಿಂದ 24 ಜನರು ಮೃತಪಟ್ಟಿದ್ದಾರೆ. ಪ್ರಸ್ತುತ ವರ್ಷ 20 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗುತ್ತಿರುವುದು ಗಂಭೀರ ವಿಚಾರವಾಗಿದೆ. ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದಕ್ಕೆ ಅತಿಯಾದ ಬೊಜ್ಜು ಕಾರಣ ಎಂಬುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದ ಸಾವುಗಳ ಹೆಚ್ಚಳವನ್ನು ತನಿಖೆ ಮಾಡಿದ ತಜ್ಞರ ಸಮಿತಿಯ ನೇತೃತ್ವ ವಹಿಸಿದ್ದ ಸರ್ಕಾರಿ ಜಯದೇವ ಹೃದಯನಾಳೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ ಎಸ್ ರವೀಂದ್ರನಾಥ್ ಮಾತನಾಡಿ, “40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.24ರಷ್ಟು ಪ್ರಕರಣಗಳಲ್ಲಿ 6(25%)ರಷ್ಟು ಮಂದಿ ಆಟೋರಿಕ್ಷಾ ಅಥವಾ ಕ್ಯಾಬ್ ಚಾಲಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆ.‌ ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಹಿಂದಿನ ಅಧ್ಯಯನಗಳಲ್ಲಿಯೂ ಇದನ್ನು ಗುರುತಿಸಲಾಗಿದೆ” ಎಂದು ಹೇಳಿದರು.

Advertisements

“ಜಯದೇವದಲ್ಲಿ ನಿರ್ವಹಿಸಲಾಗುತ್ತಿರುವ Premature coronary artery disease(PCAD) ನೋಂದಣಿಯ ದತ್ತಾಂಶವು 2017 ರಿಂದ ಇಲ್ಲಿಯವರೆಗೆ ಪರೀಕ್ಷಿಸಲ್ಪಟ್ಟ 4,020 ಹೃದಯಾಘಾತ ರೋಗಿಗಳಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಶೇ.24.25% (975) ಚಾಲಕರು ಎಂಬ ಅಂಶಗಳು ಹೊರಬಂದಿವೆ”

ಈ 975 ಚಾಲಕರಲ್ಲಿ ಶೇ.72.9ರಷ್ಟು ಜನರು ಧೂಮಪಾನಿಗಳಾಗಿದ್ದರೆ. ಶೇ. 7.10ರಷ್ಟು ಜನರು ಮಧುಮೇಹ, ಶೇ. 8.3 ರಷ್ಟು ಜನರು ಅಧಿಕ ರಕ್ತದೊತ್ತಡ, ಶೇ.10.5ರಷ್ಟು ಜನರು ಬೊಜ್ಜು ಮತ್ತು ಶೇ.13.7ರಷ್ಟು ಜನರು ಕುಟುಂಬದ ಅನುವಂಶೀಯವಾಗಿ ಹೃದಯಾಘಾತದಿಂದ ಬಳಲುತ್ತಿದ್ದಾರೆ ಎಂಬ ಇತಿಹಾಸಗಳಿವೆ.

ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ಗುರಿಯಾಗುವ ಗುಂಪಿನಂತೆ ಹೊರಹೊಮ್ಮುತ್ತಿದ್ದಾರೆ. ವೃತ್ತಿಪರ ಒತ್ತಡ ಮತ್ತು ಜೀವನಶೈಲಿಯ ಅಪಾಯಕಾರಿ ಅಂಶಗಳ ಸಂಯೋಜನೆಯೇ ಈ ಆತಂಕಕಾರಿ ಪ್ರವೃತ್ತಿಗೆ ಕಾರಣ ಎಂದು ಡಾ. ರವೀಂದ್ರನಾಥ್ ಹೇಳಿದರು.

“ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಕ್ಕೆ ದೀರ್ಘಕಾಲದವರೆಗೆ ಒಳಗಾಗುವುದು ಮತ್ತು ಸಂಚಾರ ದಟ್ಟಣೆಯ ಮೂಲಕ ವಾಹನ ಚಲಾಯಿಸುವುದು ಒತ್ತಡದಾಯಕವಾಗಿದ್ದರೂ, ದೀರ್ಘ ಕೆಲಸದ ಸಮಯ ಮತ್ತು ದೀರ್ಘಕಾಲ ಕುಳಿತುಕೊಳ್ಳುವುದು, ಅನಿಯಮಿತ ಆಹಾರ ಪದ್ಧತಿ, ಹೆಚ್ಚಾಗಿ ರಸ್ತೆಬದಿಯ, ಸಂಸ್ಕರಿಸಿದ ಆಹಾರಗಳ ಮೇಲೆ ಅವಲಂಬಿತವಾಗಿರುವುದು, ಸಪರ್ಪಕವಾದ ನಿದ್ರೆ ಮಾಡದಿರುವುದು ಮತ್ತು ಹೆಚ್ಚಿನ ಪ್ರಮಾಣದ ಧೂಮಪಾನ, ಮದ್ಯಪಾನ ಮಾಡುವುದರಿಂದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ” ಡಾ. ರವೀಂದ್ರನಾಥ್ ಮಾಹಿತಿ ನೀಡಿದ್ದಾರೆ.

“ಬೃಹತ್ ಬೆಂಗಳೂರು ಮಹಾನಗರ‌ ಪಾಲಿಕೆ(ಬಿಎಂಟಿಸಿ) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಚಾಲಕರಲ್ಲಿಯೂ ಕೂಡ ಇದೇ ರೀತಿಯ ಪ್ರವೃತ್ತಿಗಳು ಕಂಡುಬಂದಿವೆ. ಅವರು 2022ರಿಂದ ಸಂಸ್ಥೆಯಲ್ಲಿ ಬ್ಯಾಚ್‌ಗಳಲ್ಲಿ ತಪಾಸಣೆಗೆ ಒಳಗಾಗುತ್ತಿದ್ದಾರೆ” ಎಂದು ಡಾ. ರವೀಂದ್ರನಾಥ್ ಹೇಳಿದರು.

“2022ರ ಆಗಸ್ಟ್ 10ರಿಂದ ಈವರೆಗೆ ಸಂಸ್ಥೆಯಲ್ಲಿ 7,635 ಮಂದಿ ಉದ್ಯೋಗಿಗಳ ವಿಶ್ಲೇಷಣೆಯನ್ನು ಮೌಲ್ಯಮಾಪನ ಮಾಡಿದ್ದು, ಅವರಲ್ಲಿ ಹೆಚ್ಚಿನವರು 45 ರಿಂದ 60 ವರ್ಷದ ಶೇ. 40ರಷ್ಟು ಚಾಲಕರು ಹೃದಯರಕ್ತನಾಳದ ಕಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ಇದಲ್ಲದೆ, ಅವರಲ್ಲಿ ಸುಮಾರು ಶೇ.4ರಷ್ಟು ಜನರಿಗೆ ಈ ಮೊದಲೇ ಹೃದಯ ಕಾಯಿಲೆ ಇರುವುದಾಗಿ ತಿಳಿದುಬಂದಿದೆ” ಎಂದು ವೈದ್ಯರು ಹೇಳಿದರು.

“ಸ್ಕ್ರೀನ್ ಮಾಡಲಾದ ಚಾಲಕರಲ್ಲಿ ಶೇ.27ರಷ್ಟು ಜನರು ಮಧುಮೇಹ, ಶೇ.25ರಷ್ಟು ಅಧಿಕ ರಕ್ತದೊತ್ತಡ, ಶೇ.62ರಷ್ಟು ಜನರು ಬೊಜ್ಜು ಮತ್ತು ಸುಮಾರು ಶೇ.1ರಷ್ಟು ಜನರು ಕೌಟುಂಬಿಕ ಇತಿಹಾಸವನ್ನು ಹೊಂದಿದ್ದಾರೆಂದು ನಮ್ಮ ದತ್ತಾಂಶ ತೋರಿಸುತ್ತದೆ. ಶೇ.22ರಷ್ಟು ಜನರು ಧೂಮಪಾನಿಗಳಾಗಿದ್ದರೆ, ಶೇ.25ರಷ್ಟು ಜನರು ಮದ್ಯ ಸೇವಿಸುತ್ತಿದ್ದಾರೆ” ಎಂದು ಹೇಳಿದರು.

ಅದೇ ರೀತಿ, ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 10,000 ಮಂದಿ ಕೆಎಸ್‌ಆರ್‌ಟಿಸಿ ಉದ್ಯೋಗಿಗಳನ್ನು ಪರೀಕ್ಷಿಸಲಾಗಿದೆ.

“ಇವರಲ್ಲಿ ಸುಮಾರು ಶೇ.50ರಷ್ಟು ಚಾಲಕರು ಮತ್ತು ಅಪಾಯಕಾರಿ ಅಂಶಗಳ ಶೇಕಡಾವಾರು ಪ್ರಮಾಣವು BMTC ಚಾಲಕರಂತೆಯೇ ಇರುತ್ತದೆ. ಆದಾಗ್ಯೂ, BMTC ಚಾಲಕರಿಗೆ ಹೋಲಿಸಿದರೆ KSRTC ಚಾಲಕರಲ್ಲಿ ಧೂಮಪಾನದ ಅಭ್ಯಾಸವು ತುಲನಾತ್ಮಕವಾಗಿ ಕಡಿಮೆ ಸಾಮಾನ್ಯವಾಗಿದೆ. ಏಕೆಂದರೆ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು ದೂರದ ಪ್ರಯಾಣಗಳನ್ನು ನಡೆಸುತ್ತಾರೆ. ಆದ್ದರಿಂದ ಧೂಮಪಾನ ಕಡಿಮೆಯಾಗಿದೆ” ಎಂದು ಡಾ. ರವೀಂದ್ರನಾಥ್ ಹೇಳಿದರು.

ಹೆಚ್ಚಿನ ಅಪಾಯ

ಜಯದೇವ ಮಾಜಿ ನಿರ್ದೇಶಕ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಸಿ ಎನ್ ಮಂಜುನಾಥ್ ಅವರ ಅಧಿಕಾರಾವಧಿಯಲ್ಲಿ BMTC ತನ್ನ ಉದ್ಯೋಗಿಗಳನ್ನು ಪರೀಕ್ಷಿಸಲು ಹೃದಯ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಅವರಲ್ಲಿ ಸುಮಾರು ಶೇ.40ರಷ್ಟು ಜನರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಇರುವುದರಿಂದ, ಅವರ ಭವಿಷ್ಯದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಹೆಚ್ಚು ಎಂದು ತಿಳಿದುಬಂದಿತ್ತು.

“ಈ ಉದ್ಯೋಗಿಗಳು ಆರಂಭಿಕ ಹಂತದಲ್ಲಿಯೇ ಹೃದಯಾಘಾತ ತಡೆಗಟ್ಟಲು ಕಡ್ಡಾಯವಾಗಿ ನಿರಂತರ ಮತ್ತು ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಮಾಡಿಸುವುದು ಅತ್ಯಗತ್ಯವಾಗಿದೆ. ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟಲು ಸರಿಯಾದ ಮತ್ತು ಆರಂಭಿಕ ಅಪಾಯಕಾರಿ ಅಂಶ ಹಾಗೂ ಜೀವನಶೈಲಿ ನಿರ್ವಹಣೆ ಮಾಡುವುದು ಮುಖ್ಯವಾಗಿದೆ” ಎಂದು ಡಾ. ಸಿ ಎನ್ ಮಂಜುನಾಥ್ ಹೇಳಿರುವುದು ವರದಿಯಾಗಿದೆ.

ಇದನ್ನೂ ಓದಿದ್ದೀರಾ? ಮೋದಿಯ ʼಪರೀಕ್ಷಾ ಪೆ ಚರ್ಚಾʼದ ವೆಚ್ಚ ಶೇ.522ರಷ್ಟು ಏರಿಕೆ: ಮಕ್ಕಳ ವಿದ್ಯಾರ್ಥಿವೇತನ ಸ್ಥಗಿತ

“ಹೆಚ್ಚಿನ ಉದ್ಯೋಗಿಗಳು ಈ ಮೊದಲು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳದಿರುವುದರಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ರೋಗಗಳಿರುವುದನ್ನು ಕಂಡು ಆಶ್ಚರ್ಯಚಕಿತರಾದರು. ಅವರ ಕೆಲಸದ ಸ್ವರೂಪದಿಂದಾಗಿ, ಅವರ ಒತ್ತಡದ ಮಟ್ಟಗಳು ಹೆಚ್ಚಿರುತ್ತವೆ. ಅವರಿಗೆ ವ್ಯಾಯಾಮ ಮಾಡಲು ಸಮಯವಿಲ್ಲ ಮತ್ತು ನಿರಂತರ ಚಾಲನೆ, ಅತಿಯಾದ ಕೆಲಸ ಮತ್ತು ರಾತ್ರಿ ಪಾಳಿ ಕೆಲಸಗಳಿಂದಾಗಿ ಅವರ ಆಹಾರ ಪದ್ಧತಿಗಳು ಅನಿಯಮಿತವಾಗಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರ ಕೆಲಸದ ಸಮಯದಲ್ಲಿ ಎಂಜಿನ್ ಮತ್ತು ವಾತಾವರಣದಿಂದ ಮಾಲಿನ್ಯಕ್ಕೆ ಸಿಲುಕಿವುದು ತುಂಬಾ ಅಪಾಯಕಾರಿ” ಎಂದು ಅವರು ವಿವರಿಸಿದರು.

ತಪಾಸಣೆಯ ಅಗತ್ಯ

ಆಟೋ ಮತ್ತು ಕ್ಯಾಬ್ ಚಾಲಕರಿಗೆ ಆರೋಗ್ಯ ತಪಾಸಣೆಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.

“ಈ ಆತಂಕಕಾರಿ ಪ್ರವೃತ್ತಿಯನ್ನು ನಾವು ಚಾಲಕರ ಸಂಘದೊಂದಿಗೆ ಚರ್ಚಿಸುತ್ತೇವೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ಅವರ ಆರೋಗ್ಯ ತಪಾಸಣೆ ಪ್ರಾರಂಭಿಸುತ್ತೇವೆ” ಎಂದು ಸಚಿವರು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X