ಪುತ್ತೂರು ಶಾಸಕ ಅಶೋಕ್ ರೈ ಅವರ ಕನಸಿನ ಕೂಸು ಪುತ್ತೂರು-ಮಂಗಳೂರು ತಡೆರಹಿತ(ನಾನ್ ಸ್ಟಾಪ್) ಎಕ್ಸ್‌ಪ್ರೆಸ್ ಬಸ್ ಸಂಚಾರ ಜುಲೈ 14ರಂದು ಪ್ರಾರಂಭಗೊಳ್ಳಲಿದೆ.
ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್ ಎಲ್ಲೂ ನಿಲುಗಡೆಯಾಗದೆ ನೇರವಾಗಿ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ತಲುಪಲಿದೆ. ಪ್ರತಿ ಒಂದು ಗಂಟೆಗೊಂದು ಬಸ್ ಹೊರಡಲಿದೆ. ಮಹಿಳೆಯರು ಈ ಬಸ್‌ನಲ್ಲಿ ಶಕ್ತಿ ಯೋಜನೆಯನುಸಾರ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ನಾಳೆ ಬೆಳಿಗ್ಗೆ 11ಕ್ಕೆ ನೂತನ ಬಸ್ ವ್ಯವಸ್ಥೆಗೆ ಶಾಸಕರು ಚಾಲನೆ ನೀಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಕಾರು ಅಪಘಾತ: ಮಂಡ್ಯದ ಮೂವರ ಸಾವು

ಸುಮಾರು ಒಂದು ಗಂಟೆ ಅವಧಿಯಲ್ಲಿ ಬಸ್ ಪುತ್ತೂರಿನಿಂದ ಮಂಗಳೂರು ತಲುಪಲಿದೆ. ಸ್ವಂತ ವಾಹನ ಇದ್ದವರೂ ಈ ಬಸ್ಸಲ್ಲಿ ತೆರಳಬಹುದಾಗಿದೆ. ಯಾಕೆಂದರೆ ಅತಿ ವೇಗದಲ್ಲಿ ಈ ಬಸ್ಸು ಸಂಚರಿಸುವ ಕಾರಣ ಸ್ವಂತ ವಾಹನದಷ್ಟೇ ಸಮಯದಲ್ಲಿ ಮಂಗಳೂರು ತಲುಪಬಹುದು. ಹೊಸ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಯಾಣಿಸುವ ಮೂಲಕ ಸಹಕಾರ ನೀಡಿ ಸರ್ಕಾರಿ ವ್ಯವಸ್ಥೆಗೆ ಬೆಂಬಲ ನೀಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಕೋರಿದ್ದಾರೆ.