ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ಮಹಿಳೆಯೊಬ್ಬರು ನಿಷೇಧಿತ ಮಾದಕವಸ್ತು ಎಂಡಿಎಂಎ ಸರಬರಾಜು ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸರು ಮತ್ತು ಎಸ್‌ಎಎಫ್(ಸ್ಪೆಷಲ್ ಆಕ್ಷನ್ ಫೋರ್ಸ್) ತಂಡ ಜಂಟಿಯಾಗಿ ದಾಳಿ ನಡೆಸಿ, ತೀವ್ರ ತಪಾಸಣೆ ನಡೆಸಿದೆ.
ಜುಲೈ 10ರಂದು ರಮ್‌ಸೋನಾ ಎಂಬ ಮಹಿಳೆಯು ಬೇಕರಿ ತಿಂಡಿಗಳ ಪ್ಯಾಕೆಟ್‌ನಲ್ಲಿ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿದ 5 ಸಣ್ಣ ಪೊಟ್ಟಣಗಳನ್ನು ವಿಚಾರಣಾಧೀನ ಕೈದಿ ಮುಹಮ್ಮದ್ ಅಸ್ಕರ್ ಎಂಬಾತನಿಗೆ ನೀಡಲು ತಂದಿದ್ದಳು ಎನ್ನಲಾಗಿದೆ. ಜೈಲಿನ ಸಿಬ್ಬಂದಿ ತಿಂಡಿಯ ಪ್ಯಾಕೆಟ್‌ಗಳನ್ನು ಪರಿಶೀಲನೆ ನಡೆಸುವ ವೇಳೆ ಮಾದಕ ವಸ್ತುಗಳ ಪ್ಯಾಕೆಟ್‌ಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: ಮಂಗಳೂರು | ಶಕ್ತಿ ಯೋಜನೆ ರಾಜ್ಯ ಸರ್ಕಾರದ ಹೊಸ ಮೈಲಿಗಲ್ಲು: ಐವನ್ ಡಿಸೋಜಾ
ಈ ಸಂಬಂಧ ಜೈಲಿಗೆ ಮಾದಕ ವಸ್ತುಗಳನ್ನು ತಂದಿದ್ದ ಮಹಿಳೆಯ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆ ಮಹಿಳೆಯನ್ನು ಬಂಧಿಸಲಾಗಿದೆ. ಜೈಲಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಜೈಲಿನ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.