ʼಕನ್ನಡ ಸಿನಿಮಾಗಳಲ್ಲಿ ತಳಸಮುದಾಯಗಳ ಪ್ರತಿನಿಧೀಕರಣದ ನೆಲೆಗಳು’ ಎಂಬ ವಿಷಯ ಕುರಿತು ಪ್ರೌಢಪ್ರಬಂಧ ಮಂಡಿಸಿದ ಲೇಖಕ ಹಾಗೂ ಪತ್ರಕರ್ತ ಕೆ ಮುರುಳಿ ಮೋಹನ್ ಅವರಿಗೆ ತುಮಕೂರು ನಗರದ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಸಂದಿದೆ.
ನಿವೃತ್ತ ಪ್ರಾಧ್ಯಾಪಕ ಡಾ ಎಚ್ ಟಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನ ಹಾಗೂ ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿರುವ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ಡಾ. ಬಿ ಟಿ ಮುದ್ದೇಶ್ ಅವರ ಸಹ ಮಾರ್ಗದರ್ಶನದಲ್ಲಿ ಪತ್ರಕರ್ತ ಕೆ ಮುರುಳಿ ಮೋಹನ್ ಅವರು ‘ʼಕನ್ನಡ ಸಿನಿಮಾಗಳಲ್ಲಿ ತಳಸಮುದಾಯಗಳ ಪ್ರತಿನಿಧೀಕರಣದ ನೆಲೆಗಳು’ ಎಂಬ ವಿಷಯ ಕುರಿತು ಸಂಶೋಧನೆ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಸಂದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನವರಾದ ಕೆ ಮುರುಳಿ ಮೋಹನ್ ಅವರು ಎಂಎಸ್‌ಸಿ, ಎಲೆಕ್ಟ್ರಾನಿಕ್ ಮೀಡಿಯಾ ಮುಗಿಸಿದ್ದಾರೆ. ಪತ್ರಕರ್ತರಾಗಿ, ರಂಗ ನಟರಾಗಿ, ಸಾಕ್ಷ್ಯಚಿತ್ರ ನೀದೇರ್ಶಕರಾಗಿ, ಸಿನಿಮಾಟೋಗ್ರಫರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಬೆಂಗಳೂರಿನ ಸಂವಾದ-ಬದುಕು ಸೆಂಟರ್ ಫಾರ್ ಲೈವ್ಲಿಹುಡ್ ಲರ್ನಿಂಗ್ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ಅಧಿಕಾರಿಗಳ ಸಮನ್ವಯತೆ ಕೊರತೆ; ಜೆಜೆಎಂ ಸಭೆಯಲ್ಲಿ ಬಹಿರಂಗ
ಕೆ ಮುರುಳಿ ಮೋಹನ್ ಕರ್ನಾಟಕದ ಹಲವು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾವ್ಯ, ಲೇಖನ, ಪತ್ರಿಕಾ ಬರವಣಿಗೆ ಒಳಗೊಂಡ ಮೂರು ಕೃತಿಗಳು ಪ್ರಕಟಗೊಂಡಿವೆ. ಸಮಾಜದ ಜ್ವಂಲತ ಸಮಸ್ಯೆಗಳು, ಸಾಮಾಜಿಕ ಹೋರಾಟಗಳು, ಪರಿಸರ ವಿಚಾರ, ಮಾನವ ಹಕ್ಕುಗಳ ಕುರಿತು ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಜತೆಗೆ ಕರ್ನಾಟಕದ ಹಲವು ಜನಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಪರಿಸರ ಸಂಘಟನೆಗಳೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.