ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಜುಲೈ 18 ಶುಕ್ರವಾರದಂದು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ 16ನೇ ಪಟ್ಟಾಭಿಷೇಕ ಮಹೋತ್ಸವ, 27ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವ ನಿಮಿತ್ತ ಪ್ರತಿಭಾ ಪುರಸ್ಕಾರ, ವಧುವರರ ಸಮಾವೇಶ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದು ದಾವಣಗೆರೆ ಜಿಲ್ಲೆಯ ಭೋವಿ ಗುರುಪೀಠದ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಮಾಜದ ಮುಖಂಡ ಹೆಚ್ ಜಯಣ್ಣ ಕರೆ ನೀಡಿದರು.
ದಾವಣಗೆರೆ ನಗರದ ವೆಂಕಾಭೋವಿ ಕಾಲೋನಿಯ ಸಿದ್ಧರಾಮೇಶ್ವರ ಮಠದಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ನೇತೃತ್ವದಲ್ಲಿ ಜಿಲ್ಲಾ ಮಟ್ಚದ ಪೂರ್ವಭಾವಿ ಸಭೆ ನಡೆಸಲಾಯಿತು. ಮುಖಂಡ ಬಿ.ಟಿ.ಸಿದ್ಧಪ್ಪ ಮಾತನಾಡಿ “ಶ್ರೀಗಳ ಜನ್ಮಕ್ಷೇತ್ರ ದಾವಣಗೆರೆ. ಅವರ ಪ್ರಭಾವಳಿ ರಾಜ್ಯ ದೇಶಾದ್ಯಾಂತ ಹಬ್ಬಿದೆ. ಸಮಾಜದ ಲೋಪದೋಷಗಳನ್ನು ಮರೆತು ಸಮಾಜ ನೆರವೇರಿಸುವ ಚಿತ್ರದುರ್ಗದ ಭೋವಿ ಜನೋತ್ಸವ, ದಾವಣಗೆರೆಯ ಸಿದ್ಧರಾಮೇಶ್ವರ ರಥೋತ್ಸವ ಅರ್ಥಪೂರ್ಣವಾಗಿ ಆಚರಿಸೋಣ” ಎಂದು ತಿಳಿಸಿದರು.

ಮಹಾನಗರಪಾಲಿಕೆ ಸದಸ್ಯರಾದ ಶಿವಾನಂದ ಮಾತನಾಡಿ “ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸರ್ವಸಮುದಾಯಗಳೊಂದಿಗೆ, ಸರ್ವಸಮುದಾಯದ ಶ್ರೀಗಳೊಂದಿಗೆ ಸರ್ವ ಪಕ್ಷಗಳೊಂದಿಗೆ ಸಮನ್ವಯ ಕಾಪಾಡಿಕೊಂಡ ಸಂತರಾಗಿದ್ದಾರೆ. ಈ ಕಾರಣದಿಂದ ಯಾವುದೇ ಪಕ್ಷದ ಸರ್ಕಾರವಿದ್ದರು ಭೋವಿ ಸಮಾಜದ ಕಾರ್ಯಗಳು ಸರಾಗವಾಗಿ ನೆರವೇರುತ್ತಿದೆ. ಶ್ರೀಗಳ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯವಾಗಿ ಸೂಕ್ತ ಮಾರ್ಗದರ್ಶನದಿಂದ ಭೋವಿ ಸಮಾಜ ಮುನ್ನೆಲೆಗೆ ಬರುತ್ತಿದೆ” ಎಂದರು.
ನಿವೃತ್ತ ಅಭಿಯಂತರರಾದ ವೆಂಕಟೇಶ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳುನ್ನು ಒಬ್ಬ ಬಂಡವಾಳಶಾಹಿ ನಡೆಸಬಹುದು. ಆದರೆ ಆಣೆ ದುಗ್ಗಾಣೆ ಸೇರಿಸಿಕೊಂಡು ಎಲ್ಲರು ಕೈಜೊಡಿಸಿದಾಗ ಸಾರ್ವಜನಿಕ ಸಮಾರಂಭವಾಗುತ್ತದೆ. ಹಾಗಾಗಿ ಜಿಲ್ಲೆಯ ಪ್ರತಿಯೊಬ್ಬ ಭೋವಿ ಸಮಾಜದ ಬಾಂಧವರು ತನು ಮನ ಧನ ಸಹಕಾರ ನೀಡಬೇಕು” ಎಂದು ವಿನಂತಿಸಿದರು.
ಜಿ.ಪಂ.ಮಾಜಿ ಸದಸ್ಯ ಹರಿಹರ ವೀರಭದ್ರಪ್ಪ ಮಾತನಾಡಿ “ಅಧಿಕಾರ ಶಾಶ್ವತವಲ್ಲ. ನಾವು ಮಾಡುವ ಕಾರ್ಯ ಶಾಶ್ವತ. ಸಮಾಜ ಒಗ್ಗಟಿನ ಮಂತ್ರ ಜಪಿಸಬೇಕು. ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ನಮ್ಮ ಸಮಾಜದ ಹೆಮ್ಮೆಯಾಗಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬುದ್ಧ ಬಸವ ಅಂಬೇಡ್ಕರರಂತೆ ಪ್ರಜ್ಞೆ, ಕರುಣೆ ಬೆಳೆಸಿಕೊಳ್ಳಬೇಕು; ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು
ಪೂರ್ವಭಾವಿ ಸಭೆಯಲ್ಲಿ ಎಪಿಎಂಸಿ ಮಾಜಿ ಸದಸ್ಯ ಪುಟ್ಟಣ್ಣ, ವಕೀಲ ಗೋಪಾಲ, ಶ್ರೀನಿವಾಸ, ಎ.ಬಿ.ನಾಗರಾಜ, ಶ್ರೀಮತಿ ಉಮಾ ಕುಮಾರ, ಗರಗ ರಾಜಪ್ಪ, ಹರಿಹರ, ಹೊನ್ನಾಳ್ಳಿ, ಜಗಳೂರು, ಚನ್ನಗಿರಿ, ಮಾಯಕೊಂಡ ಕ್ಷೇತ್ರಗಳ ಸಮಾಜದ ಮುಖಂಡರು ಉಪಸ್ಥಿತರಿದ್ದರು.