ಶಿವಮೊಗ್ಗ, ಸಿಗಂದೂರಿನಲ್ಲಿರುವ ಎರಡು ಲಾಂಚ್‌ಗಳನ್ನು ತೇಲುವ ಹೋಟೆಲ್‌ಗಳಾಗಿ ಪರಿವರ್ತಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಹೇಳಿದರು.
ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಸೇತುವೆ ಉದ್ಘಾಟನೆಯಾದ ನಂತರ ಲಾಂಚ್‌ಗಳು ಮೂಲೆಗುಂಪಾಗುತ್ತವೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ನಾವು ಆ ಲಾಂಚ್‌ಗಳನ್ನು ಹೋಟೆಲ್‌ಗಳಾಗಿ ಪರಿವರ್ತಿಸುವ ಕುರಿತು ಯೋಜನೆ ರೂಪಿಸಿದ್ದೇವೆ” ಎಂದು ಗೋಪಾಲಕೃಷ್ಣ ತಿಳಿಸಿದರು.
ಈ ತೇಲುವ ಹೋಟೆಲ್‌ಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ಎರಡು ಬೋಟ್‌ಗಳನ್ನು ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರು ಬೋಟ್‌ಗಳ ಮೂಲಕ ಸುತ್ತಾಡಿ ನಂತರ ಈ ಹೋಟೆಲ್‌ಗಳಿಗೆ ಬರಬಹುದು.
ಇಲ್ಲಿ ಪಾನಿಪೂರಿ, ಭೇಲ್ ಪೂರಿ ಸೇರಿದಂತೆ ವಿವಿಧ ಬಗೆಯ ತಿನಿಸುಗಳು ಲಭ್ಯವಿರಲಿವೆ. ಆದರೆ, ಮದ್ಯಪಾನ ಅಥವಾ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಯೋಜನೆಗೆ ಪ್ರವಾಸೋದ್ಯಮ ಎಚ್.ಕೆ. ಪಾಟೀಲ್ ಅವರು ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಈ ಹಿಂದೆ ಲಾಂಚ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಿಗೂ ಈ ಹೊಸ ಯೋಜನೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.