ಮಂಗಳೂರು ನಗರದ ಕೊಡಿಯಾಲ ಬೈಲಿನ ಜಿಲ್ಲಾಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಇತರೆ ಕೈದಿಗಳು ಬೆದರಿಕೆ ಹಾಕಿ ಫೋನ್ ಪೇ ಮೂಲಕ ರೂ.20 ಸಾವಿರ ವರ್ಗಾಯಿಸಿಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಳ್ಳಾಲ ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಿಥುನ್ ಎಂಬಾತ ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಸೇರಿದ್ದಾನೆ. ಹೊರಗಿನ ದ್ವೇಷಕ್ಕೆ ಸಂಬಂಧಿಸಿ ವಿಚಾರಣಾಧೀನ ಕೈದಿಗಳಾದ ಧನುಷ್ ಭಂಡಾರಿ, ಸಚಿನ್ ತಲಪಾಡಿ ಕೊಠಡಿ 5ರಲ್ಲಿ ಬಂಧಿಯಾಗಿರುವ ದಿಲೇಶ್ ಮತ್ತು ಲಾಯಿ ವೇಗಸ್‌ಗೆ ಮಿಥುನ್ ಮೇಲೆ ಹಲ್ಲೆ ಮಾಡುವಂತೆ ಸೂಚನೆ ನೀಡಿರುತ್ತಾರೆ.
ಇದನ್ನೂ ಓದಿ: ಕೇಂದ್ರದಿಂದ ಮಂಗಳೂರಿಗೆ 100 ಎಲೆಕ್ಟ್ರಿಕ್ ಬಸ್: ಸಂಸದ ಕ್ಯಾ.ಬ್ರಿಜೇಶ್ ಚೌಟ
ಜು.9ರಂದು ಕಾರಾಗೃಹದ ಸಿಬಂದಿಗಳ ಕಣ್ಣು ತಪ್ಪಿಸಿ ಮಿಥುನ್ ಮೇಲೆ ಹಲ್ಲೆ ನಡೆಸಿ ರೂ. 50 ಸಾವಿರ ನೀಡಬೇಕು ಇಲ್ಲಾಂದ್ರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಇದರಿಂದ ಭಯಗೊಂಡ ಮಿಥುನ್ ಕಾರಾಗೃಹದ ಬಂದಿಗಳ ಫೋನ್ ಬೂತ್‌ನಿಂದ ಪತ್ನಿಗೆ ಕರೆ ಮಾಡಿ, ಸಚಿನ್ ಕೊಟ್ಟಿರುವ ಎರಡು ಫೋನ್ ಪೇ ನಂಬರ್‌ಗಳಿಗೆ ತಲಾ ರೂ.10 ಸಾವಿರ ಹಾಕುವಂತೆ ತಿಳಿಸಿರುತ್ತಾನೆ.
ಜು. 12ರಂದು ಜೈಲಿಗೆ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಬರ್ಕೆ ಠಾಣೆಯ ಅಧಿಕಾರಿಗಳು ತಪಾಸಣೆಗೆಂದು ಭೇಟಿ ನೀಡಿದ ಸಂದರ್ಭದಲ್ಲಿಈ ವಿಚಾರವನ್ನು ಮಿಥುನ್ ಲಿಖಿತವಾಗಿ ತಿಳಿಸಿದ್ದಾನೆ.
