ಶಿವಮೊಗ್ಗ ಸೂಳೆಬೈಲ್ ಅಬ್ದುಲ್ ಕಲಂ ನಗರ ಬಲ ಭಾಗದ ಬಾಡಾವಣೆಗೆ ಜರೂರಾಗಿ ಮೂಲ ಭೂತ ಸೌಲಭ್ಯ ಕಲ್ಪಿಸಿಕೊಡುವಂತೆ,ಶಿವಮೊಗ್ಗ ನಗರದ ವಾರ್ಡ್ ನಂ.35. ಸೂಳೆಬೈಲ್ ಅಬ್ದುಲ್ ಕಲಂ ನಗರ, ಬಲಭಾಗದಲ್ಲಿ ಸುಮಾರು 600 ರಿಂದ 800 ಕುಟುಂಬಗಳು ವಾಸವಾಗಿದ್ದು,
ಇಲ್ಲಿ ವಾಸವಾಗಿರುವ ಕುಟುಂಬಗಳು ಮಧ್ಯಮ ಮತ್ತು ಬಡ ಕುಟುಂಬಕ್ಕೆ ಸೇರಿದವರಾಗಿದ್ದು ಇವರುಗಳು ಓಡಾಡಲು ಸರಿಯಾದ ರಸ್ತೆ ಇರುವುದಿಲ್ಲ ಅಂದರೆ ಮಣ್ಣು ರಸ್ತೆಯಾಗಿದ್ದು, ಕೆಸರಿನಿಂದ ಕೂಡಿರುತ್ತದೆ.

ಸದರಿ ಬಡಾವಣೆಯ ನಿವಾಸಿಗಳು ಸುಮಾರು 20-30 ವರ್ಷಗಳಿಂದ ವಾಸವಾಗಿದ್ದರು ಸಹ ಯಾವುದೇ ಭೂಲಭೂತ ಸೌಲಭ್ಯ ಹೊಂದಿರುವುದಿಲ್ಲ. ಇದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆ ಆಗಿರುತ್ತದೆ. ಹಾಗೂ ಚರಂಡಿಯ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದೆ ಪ್ರಯುಕ್ತ ಚರಂಡಿಯಲ್ಲಿ ನೀರು ನಿಂತು ಕ್ರಿಮಿ ಕೀಟಗಳು ಉಂಟಾಗುತ್ತಿದ್ದು ಮಾರಣಾಂತಿಕ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ.
ಹೀಗಾಗಿ ಮಹಾನಗರ ಪಾಲಿಕೆಯಲ್ಲಿ ಸಂಪರ್ಕ ಇದ್ದರು ಸಹ ಪ್ರತಿನಿತ್ಯ ನೀರು ಬಾರದ ಕಾರಣ ನೀರಿನ ಕೊರತೆ ಸಹ ಉಂಟಾಗಿರುತ್ತದೆ.ಆದ್ದರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ತಾವು ನೇರವಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಳೆಬೈಲ್ ಅಬ್ದುಲ್ ಕಲಂ ನಗರ ಬಲ ಭಾಗದ ಬಡಾವಣೆಗೆ ತಮ್ಮ ಇಲಾಖೆಯಿಂದ ಜರೂರಾಗಿ ರಸ್ತೆಯನ್ನು ಹಾಗೂ ಎರಡು ಬದಿ ಬಾಕ್ಸ್ ಚರಂಡಿ ವ್ಯವಸ್ಥೆ ಹಾಗೂ 24×7 ಯೋಜನೆಯಡಿ ನೀರಿನ ಸೌಲಭ್ಯ ಹಾಗೂ ಯು.ಜಿ.ಡಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿದೆ ಎಂದು,
ಈ ಮೂಲಕ ಅಬ್ದುಲ್ ಮುಜೀಬ್ ಕಾಂಗ್ರೇಸ್ ಅಧ್ಯಕ್ಷರು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ