ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಮಾಚನೂರ ಗ್ರಾಮದ ಪ್ರಗತಿಪರ ರೈತ ರಮೇಶ್ ಅವರು ಹತ್ತಿ ಬೆಳೆದಿರುವ ಜಮೀನಿನಲ್ಲಿ ಕಲಿಕೆ ಟಾಟಾ ಟ್ರಸ್ಟ್ಸ್, ಕೃಷಿ ವಿಶ್ವ ವಿದ್ಯಾಲಯ ರಾಯಚೂರು ಹಾಗೂ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರವು ‘ಹತ್ತಿ ಬೆಳೆ ಕ್ಷೇತ್ರೋತ್ಸವ’ ಕಾರ್ಯಕ್ರಮ ನಡೆಸಿವೆ.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಬೇಸಾಯ ತಜ್ಞ ಡಾ.ಕುಮಾರ ಸ್ವಾಮಿ ಹಿರೇಮಠ ಅವರು ಹತ್ತಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ, ಬಲೆ, ನೀಲಿ ಅಂಟು ಹಾಗೂ ಹಳದಿ ಅಂಟುಗಳ ಬಗ್ಗೆ ವಿವರಿಸಿದರು.
ಕಲಿಕೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಶಾಂತು ಗೌಡ ಬಿರದಾರ್ ಅವರು ಕಲಿಕೆ ಜೀವನೋಪಾಯ ಕಾರ್ಯಕ್ರಮದ ಗುರಿ ಮತ್ತು ಉದೇಶಗಳ ಕುರಿತು ತಿಳಿಸಿದರು. ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಅಧಿಕಾರಿ ಮಾಂತೇಶ್ ಅವರು ವಡಗೇರ ಅವರು ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕುಮಾರ್. ಎಸ್.ತೆಳಿಗೇರಿ, ಮಂಜುನಾಥ ವಿಶ್ವಕರ್ಮ, ಶ್ರೀಮತಿ ಅನುರಾಧಾ ಮತ್ತು ಕುಮಾರ್.ಎಸ್, ರಫಿ ಕೊಂಕಲ್, ಬಾಲಪ್ಪ, ಮಾಚನೂರ, ಸೈದು ವಡಗೇರ, ಮಹಾದೇವ, ಮಲ್ಲೇಶ್, ಹಣಮಂತ ಬಿಳ್ಹಾರ, ಭೀರಲಿಂಗ ಕುರಕುಂದಿ, ಮಾಂತೇಶ್ ಬಿಳ್ಹಾರ, ಮಾಚನೂರ ಮತ್ತು ಹಲವಾರು ಗ್ರಾಮದ ರೈತರು ಇದ್ದರು.