ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬದುಕಿನ ಕೊನೆಯ ದಿನದವರೆಗೂ ಬರೆಯುತ್ತಾ ಹೋದ ‘ಬುದ್ಧ ಮತ್ತು ಅವನ ಧಮ್ಮ’ ಗ್ರಂಥವು ಅವರ ಬರಹಗಳಲ್ಲಿಯೇ ಬಹಳ ಮಹತ್ವದ್ದು. ಅವರೇ ಹೇಳುವಂತೆ ಸುಮಾರು ಐದೂವರೆ ವರ್ಷಗಳ ಕಾಲದ ಅಧ್ಯಯನ, ಶೋಧನೆ ಮತ್ತು ಚಿಂತನೆಯ ಫಲ ಈ ಪುಸ್ತಕ. ಭಾರತೀಯ ಸಮಾಜ ಪ್ರಜಾಸತ್ತಾತ್ಮಕ ಪ್ರಗತಿಯ ಪಥದಲ್ಲಿ ಸಾಗಬೇಕಾದರೆ ಬೌದ್ಧ ತತ್ವವೇ ಸರಿಯಾದ ಮಾರ್ಗ ಎಂದು ಅಂಬೇಡ್ಕರ್ ಅವರಿಗೆ ಅನಿಸಿದ್ದರಿಂದ ಬೌದ್ಧ ಧರ್ಮವನ್ನು ಮರು ವ್ಯಾಖ್ಯಾನಿಸುವ ಮತ್ತು ಪುನಶ್ಚೇತನಗೊಳಿಸುವ ಪ್ರಯತ್ನವನ್ನು ತಮ್ಮ ಅನಾರೋಗ್ಯದ ನಡುವೆಯೂ…

ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.