ಶಿವಮೊಗ್ಗ, ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆಗೈದ ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಸಲೀಮ್.ಎಂ ಅವರಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಸಂರಕ್ಷಣೆ,ಅರಣ್ಯ ಒತ್ತುವರಿ ತೆರವು,ವನ್ಯಜೀವಿ ಅಪರಾಧಗಳ ತಡೆ ಮತ್ತು ವಶಕ್ಕೆ ತೆಗೆದುಕೊಳ್ಳುವುದು,ಕ್ರೀಡಾಕೂಟದಲ್ಲಿ ಸಾಧನೆಗೈದ,ಅರಣ್ಯಕ್ಕೆ ಸಂಬಂಧಿಸಿದಂತೆ ಕೆಲಸಗಳಲ್ಲಿ ಶೌರ್ಯ ಮತ್ತು ದಿಟ್ಟತನ ತೋರಿದ ಅಧಿಕಾರಿ/ ಸಿಬ್ಬಂದಿಗಳಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಮಾಡಲಾಗುತ್ತದೆ.
ಶೌರ್ಯ ಮತ್ತು ದಿಟ್ಟತನ,ಅರಣ್ಯ ಅಭಿವೃದ್ಧಿಯಲ್ಲಿ ಮಹತ್ತರ ಕೆಲಸ ಮಾಡಿರುವ ಗಸ್ತು ಅರಣ್ಯ ಪಾಲಕ ಅರಣ್ಯ ರಕ್ಷಕ) ಸಲೀಮ್ ಎಂ ಅವರಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
2015ರಲ್ಲಿ ಇಲಾಖೆಗೆ ನೇಮಕವಾದ ಇವರು ಈ ಹಿಂದೆ ಶಿವಮೊಗ್ಗ ವನ್ಯಜೀವಿ ವಲಯ ಹಾಗೂ ಕೋಗಾರು ವನ್ಯ ಜೀವಿ ವಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಉಂಬಳೇಬೈಲು ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.