ಬಳ್ಳಾರಿ | ನೂತನ ಸಂಶೋಧನೆಗಳಿಗೆ ಶ್ರಮಿಸುತ್ತಿದೆ ಐಯುಎಸಿ ಕೇಂದ್ರ: ಪ್ರೊ. ಎಂ ಟಿ ಲಗಾರೆ

Date:

Advertisements

‘ಸುರಕ್ಷತೆ, ಭದ್ರತೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡು ಕೌಶಲ್ಯಗಳನ್ನು ಹೆಚ್ಚಿಸಲು ಅಂತರ್ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ(ಐಯುಎಸಿ)ವು ನಿರಂತರವಾಗಿ ವಿನೂತನ ಸಂಶೋಧನಾ ಮಾರ್ಗಗಳಿಗೆ ಶ್ರಮಿಸುತ್ತಿದೆ’ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ ಟಿ ಲಗಾರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಗುಲ್ಬರ್ಗಾ ವಿವಿಯ ಡಾ. ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗ ಹಾಗೂ ನವದೆಹಲಿಯ ಅಂತರ್ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರದ ಸಂಯುಕ್ತಾಶ್ರಯದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಐಯುಎಸಿಯಲ್ಲಿರುವ ಪೆಲ್ಲೆಟ್ರಾನ್ ವೇಗವರ್ಧಕ ಪ್ರಯೋಗಾಲಯವು 1991ರಿಂದ ಕಾರ್ಯನಿರ್ವಹಿಸುತ್ತಿದೆ. ನಂತರದ ವರ್ಷಗಳಲ್ಲಿ ಇದು ಭಾರತ ಮತ್ತು ವಿದೇಶಗಳಿಂದ 400ಕ್ಕೂ ಹೆಚ್ಚು ಬಳಕೆದಾರರಿಗೆ ಅಯಾನು ಕಿರಣಗಳನ್ನು ಒದಗಿಸುತ್ತಿದೆ. ವೇಗವರ್ಧಕ ಭೌತಶಾಸ್ತ್ರವು ಕಣ ವೇಗವರ್ಧಕಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸಿದ ಭೌತಶಾಸ್ತ್ರದ ವಿಶೇಷ ಕ್ಷೇತ್ರವಾಗಿದ್ದು, ಇದರ ಜತೆಯಲ್ಲೇ ಪರಮಾಣು ಭೌತಶಾಸ್ತ್ರವೂ ಪರಮಾಣು ನ್ಯೂಕ್ಲಿಯರಸ್‌ಗಳ ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಮೂಲಭೂತ ಶಕ್ತಿಗಳು ಹಾಗೂ ಅವುಗಳಿಗೆ ಒಳಗಾಗುವ ಪ್ರತಿಕ್ರಿಯೆಗಳು, ವಿಕಿರಣಶೀಲ ಕೊಳೆತ, ವಿದಳನ ಮತ್ತು ಸಮ್ಮಿಳನಗಳನ್ನು ನೀಡುತ್ತವೆ. ಇವುಗಳ ಹೆಚ್ಚಿನ ಅಧ್ಯಯನಕ್ಕೆ ಹಾಗೂ ಸಂಶೋಧನೆಗೆ ಐಯುಎಸಿ ಕೇಂದ್ರವು ವೇದಿಕೆಯಾಗಿದೆ” ಎಂದು ತಿಳಿಸಿದರು.

Advertisements

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕುಲಪತಿ ಪ್ರೊ. ಎಂ ಮುನಿರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ವಿಜ್ಞಾನದ ಎಲ್ಲ ಕ್ಷೇತ್ರವೂ ಭೌತಶಾಸ್ತ್ರದ ಮೇಲೆ ಅವಲಂಬನೆಯಾಗಿದೆ. ಕಲ್ಯಾಣ-ಕರ್ನಾಟಕ ಭಾಗದಲ್ಲಿ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ವಿವಿಯಲ್ಲಿ ನಿರ್ಮಿಸಲಾಗುವುದು. ಯುವ ಸಂಶೋಧಕರು ಐಯುಎಸಿ ಕೇಂದ್ರದ ಪ್ರಯೋಜನ ಪಡೆಯಬೇಕು” ಎಂದು ಹೇಳಿದರು.

ನವದೆಹಲಿಯ ಐಯುಎಸಿ ವಿಜ್ಞಾನಿ ಹಾಗೂ ಪ್ರೋಗ್ರಾಂ ಲೀಡರ್ ಡಾ. ಫೌರನ ಸಿಂಗ್ ಮಾತನಾಡಿ, “ವೇಗವರ್ಧಕ ಮಾಸ್ ಸ್ಪೆಕ್ಟ್ರೋಮೆಟ್ರಿ ಹಾಗೂ ಭೂಕಾಲಗಣನ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಮೊದಲನೇ ಕೇಂದ್ರವಾಗಿ ಐಯುಎಸಿ ಕಾರ್ಯನಿರ್ವವಹಿಸುತ್ತಿದೆ. ಈ ಕೇಂದ್ರದ ಪ್ರಯೋಜನ ಪಡೆಯಲು ಯುವ ಸಂಶೋಧಕರು ಹೊಸ ಸಂಶೋಧನೆಗಳೊಂದಿಗೆ ಬರಬೇಕು” ಎಂದು ಕರೆ ನೀಡಿದರು.

ಐಯುಎಸಿ ಕೇಂದ್ರದ ವಿಜ್ಞಾನಿ ಹಾಗೂ ಕೇಂದ್ರದ ಸಂಚಾಲಕ ರಾಜೀವ್ ಮೆಹ್ತಾ ಮಾತನಾಡಿ, “ಅಂತರ್-ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರವು ಅತ್ಯಾಧುನಿಕ ಸಂಶೋಧನೆ ನಡೆಸಲು ಅಗತ್ಯವಿರುವ ಆಧುನಿಕ ಉಪಕರಣಗಳೊಂದಿಗೆ ವಿಜ್ಞಾನ ಸಮುದಾಯಕ್ಕೆ ಅನುಕೂಲವಾಗುವಂತೆ ನಿರ್ಮಿತವಾಗಿದೆ. ಅಲ್ಲದೇ, ಕೇಂದ್ರವು 400 ಅಂಗ ಸಂಸ್ಥೆಗಳನ್ನು, 1200 ಸಂಶೋಧನಾ ವಿದ್ಯಾರ್ಥಿಗಳನ್ನು ಹೊಂದಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ದೂರು ಬರದಂತೆ ಕೆಲಸ ಮಾಡಿ: ಅಧಿಕಾರಿಗಳಿಗೆ ಕೊತ್ತೂರು ಮಂಜುನಾಥ್ ಎಚ್ಚರಿಕೆ

ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎ ಪಿ ಜ್ಞಾನಪ್ರಕಾಶ ಮಾತನಾಡಿ, “ಉನ್ನತ ಮಟ್ಟದ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿಯನ್ನು ಐಯುಎಸಿ ಹೊಂದಿದೆ. ವಿಶ್ರೀಕೃ ವಿವಿಯಲ್ಲಿನ ಭೌತಶಾಸ್ತ್ರ ವಿಭಾಗವು ಹಲವು ವೈವಿಧ್ಯತೆಗಳೊಂದಿಗೆ ಕೂಡಿದ್ದು, ರಾಜ್ಯದಲ್ಲಿನ ಉಳಿದ ವಿವಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿವಿಧ ರಾಜ್ಯಗಳ 100ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ ಎನ್ ಎಂ ಸಾಲಿ, ವಿವಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ತೀಪ್ಪೆರುದ್ರಪ್ಪ ಜೆ, ಡಾ.ಕೊಟ್ರೇಶ್ ಎಂ ಜಿ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X