“ಸರಕಾರದ ವಿವಿಧ ಇಲಾಖೆಗಳಲ್ಲಿ ಇರುವ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಇಲಾಖೆಗಳಗೆ ಜನರು ಅಲೆದಾಡಿ ಹೈರಾಣ ಆಗುತ್ತಿದ್ದಾರೆಯೇ ಹೊರತು ಯಾವುದೇ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಅಧಿಕಾರಿಗಳ ಇಚ್ಛಾಸಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಆರೋಪಿಸಿದರು.
ಹಾವೇರಿ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿವಿಧ ಇಲಾಖೆಯ ಯೋಜನೆಗಳು ಸ್ಥಗಿತವಾಗಿರುವ ಕುರಿತು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕಾರ್ಮಿಕ ಇಲಾಖೆಯಲ್ಲಿ ಸುಮಾರು 2022 ರಿಂದ ಇಲ್ಲಿಯವರೆಗೆ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳು ಫಲಾನುಭವಿಗಳಿಗೆ ಸಿಗ್ಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಂರ್ತಜಾತಿ ವಿವಾಹದ ಯೊಜನೆಯ ಹಣ ಬಿಡುಗಡೆ ಆಗಿಲ್ಲ. ಗ್ರಾಮೀಣ ಮತ್ತು ಸಣ್ಣಕೈಗಾರಿಕೆ ಯೊಜನೆ ಅಡಿಯಲ್ಲಿ ಬಡ ಮತ್ತು ನಿರ್ಗತಿಕ/ವಿಧವೆ ಮಹಿಳೆಯರಿಗೆ ಅವರ ಜೀವನ ಕಟ್ಟಿಕೊಳ್ಳಲು ಹೊಲಿಗೆ ಯಂತ್ರವನ್ನು ಕೊಡುವ ಮುಲಕ ಅವರನ್ನು ಆರ್ಥಿಕ ಸಬಲಿಕರಣ ಮಾಡಬೆಕ್ಕಿತ್ತು. ಸರಕಾರ/ಇಲಾಖೆ ಅರ್ಜಿಯನ್ನು ಹಾಕಿ ವರ್ಷಗಳೆ ಕಳೆದರು ಇಲಿಯವರೆಗೂ ಯಾವುದೆ ಫಲಾನುಭವಿಗೂ ಯೋಜನೆಯ ಹೊಲಿಗೆ ಯಂತ್ರ ಕೊಟ್ಟಿರುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರೆತೆಯಿದೆ. ಶಿಘ್ರವಾಗಿ ಕ್ರಮ ಕೈಗೊಂಡು ಸಿಬ್ಬಂದಿ ಭರ್ತಿ ಮಾಡಿಸಬೇಕು. ಮಳೆಯ ಪ್ರಮಾಣ ಹೆಚ್ಚಾಗಿದ್ದು ಗ್ರಾಮೀಣ ಪ್ರದೆಶದ ರಸ್ತೆಗಳು ದಗ್ಗು-ಗುಂಡಿ ಬಿದ್ದು ಹಾಳಾಗಿವೆ. ದುರಸ್ಥಿಗೊಳಿಸಬೇಕು. ಸರಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಗೆ ಬಂದಿದ್ದು ಮಕ್ಕಳು ಭಯದಿಂದ ಶಿಕ್ಷಣ ಪಡೆಯುವ ಸ್ಥಿತಿ ನಿರ್ಮಾವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಬೆಕು. ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಲವಾರು ಬಡವರು ನಿರ್ಗತಿಕರು ಅಂಗವಿಕಲರು ವೃದ್ಧರು ಕೆಲಸ ಮಾಡುತ್ತಿದ್ದು, ಕೂಲಿ ಹಣ ಬಂದಿರುವುದಿಲ್ಲ” ಎಂದರು.
“ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಅವ್ಯಾವಹತವಾಗಿ ನಡೆಯುತ್ತಿದ್ದು ಸಂಬಂದಿಸಿದ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ ಇದರ ಬಗ್ಗೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಶಾಲಾ/ಕಾಲೇಜು ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ವ್ಯವಸ್ಥೆ ಇಲ್ಲ. ಸರ್ಕಾರದ ಆದೇಶ ಇದ್ದರೂ ಅಂಗಡಿಗಳು ಇರುವ ಮಾಲಕರು ನಾಮಫಲಕಗಳಲ್ಲಿ ಕನ್ನಡವನ್ನು 60% ಬಳಸಬೇಕು, ಆದರೆ ಬಳಸುತ್ತಿಲ್ಲ.
ಈ ಸುದ್ದಿ ಓದಿದ್ದೀರಾ? ಗದಗ | ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ನೇಮಕ
“ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಗಮನ ಹರಿಸಿ ಕ್ರಮ ಕೈಗೊಳ್ಳುತ್ತೀರಿ ಎಂಬ ಭರವಸೆ ಇದೆ. ಒಂದು ವೇಳೆ ಕ್ರಮ ಕೈಗೊಲ್ಲದಿದ್ದರೆ ಕರವೇ ವತಿಯಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುವುದು” ಎಂದು ಗಿರೀಶ ಬಾರ್ಕಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ, ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್ ಗೌಡ ಮುದಿಗೌಡ್ರ, ಹಾವೇರಿ ತಾಲೂಕ ಅಧ್ಯಕ್ಷ ಹಾಲೇಶ್ ಹಾಲಣ್ಣನವರ್, ಹಸನಸಾಬ ಹತ್ತಿಮತ್ತೂರ, ಕೊಟ್ರೇಶ್ ಗುತ್ತುರ, ಚನ್ನಪ್ಪ ಹೊನ್ನಮ್ಮನವರ, ಬಸವರಾಜ ಅರಳಿ, ಶಿವಾನಂದ ಪೂಜಾರ, ಸತ್ಯವತಿ ಕಡೇರ, ರೇಣುಕಾ ಬಡಕಣ್ಣವರ, ಈರಮ್ಮ ಕಾಡಸಾಲಿ, ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.