ರಾಜ್ಯಪಾಲರನ್ನು ಬಿಟ್ಟು ಹಾರಿದ ವಿಮಾನ; ಇಬ್ಬರು ಏರ್ ಏಶಿಯಾ ಸಿಬ್ಬಂದಿ ಅಮಾನತು

Date:

Advertisements
  • ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ದಾಖಲು
  • ಮೂವರು ಏರ್ ಏಶಿಯಾ ಸಿಬ್ಬಂದಿ ತಿಂಗಳ ಕಾಲ ಅಮಾನತು

ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ವಿಮಾನ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಏರ್ ಏಶಿಯಾ ಇಂಡಿಯಾ ಬುಧವಾರ ಇಬ್ಬರು ಗ್ರೌಂಡ್ ಸಿಬ್ಬಂದಿಯನ್ನು ಒಂದು ತಿಂಗಳ ಕಾಲ ಅಮಾನತು ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯಪಾಲರು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಾಥಮಿಕ ವಿಚಾರಣೆ ನಡೆಸಿದ ಏರ್ ಏಶಿಯಾ ತನ್ನ ಸ್ಟೇಷನ್ ಮ್ಯಾನೇಜರ್ ಅವರನ್ನು ಅಮಾನತುಗೊಳಿಸಿ, ನಾಲ್ಕು ದಿನದ ಬಳಿಕ ‘ಕರ್ನಾಟಕ ರಾಜ್ಯಪಾಲರಿಗಾಗಿ ಕಾಯುವಲ್ಲಿ ವಿಫಲ’ ಆರೋಪದ ಮೇಲೆ ಪುರುಷ ಮತ್ತು ಮಹಿಳಾ ಗ್ರೌಂಡ್ ಸಿಬ್ಬಂದಿಯನ್ನು ಅಮಾನತು ಮಾಡಿದೆ.

ಜುಲೈ 27ರಂದು ಮಧ್ಯಾಹ್ನ ಬೋರ್ಡಿಂಗ್ ಗೇಟ್‌ನಲ್ಲಿ ನಿಯೋಜಿಸಲಾದ ಏರ್‌ಲೈನ್ ಮಹಿಳಾ ಸಿಬ್ಬಂದಿ ಮತ್ತು ರ್‍ಯಾಂಪ್‌ನಲ್ಲಿ ನಿಂತಿದ್ದ ವ್ಯಕ್ತಿಯನ್ನು’ಕರ್ತವ್ಯ ಲೋಪ’ದ ಕಾರಣ 30 ದಿನಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisements

ಸಾಮಾನ್ಯ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಏರ್‌ಲೈನ್ ಸಿಬ್ಬಂದಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಹೊರತಾಗಿಯೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 2.05ಕ್ಕೆ ಟೇಕ್ ಆಫ್ ಆಗಬೇಕಿದ್ದ ಏರ್ ಏಷಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ, ಗೆಹ್ಲೋಟ್ ಅವರು ಬೋರ್ಡಿಂಗ್ ಗೇಟ್ ಅನ್ನು 2.07ಕ್ಕೆ ತಲುಪಿದ್ದರು. 100ಕ್ಕೂ ಹೆಚ್ಚು ಪ್ರಯಾಣಿಕರು ಹೆಚ್ಚು ವಿಳಂಬವಿಲ್ಲದೆ ಸಮಯಕ್ಕೆ ಟೇಕಾಫ್ ಆಗುವ ವಿಮಾನವನ್ನು ಹತ್ತಿದರು. ಬಳಿಕ ರಾಜ್ಯಪಾಲರನ್ನು ಬಿಟ್ಟು ವಿಮಾನವು ಹಾರಾಟ ನಡೆಸಿತ್ತು.

ಏರ್ ಏಶಿಯಾ ಗ್ರೌಂಡ್ ಸಿಬ್ಬಂದಿ ಲೋಪದೋಷಗಳನ್ನು ಉಲ್ಲೇಖಿಸಿ ಗವರ್ನರ್ ತಂಡವು ಏರ್‌ಲೈನ್ಸ್‌ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ದೂರು ನೀಡಿದೆ. ಗೆಹ್ಲೋಟ್ ಅವರು ಸಮಯಕ್ಕೆ ಸರಿಯಾಗಿ ಬಂದರು ಏರ್‌ಲೈನ್ಸ್‌ ಸಿಬ್ಬಂದಿಯ ತಪ್ಪು ಸಂವಹನದಿಂದ ಗೆಹ್ಲೋಟ್ ಅವರು ವಿಮಾನವನ್ನು ತಪ್ಪಿಸಿಕೊಂಡರು ಎಂದು ರಾಜಭವನದ ಅಧಿಕಾರಿಗಳು ಹೇಳಿದ್ದಾರೆ.

ಏರ್‌ ಏಶಿಯಾ ಬೆಂಗಳೂರು ವಿಮಾನ ನಿಲ್ದಾಣದ ವ್ಯವಸ್ಥಾಪಕ ಜಿಕೊ ಸೋರೆಸ್ ಅವರನ್ನು ವಿಐಪಿಗಾಗಿ ಕಾಯದ ಆರೋಪದ ಮೇಲೆ ಶನಿವಾರ 30 ದಿನಗಳ ಕಾಲ ಅವರನ್ನು ಅಮಾನತುಗೊಳಿಸಲಾಗಿದೆ. 100ಕ್ಕೂ ಹೆಚ್ಚು ಪ್ರಯಾಣಿಕರು ಹೈದರಾಬಾದ್‌ಗೆ ಸಮಯಕ್ಕೆ ಸರಿಯಾಗಿ ಟೇಕಾಫ್ ಆಗಲು ಸಿದ್ಧರಾಗಿದ್ದರಿಂದ ಸೋರೆಸ್ ವಿಮಾನ ಹಾರಾಟಕ್ಕೆ ಸೂಚಿಸಿದ್ದಾರೆ. ಆದರೆ, ರಾಜ್ಯಪಾಲರ ಇಬ್ಬರು ಸಿಬ್ಬಂದಿಗಳು ತಮ್ಮ ಬ್ಯಾಗ್‌ಗಳೊಂದಿಗೆ ಮೊದಲೇ ಸ್ಥಳಕ್ಕೆ ಬಂದಿದ್ದರೂ ರಾಜ್ಯಪಾಲರ ಸುಳಿವು ಇರಲಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಏರ್‌ ಏಶಿಯಾ ಹಿರಿಯ ಅಧಿಕಾರಿಗಳು ರಾಜ್ಯಪಾಲರನ್ನು ರಾಜಭವನದಲ್ಲಿ ಭೇಟಿಯಾಗಿ ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಸ್ಟೇಷನ್ ಮ್ಯಾನೇಜರ್‌ ಅಮಾನತು ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ. ಆ ದಿನ ಕರ್ತವ್ಯದಲ್ಲಿರುವ ಹೆಚ್ಚಿನ ಸಿಬ್ಬಂದಿ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೆಐಎ ಸಿಬ್ಬಂದಿ ಮೇಲೆ ಅಸಮಾಧಾನ ಹೊರಹಾಕಿದ ರಾಜಭವನದ ಉನ್ನತ ಅಧಿಕಾರಿಗಳು

ಏನಿದು ಘಟನೆ?

ಜುಲೈ 28ರಂದು ರಾಜ್ಯಪಾಲರು ಹೈದರಾಬಾದ್‌ಗೆ ತೆರಳಬೇಕಿತ್ತು. ಹಾಗಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆಯ ವಿಮಾನದಲ್ಲಿ ಹೋಗಲು ನಿಲ್ದಾಣಕ್ಕೆ 1:30ಕ್ಕೆ ಆಗಮಿಸಿದ್ದರು. ಏರ್‌ ಏಶಿಯಾ ವಿಮಾನ ಹೊರಡಲು ಇನ್ನೂ ಸಮಯವಿದೆ ಎಂದು ಸಿಬ್ಬಂದಿ ರಾಜ್ಯಪಾಲರನ್ನು ವಿಐಪಿ ಲಾಂಜ್‌ನಲ್ಲಿ ಕೂರಿಸಿ, ವಿಮಾನದಲ್ಲಿ ಲಗೇಜ್ ಇಟ್ಟು ಬಂದಿದ್ದರು.

ತುಂಬಾ ಹೊತ್ತು ಕಾದು ಕುಳಿತ ರಾಜ್ಯಪಾಲರು ಫ್ಲೈಟ್ ಸಮಯವಾಗಿರುವುದು ಗಮನಕ್ಕೆ ಬಂದ ಕೂಡಲೇ ವಿಮಾನ ಹತ್ತಲು ಹೋಗಿದ್ದಾರೆ. ಆದರೆ, ಇತ್ತ ಕಡೆ ಸಮಯ ಆದ್ದರಿಂದ ವಿಮಾನ ಟೇಕಾಫ್ ಆಗಿ ಹೈದರಾಬಾದ್‌ಗೆ ಹಾರಿದೆ.

ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾಜ್ಯಪಾಲರು ವಿಮಾನವನ್ನು ತಪ್ಪಿಸಿಕೊಂಡಿದ್ದು, ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ಅವರನ್ನು ಹೈದರಾಬಾದ್‌ಗೆ ಕಳುಹಿಸಿಕೊಟ್ಟಿದ್ದಾರೆ.

ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾಜ್ಯಪಾಲರು ಒಂದು ಗಂಟೆ ತಡವಾಗಿ ಹೈದರಾಬಾದ್‌ಗೆ ತೆರಳಬೇಕಾಯಿತು. ಸಿಬ್ಬಂದಿಯ ಈ ನಿರ್ಲಕ್ಷ್ಯವನ್ನು ರಾಜ್ಯಪಾಲರು ಹಾಗೂ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದರು.

ಕರ್ನಾಟಕ ರಾಜ್ಯಪಾಲರಿಗೆ ವಿಮಾನ ತಪ್ಪಿಸಿ ಅವರು ಒಂದು ಗಂಟೆ ತಡವಾಗಿ ಮತ್ತೊಂದು ಫ್ಲೈಟ್‌ ಮುಖಾಂತರ ಹೈದರಾಬಾದ್‌ಗೆ ತೆರಳುವಂತಾಯಿತು. ಈ ಹಿನ್ನೆಲೆ, ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಏರ್ ಏಶಿಯಾ ಏರ್‌ಲೈನ್ಸ್‌ ವಿರುದ್ಧ ವಿಮಾನ ಮಿಸ್‌ ಆಗಲು ಕಾರಣ ತಿಳಿಸುವ ಜತೆಗೆ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ಅತಿ ಗಣ್ಯರಿಗೆ ವಾಹನವನ್ನು ಯಾವುದೇ ತಡೆ ಇಲ್ಲದಂತೆ ವ್ಯವಸ್ಥೆ ಮಾಡಿಯೂ ಸಿರಿಯಾದ ಸಮಯಕ್ಕೆ ಬಾರದೇ ಇದ್ದರೆ. ಕಾಯುವುದರಲ್ಲಿ ಅರ್ಥವಿಲ್ಲ. ಸಿಬ್ಬಂದಿ ಸಿರಿಯಾದ ನಿರ್ಧಾರ ಮಾಡಿದ್ದಾರೆ. ಶಿಸ್ತು ಕ್ರಮ ಖಂಡನೀಯ. ತಕ್ಷಣ ವಾಪಸ್ಸು ಪಡೆಯಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X