- ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಕೆ
- ಏರ್ ಶೋ’ ಸಹಭಾಗಿತ್ವ ದಸರಾ ಹಬ್ಬಕ್ಕೆ ಇನ್ನಷ್ಟು ರಂಗು ತುಂಬಲಿದೆ: ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಮನವಿ ಮಾಡಿದರು.
“2017 ಮತ್ತು 2019 ರಲ್ಲಿ, ಮೈಸೂರಿನ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ಭಾರತೀಯ ವಾಯುಪಡೆಯು ಪ್ರದರ್ಶಿಸಿದ ವಿಶೇಷ ಏರ್ ಶೋ ಮೂಲಕ ದಸರಾ ಉತ್ಸವ ಪ್ರವಾಸಿಗರು ಮತ್ತು ಕನ್ನಡಿಗರ ಗಮನ ಸೆಳೆದಿತ್ತು. ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾ 2023ರ ಸಂದರ್ಭದಲ್ಲಿ ಈ ಭಾರಿಯೂ ‘ಏರ್‌ಶೋ’ ಅನ್ನು ಯೋಜಿಸಲು ಸಂಬಂಧಪಟ್ಟವರಿಗೆ ತಾವು ನಿರ್ದೇಶಿಸಬೇಕು. ‘ಏರ್‌ಶೋ’ ಸಹಭಾಗಿತ್ವ ದಸರಾ ಹಬ್ಬಕ್ಕೆ ಇನ್ನಷ್ಟು ರಂಗು ತುಂಬಲಿದೆ” ಎಂದು ಸಿದ್ದರಾಮಯ್ಯ ಕೋರಿದ್ದಾರೆ.
“ಕರ್ನಾಟಕದ ವೈಭವವನ್ನು ಪ್ರದರ್ಶಿಸುವ ಹೆಸರಾಂತ ಮೈಸೂರು ದಸರಾ ಉತ್ಸವ ರಾಜ್ಯದ ಇತಿಹಾಸ ಮತ್ತು ಸಂಪ್ರದಾಯಗಳ ಸಂಕೇತವಾಗಿದ್ದು, ಈ ವರ್ಷ ಅಕ್ಟೋಬರ್ 15 ರಿಂದ 24 ರವರೆಗೆ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಮೈಸೂರು ದಸರಾ ಆಚರಣೆಯ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ದಸರಾ ಮಹೋತ್ಸವದ ವೇಳೆ ಏರ್ ಶೋ ನಡೆಸಬೇಕೆಂಬ ಜನರ ಬಯಕೆಯನ್ನು ಸಮಿತಿಯ ಮುಂದೆ ಇಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಸಿದ್ದರಾಮಯ್ಯ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.