ಸಿಂಧನೂರು ನಗರದಲ್ಲಿ ನಿವೇಶಗಳನ್ನು ಹಂಚಲು ಖರೀದಿ ಮಾಡಿರುವ ಜಾಗದಲ್ಲಿ ದಲಿತರಿಗೆ ಮತ್ತು ಅತೀ ಕಡುಬಡವರಿಗೆ ಹಕ್ಕುಪತ್ರ ನೀಡಿ ಮನೆ ನಿರ್ಮಿಸಿಲು ಸೇರಿ ಇತರೆ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಆರಣ್ಯಭೂಮಿ, ಸಾಮಾಜಿಕ ಅರಣ್ಯಕರಣ,ಗೋವುಗಳ ಗೋಮಾಳಗಳಿಗೆ ಕಾಯ್ದಿಸಿರುವ ನೆಪದಲ್ಲಿ ದಲಿತರನ್ನು ಒಕ್ಕಲೆಬ್ಬಿಸುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರಗಳು ಕೈಗಾರಿಗಳ ಸ್ಥಾಪನೆಗಾಗಿ ವಿದೇಶಿ ಬಂಡವಾಳಗಾರರ ಕೈ ವಶ ಕುತಂತ್ರವಾಗಿದೆ ಎಂದರು.
ಫಾರಂ ಸಂಖ್ಯೆ 54, 53, 57 ರಲ್ಲಿ ಸಲ್ಲಿಸಿರುವ ದಲಿತರು ಹಾಗೂ ತಳ ಸಮುದಾಯಗಳ ಅರ್ಜಿಗಳನ್ನು ಪರಿಶೀಲನೆವಿಲ್ಲದೆ ರಾಶಿಗಟ್ಟಲೆ ಕೊಳೆಯುತ್ತಾ ಬಿದ್ದಿವೆ. ಜಿ.ಪಿ.ಎಸ್. ಮೂಲಕ ಉಳುಮೆ ಮಾಡುತ್ತಿಲ್ಲವೆಂದು ಹೇಳಿ ಸಾವಿರಾರು ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಆರೋಪಿಸಿದರು.

ಸಿಂಧನೂರು ನಗರದ 40 ನೇ ಕಾಲುವೆ ಮೇಲೆ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವ ನಿವೇಶನ ಬಡವರಿಗೆ ಸರ್ಕಾರಿ ಜಾಗದಲ್ಲಿ ಪ್ಲಾಟಗಳನ್ನು ನೀಡಿ ಮನೆ ನಿರ್ಮಿಸಿ ಕೊಡಬೇಕು ಹಾಗೂ ಗೊರೇಬಾಳ ಹೋಬಳಿಯ ಚನ್ನಳ್ಳಿ ಗ್ರಾಮದ ಸ.ನಂ 222, ರಲ್ಲಿ 21 ಎಕರೆ ಭೂಮಿಯನ್ನು ದಲಿತರಿಗೆ ಹಂಚಬೇಕು ಎಂದು ಒತ್ತಾಯಿಸಿದರು.
ಹಕ್ಕಿಗಾಗಿ ಹಲವು ಬಾರಿ ಹೋರಾಟ ಮಾಡಲಾಗಿದೆ ಹೀಗೆ ನಿರ್ಲಕ್ಷ್ಯ ಮುಂದುವರಿದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಟೋಲ್ ಗೇಟ್ ತೆರವಿಗೆ ಶಾಸಕಿ ಕರೆಮ್ಮ ಆಗ್ರಹ
ಈ ವೇಳೆ ವಿಭಾಗೀಯ ಸಂಚಾಲಕರು ಚಿನ್ನಪ್ಪ ಹೆಡಗಿಬಾಳ, ಜಿಲ್ಲಾ ಸಂಚಾಲಕರು ಆರ್ ಅಂಬ್ರೋಸ,ಉಮೇಶ್, ಶಿವರಾಜ ಬಾಗಲವಾಡ,ಉಮೇಶ್,ಮಂಜು ರಾಯಚೂರು , ಹುಚ್ಚಪ್ಪ ಕವಿತಾಳ ಇನ್ನಿತರರು ಹಾಜರಿದ್ದರು.
