ದಲಿತರ ಭೂಮಿ ವಸತಿ ಹಕ್ಕಿಗಾಗಿ ಹಕ್ಕೋತ್ತಾಯಿಸಿ ಪ್ರತಿಭಟನಾ ಧರಣಿಯನ್ನು ದಸಂಸ (ಅಂಬೇಡ್ಕರ್ ವಾದ ) ವತಿಯಿಂದ ಶುಕ್ರವಾರ ಚಿಕ್ಕಮಗಳೂರು, ಮೂಡಿಗೆರೆ, ಕಳಸ ಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಗಿದೆ.

ಹತ್ತಾರು ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂಹೀನ ಬಡ ರೈತರು ಫಾರಂ ನಂ. 50, 53, 57ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಪತ್ರಕ್ಕಾಗಿ ಕಾಯುತ್ತಿದ್ದಾರೆಂದು ದಸಂಸ ಮುಖಂಡ ಮರ್ಲೆ ಅಣ್ಣಯ್ಯ ಈದಿನ.ಕಾಮ್ ಜೊತೆ ಮಾತಾಡಿದರು.

ಪಿಟಿಸಿಎಲ್ ಕಾಯ್ದೆ ಪ್ರಕಾರ ಜಮೀನುಗಳನ್ನು ಕೈಬಿಡುವಂತೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನಲ್ಲಿ ಸಾವಿರಾರು ಸಂಖ್ಯೆಯ ನಿವೇಶನ ರಹಿತರಿದ್ದು, ಅವರಿಗೆ ನಿವೇಶನ, ಮಸಣಕ್ಕೆ ಭೂಮಿ ನೀಡಲು ಹಾಗೂ ಇತರೆ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ದಸಂಸ ಮುಖಂಡರಾದ ಮಂಜಯ್ಯ ತಿಳಿಸಿದರು.

ಈ ಸಂಬಂಧ ಸರ್ಕಾರ ಶಾಸಕರ ಸಮಿತಿಯನ್ನು ನೇಮಿಸಿದ್ದರೂ, ಇದುವರೆಗೂ ನಮ್ಮ ಶಾಸಕರು ಸಭೆ ಕರೆಯದೇ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ನಾವೆಲ್ಲರೂ ಖಂಡಿಸುತ್ತೇವೆ. ಕಂದಾಯ ಭೂಮಿಯನ್ನು ಭೂಹೀನರಿಗೆ ಹಂಚಬೇಕು. ಹಾಗೆಯೇ, ಅಧಿಕಾರಿಗಳ ಕಚೇರಿಗೆ ಅಲೆದರೂ, ಕೆಲಸ ಮಾತ್ರ ಆಗುತ್ತಿಲ್ಲವೆಂದು ಪ್ರತಿಭಟನೆಗೆ ಬಂದಿದ್ದ ಜನರು ಅಭಿಪ್ರಾಯವನ್ನು ಈದಿನ. ಕಾಮ್ ಜೊತೆ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಇಂದು ಎಲ್ಲಾ ತಾಲೂಕು ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ – ಆಶಾ ಸಂತೋಷ್
ಈ ಕುರಿತು ಚಿಕ್ಕಮಗಳೂರು ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಹಾಗೆಯೇ, ಪ್ರತಿಭಟನೆಗೆ ದಸಂಸ ಮುಖಂಡರು, ಕಾರ್ಯಕರ್ತರು, ಎದ್ದೇಳು ಕರ್ನಾಟಕ ಮುಖಂಡರು, ಸದಸ್ಯರು, ಹಾಗೂ ಹಲವು ಸಂಘಟನೆಯವರು ಭಾಗವಹಿಸಿದರು.