ಕುಡಿದ ಮತ್ತಿನಲ್ಲಿ ಪೊಲೀಸ್ ಸಿಬ್ಬಂದಿಯೋರ್ವರು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಹಲ್ಲೆಗೊಳಗಾದ ದಲಿತ ಸಮುದಾಯದ ಯುವಕ ನಾಗೇಶ್, ಶುಕ್ರವಾರ ಸಂಜೆ ಸಂಸೆ ವ್ಯಾಪ್ತಿಯ ಕುದುರೆಮುಖ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಪೊಲೀಸ್ ಸಿಬ್ಬಂದಿ ಸಿದ್ದೇಶ್ ಎಂಬುವರು ಯುವಕನ ಮೇಲೆ ಬೂಟು ಕಾಲಿನಲ್ಲಿ ತುಳಿದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆ ಮಾಡುತ್ತಿರುವುದನ್ನು ನಾಗೇಶ್ ಎಂಬ ಯುವಕ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಪ್ರಯತ್ನಿಸಿದಾಗ, ಗಮನಿಸಿದ ಪೊಲೀಸ್ ಸಿಬ್ಬಂದಿ ಕುಡಿದ ಮತ್ತಿನಲ್ಲಿ ಮತ್ತಷ್ಟು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿಯಿಂದ ಐವತ್ತು ಸಾವಿರ ಅಥವಾ ಒಂದು ಲಕ್ಷ ಹಣದ ಬೇಡಿಕೆಯಿಟ್ಟಾಗ, ಹಲ್ಲೆಗೊಳಗಾದ ಯುವಕ ನಾಗೇಶ್, “ನನಗೆ ಯಾವುದೇ ಹಣ ಬೇಡ ನನಗೆ ಪರಿಹಾರ ಬೇಡ, ನನಗೆ ನ್ಯಾಯ ಕೊಡಿಸಿ ನಾನು ಯಾವುದೇ ಕಾರಣಕ್ಕೂ ಹಣದ ಆಸೆಗೆ ರಾಜಿಯಾಗುವುದಿಲ್ಲ. ನನಗೆ ಆದಂತಹ ಪರಿಸ್ಥಿತಿ ನಮ್ಮ ಸಮುದಾಯದ ಹರಿಜನ ಹಾಗೂ ಗಿರಿ ಜನರಿಗೆ ಆಗಬಾರದು ನಮಗೆ ನ್ಯಾಯ ದೊರಕಿಸಿ ಕೊಡಬೇಕು” ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ರಾಜ್ಯದ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಭೂಮಿ, ವಸತಿ ಹಕ್ಕಿಗಾಗಿ ಹಕ್ಕೋತ್ತಾಯ: ದಸಂಸ ಪ್ರತಿಭಟನೆ
ಈ ಕುರಿತು ಹಲ್ಲೆಗೊಳಗಾದ ನಾಗೇಶ್ ಎಂಬ ಯುವಕನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ