ವಿಜಯಪುರ | ಗಣಿಹಾರ ತಾಂಡಾದ ದೇವಿಬಾಯಿ ಕೊಲೆ ಪ್ರಕರಣ:‌ ಆರೋಪಿಗಳ ಜಾಮೀನು ವಿರೋಧಿಸಿ ಸ್ಥಳೀಯರ ಮನವಿ

Date:

Advertisements

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ತಾಂಡದ ದೇವಿಬಾಯಿ ಲಾಲ್ ಸಿಂಗ್ ಜಾದವ(42) ಎನ್ನುವ ಮಹಿಳೆಯ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಗ್ರಹಿಸಿ ಗಣಿಹಾರ ತಾಂಡದ ನಿವಾಸಿಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪಟ್ಟಣದಲ್ಲಿರುವ ತಾಲೂಕು ಆಡಳಿತ ಕಚೇರಿಗೆ ಆಗಮಿಸಿದ ತಾಂಡಾದ ನಿವಾಸಿಗಳು ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ ಅವರ ಮೂಲಕ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

“ಆರೋಪಿಗಳಿಗೆ ಜಾಮೀನು ಸಿಕ್ಕರೆ ಆಕೆಯ ಮಕ್ಕಳಿಗೆ ತೊಂದರೆಯಾಗಲಿದೆ. ಆದಕಾರಣ ಕಲಬುರಗಿ ದರ್ಗಾ ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ನೀಡಬಾರದು. ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು” ಎಂದು ಗಣಿಹಾರ ತಾಂಡಾದ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

Advertisements

ಘಟನೆ ಹಿನ್ನೆಲೆ : ಗಣಿಹಾರ ತಾಂಡಾದ ಮೃತ ದೇವಿಬಾಯಿ ಅದೇ ತಾಂಡಾದ ಸೋಮಲು(53) ಎಂಬಾತನ ಜತೆಗೆ ಸಹಜೀವನ ನಡೆಸುತ್ತಿದ್ದಳು. ಮೊದಲ ಪತಿ 10 ವರ್ಷದ ಹಿಂದೆ ಮತಪಟ್ಟಿದ್ದು, ಮಕ್ಕಳಿದ್ದಾರೆ. ಸುಮಾರು 2015ರಿಂದ ದೇವಿ ಬಾಯಿ ಹಾಗೂ ಸೋಮಲು ಸಹಜೀವನ ನಡೆಸುತ್ತಿದ್ದರು.

ಮೊದಲ ಪತಿಯ ಎರಡನೇ ಮಗಳ ಮದುವೆ ವಿಚಾರವಾಗಿ ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹಾಗಾಗಿ ಮಗಳು ಸುಮಾರು ಏಳೆಂಟು ತಿಂಗಳ ಹಿಂದೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಂಗೊಳ್ಳಿಗೆ ಹೋಗಿದ್ದರು.

ಮಗಳು ಸಂಗೊಳ್ಳಿಗೆ ಹೋಗಿದ್ದಾಗಲೂ ಜಗಳವಾಗಿದೆ. ಆಗ ಮಗಳು ವಾಪಸ್ ವಿಜಯಪುರಕ್ಕೆ ಬಂದಿದ್ದಾಳೆ. ದೇವಿಬಾಯಿ ಅಲ್ಲೇ ಉಳಿದುಕೊಂಡಿದ್ದಾಳೆ. ಆಗ ಸೋಮಲು ವಿಜಯಪುರ ಬಸ್ ಹತ್ತಿಸುವುದಾಗಿ ಹೇಳಿ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಬಂದಿದ್ದಾನೆ. ಆಗ ಹಾಮು ಪಪ್ಪು ಜೊತೆಗಿದ್ದ. ಆಳಂದ ಚೆಕ್ ಪೋಸ್ಟ್ ಬಳಿ ಕಾರು ನಿಲ್ಲಿಸಿ ಬಸ್ ಹತ್ತಿಸದೆ ಕಲಬುರಗಿ ದಾಟಿ ಕಾರು ತೆಗೆದುಕೊಂಡು ಹೋದಾಗ ದೇವಿ ಬಾಯಿಗೆ ಅನುಮಾನ ಬಂದಿದೆ. ಸಣ್ಣೂರು ಕ್ರಾಸ್ ಹತ್ತಿರ ಕಾರಿನಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ನಂತರ ಶವ ತೆಗೆದುಕೊಂಡು ಸೇಡಂನತ್ತ ಬರುವಾಗ ಟೋಲ್ ಗೇಟ್ ನೋಡಿ ವಾಪಸ್ ಆಗಿದ್ದಾರೆ. ಶಹಾಬಾದ್ ರಾವೂರ ಮಾರ್ಗವಾಗಿ ಚಿತ್ತಾಪುರಕ್ಕೆ ಬಂದು ಒಂದು ಕ್ಯಾನ್ ಪೆಟ್ರೋಲ್ ಖರೀದಿಸಿದ್ದಾರೆ. ಯಾದಗಿರಿ ತೆಲಂಗಾಣ ಗಡಿಯಲ್ಲಿ ಶವ ಬಿಸಾಕುವಲ್ಲಿ ವಿಫಲರಾಗಿದ್ದಾರೆ. ನಂತರ ವಾಡಿಯಲ್ಲಿ ಸನಿಗೆ ಖರೀದಿಸಿದ್ದು, ಲಾಡ್ಲಾಪುರ ಹತ್ತಿರ ಶವ ಹೂಳಲು ನೋಡಿದ್ದಾರೆ. ನೆಲಗಟ್ಟಿ ಇರುವುದರಿಂದ ಪೆಟ್ರೋಲ್ ಸುರಿದು ಶವ ಸುಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಜೂನ್ 1ರಂದು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಊರಿಗೆ ಬಂದು ನಾನು ಅವಳನ್ನು ವಿಜಯಪುರ ಬಸ್ಸಿಗೆ ಹತ್ತಿಸಿದ್ದೇನೆ. ಎಲ್ಲಿ ಹೋದಳು ಗೊತ್ತಿಲ್ಲವೆಂದು ಹೇಳಿದ್ದಾನೆ. ಏನೋ ಗೊತ್ತಿಲ್ಲದಂತೆ ಮನೆಯವರೊಂದಿಗೆ ಹುಬ್ಬಳ್ಳಿ, ನಿಪ್ಪಾಣಿಯಲ್ಲಿ ಹುಡುಕಿದ್ದಾನೆ ಎಂದು ಕಲಬುರಗಿ ಎಸ್ ಪಿ ಅಡ್ಡರ ಶ್ರೀನಿವಾಸಲು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಪ್ರಕರಣ | SIT ರಚನೆಯಲ್ಲಿ ರಾಹುಲ್‌ ಗಾಂಧಿ ಮಧ್ಯಪ್ರವೇಶಿಸುವಂತೆ ಸಾಮಾಜಿಕ ಕಾರ್ಯಕರ್ತೆ ಒತ್ತಾಯ

ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಆರೋಪಿಗಳಾದ ಸೋಮಲು ಹಾಗೂ ಹಾಮು ಪಪ್ಪು ಇಬ್ಬರನ್ನೂ ಬಂಧಿಸಲಾಗಿದೆ. ಸದ್ಯ ಕಲಬುರಗಿಯ ದರ್ಗಾ ಜೈಲಿನಲ್ಲಿದ್ದಾರೆ.

ಮನವಿ ಸಲ್ಲಿಸುವ ವೇಳೆ ಕಿಶನ್ ಬಿಮು ಚಹಾನ್, ಕಿರಣ್ ರಾಠೋಡ್, ಪೂಜಾ ರಾಠೋಡ್, ಕಾಶಿಬಾಯಿ ಚೌಹಾಣ್, ಜಯಶ್ರೀ ಪವಾರ್, ಪಾರುಬಾಯಿ ರಾಠೋಡ ಹಾಗೂ ಸುಮಿತ್ರ ರಾಠೋಡ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X