ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನದ ಜಾಗದ ಹಕ್ಕುದಾರಿಕೆಯನ್ನು ಸ್ಥಾಪಿಸುವಂತಹ ಯಾವುದೇ ದಾಖಲೆಗಳು ವಕ್ಫ್ ಇಲಾಖೆಯಲ್ಲಿ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸಿ ಈ ಅಕ್ರಮದಲ್ಲಿ ಶಾಮೀಲಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಶಿವಮೊಗ್ಗ ಮಹಾನಗಾರ ಪಾಲಿಕೆಗೆ ಸೇರಿದ ಈ ಜಾಗವು ಪಾಲಿಕೆಯ ಆಸ್ತಿ ಆಗಿಯೇ ಉಳಿಯಬೇಕು ಎಂದು ರಾಷ್ಟ್ರಭಕ್ರ ಬಳಗ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಸಂಚಾಲಕ ಕೆ ಎಸ್ ಈಶ್ವರಪ್ಪ, ಮೈದಾನದ ಹಕ್ಕುದಾರಿಕೆ ಬಗ್ಗೆ ರಾಷ್ಟ್ರಭಕ್ತರ ಬಳಗ ಈಗಾಗಲೇ ಪ್ರಮುಖ ದಾಖಲೆಗಳೊಂದಿಗೆ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗು ಮಹಾನಗರ ಪಾಲಿಕೆ ಆಯುಕ್ತರಿಗೆ ಮಾನವಿ ಸಲ್ಲಿಸಿದೆ.
ಜಾಗದ ಖಾತೆಯನ್ನು ನಿಯಮ ಬಾಹಿರವಾಗಿ ವಕ್ಫ್ ಹೆಸರಿಗೆ ಮಾಡಿದ್ದನ್ನು ಪ್ರಶ್ನಿಸಿ, ಪುನರ್ ಪರಿಶೀಲಸುವಂತೆ ದಿನಾಂಕ 10/11/2020 ರಂದು ಅರ್ಜಿ ಸಲ್ಲಿಸಲಾಗಿದ್ದರೂ ಪಾಲಿಕೆ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರಕರಣ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು ಎಂದರು.
(ರಿಟ್ ಅರ್ಜಿ ಸಂಖ್ಯೆ 14897/2025). ದಿನಾಂಕ 22/05/2025 ರ ಆದೇಶದಲ್ಲಿ ಉಚ್ಚ ನ್ಯಾಯಾಲಯ ಸದರಿ ಜಾಗದ ಹಕ್ಕುದಾರಿಕೆಯ ದಾಖಲಾತಿಗಳನ್ನು ಎಂಟು ವಾರದ ಒಳಗೆ ಪರಿಶೀಲಿಸಬೇಕೆಂದು ಪಾಲಿಕೆ ಆಯುಕ್ತರಿಗೆ ತಿಳಿಸಿದ್ದು ನ್ಯಾಯಾಲಯ ಕೊಟ್ಟ ಅವಧಿಯು ದಿನಾಂಕ 17/07/2025 ಕ್ಕೆ ಮುಗಿದಿದೆ.
ಈ ಹಿಂದೆ ಸಲ್ಲಿಸಿದ ದಾಖಲೆಗಳಲ್ಲದೆ ದಿನಾಂಕ 01/07/2025 ರಂದು ಮಾನ್ಯ ಆಯುಕ್ತರಿಗೆ ರಾಷ್ಟ್ರಭಕ್ತರ ಬಳಗ ದ ಕಾನೂನು ವಿಭಾಗದಿಂದ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದರು.1965 ರ ಮೈಸೂರು ರಾಜ್ಯ ಪತ್ರ ಮತ್ತು 1965 ರಿಂದ 1975 ರ ವರೆಗೆ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಎಂ.ಅರ್. 19 ರಂತೆ ಇದ್ದ ಆಳತೆ 295+291/2 109+1481/2 ಮತ್ತು ಸರ್ಕಾರದ ಇಂಡೀಕರಿಸುವ ಸುತ್ತೋಲೆಯಲ್ಲಿ ಗಮನಿಸಬೇಕಾದ ಅಂಶ ಎಂದರೆ ಗೆಜೆಟ್ ನೋಟಿಫಿಕೇಷನ್ ನಲ್ಲಿ ಇದೇ ಜಾಗ ಎಂದು ಪರಿಗಣಿಸಲು ಯಾವುದೇ ಚಕ್ಕುಬಂದಿಯನ್ನು ನಮೂದಿಸಿಲ್ಲ.
ಎಂ.ಆರ್.19 ರಲ್ಲಿರುವ ಖಾತಾ ದಾಖಲೆಯೇ ಪ್ರಶ್ನಾರ್ಹವಾಗಿದ್ದು 1965 ರಿಂದ 1975 ರ ನಡುವೆ ಇದ್ದ ಅಳತೆ ಎಂದು ತಿಳಿಸಲಾಗಿದೆ ಎಂದರು., ಆದರೆ ಪಾಲಿಕೆ ದಾಖಲೆಗಳಲ್ಲಿ 1965 ರ ಹಿಂದೆ ಹಾಗೂ 1975 ರ ನಂತರವೂ ಇದು ಕಂಡುಬರುವುದಿಲ್ಲ.
ಸದರಿ ಜಾಗದ ನೈಜ ಅಳತೆಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ವರದಿ ಕೇಳಿದ್ದರೂ ಇದುವರೆಗೆ ಪಾಲಿಕೆ ವರದಿ ನೀಡಿಲ್ಲ, ಅಲ್ಲದೇ ಈ ಹಿಂದೆ ನೀಡಿದ್ದ ಸರ್ವೇ ವರದಿಯಲ್ಲಿ ಮೇಲಾಧಿಕಾರಿಯ ಸಹಿಯೇ ಇಲ್ಲ ಎಂದು ಅಂದಿನ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
2031 ನೇ ಇಸವಿ ವರೆಗಿನ ಸಿ.ಡಿ.ಪಿ, ಯೋಜನ ತಯಾರಿಸುವಾಗಲೂ ಸಹ ಸದರಿ ಜಾಗವನ್ನು ಕಡು ಹಸಿರು ಬಣ್ಣದಿಂದ ಗುರುತಿಸಿದ್ದು ಆಟದ ಮೈದಾನ ಅಥವಾ ಪಾರ್ಕ್ ಎಂದು ನಮೂದಿಸಲಾಗಿದೆ ಎಂದರು.