‘ಸರ್ಕಾರಿ ಜಮೀನು, ಗೋಮಾಳ ಸೇರಿದಂತೆ ತಲೆತಲಾಂತರದಿಂದ ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರ ಪಟ್ಟ ನೀಡಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಳ್ಳಾರಿ ಜಿಲ್ಲಾ ಸಂಚಾಲಕ ಚಿಕ್ಕ ಗಾದಿಲಿಂಗಪ್ಪ ಒತ್ತಾಯಿಸಿದರು.
ಹೊಸ ಜಿಲ್ಲಾಡಳಿತ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕ ಸಮಿತಿ ವತಿಯಿಂದ ಒಂದು ದಿನದ ಸಾಂಕೇತಿಕ ಪ್ರತಿಭಟನಾ ಧರಣಿಯನ್ನು ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿಯ ಸಂಚಾಲಕ ಗಾದಿಲಿಮಗಪ್ಪ ಮಾತನಾಡಿ, “ಬಗರ್ ಹುಕುಂ ಸಾಗುವಳಿದಾರರು ಕಳೆದ ಹಲವಾರು ದಶಕಗಳಿಂದ ಭೂಮಿಯನ್ನು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದಾರೆ. ರೈತರು ಸಾಗುವಳಿ ಭೂಮಿಯ ಪಟ್ಟ ನೀಡುವಂತೆ ಫಾರಂ ನಂಬರ್ 50 53 57 ಸಲ್ಲಿಸಿಕೊಂಡಿರುತ್ತಾರೆ. ಆದರೆ ಸರ್ಕಾರ ಇಲ್ಲಿಯವರೆಗೂ ಆ ಅರ್ಜಿಗಳನ್ನು ವಿಲೇವಾರಿ ಮಾಡದೆ ಮೀನಾ ಮೇಷ ಎಣಿಸುತ್ತಾ ಕಾಲಹರಣ ಮಾಡುತ್ತಿದೆ. ಕೂಡಲೇ ಬಗರ್ ಹುಕುಂ ರೈತರಿಗೆ ಭೂಮಿ ಪಟ್ಟ ನೀಡಬೇಕು” ಎಂಬ ಬೇಡಿಕೆ ಸೇರಿದಂತೆ ಹಲವಾರು ಹಕ್ಕೊತ್ತಾಯಗಳನ್ನು ನೀಡಿ ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಹೊಸಪೇಟೆ | ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯ: ಎಸ್‌ಎಫ್‌ಐಯಿಂದ ಪ್ರತಿಭಟನಾ ಧರಣಿ
ಹುಸೇನಪ್ಪ ರಾಜೇಶ್ವರಿ, ಪಿತಾಯಪ್ಪ ದುರ್ಗಪ್ಪ ತಳವಾರ್, ಈರಪ್ಪ ತಿಪ್ಪೇಸ್ವಾಮಿ ಲಾಲಪ್ಪ ವಿ ರಾಜಶೇಖರ್, ಸಂಗನಕಲ್ಲು ವಿಜಯ್ ಕುಮಾರ್, ರಮೇಶ್, ಆಂಜನೇಯ ವೆಂಕಪ್ಪ ಏಕೆ ಗಾದಿಲಿಂಗ ದೇವೇಂದ್ರ ಸಿದ್ದರಾಜು ಹಾಗೂ ಇತರರು.