ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ ಕೂಡಲೇ ಅದನ್ನು ಕೈ ಬಿಡಬೇಕು ಎಂದು ಕರ್ನಾಟಕ ಜನ ಶಕ್ತಿ ಸಂಚಾಲಕ ಮಾರೆಪ್ಪ ಹರವಿ ಒತ್ತಾಯಿಸಿದರು.
ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಹೋಬಳಿಯ ಕುರುಬದೊಡ್ಡಿ ಗ್ರಾಮದಲ್ಲಿ 147 ಎಕರೆ, ಚಂದ್ರಬಂಡ ಹೋಬಳಿಯ ಚಂದ್ರಬಂಡ, ಸಿಂಗನೋಡಿ ಗ್ರಾಮದಲ್ಲಿ 508 ಎಕರೆ ಹಿಡುವಳಿಯ ಒಟ್ಟು 655 ಎಕರೆ ಸ್ವಾಧೀನಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ಜುಲೈ 28 ರಂದು ಹಿಡುವಳಿ ರೈತರ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ರೈತರ ಭೂಮಿ ಸ್ವಾಧೀನ ಬಗ್ಗೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಬಹುತೇಕ ಹಳ್ಳಿಗಳಲ್ಲಿ ರೈತರು ಭೂಮಿಯನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ. 2013 ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಸದರಿ ಹಿಡಿವಳಿದಾರರ ಪೈಕಿ ಶೇಕಡ 80 ರಷ್ಟು ಒಪ್ಪಿಗೆಯನ್ನು ಕಡ್ಡಾಯವಾಗಿ ಸೂಚಿಸಬೇಕು. ಆದರೆ ಸರ್ಕಾರ ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳಲಿಕ್ಕೆ ಹೊರಟಿದೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಾವು ಕಡಿತ 4 ವರ್ಷದ ಬಾಲಕಿ ಸಾವು
ಈ ವೇಳೆ ಆಂಜನೇಯ, ನರಸಪ್ಪ, ಬಸವರಾಜ, ನರಸಿಂಹಲು, ಭೀಮಯ್ಯ, ನರಸಪ್ಪ ಕುರುಬದೊಡ್ಡಿ ಉಪಸ್ಥಿತರಿದ್ದರು.
