20 ವರ್ಷಗಳ ಕಾಲ ಕೋಮಾದಲ್ಲಿದ್ದ ಸೌದಿಯ ‘ಸ್ಲೀಪಿಂಗ್ ಪ್ರಿನ್ಸ್’ ಅಲ್ ವಲೀದ್ ಖಾಲಿದ್ ಬಿನ್ ತಲಾಲ್ ಇನ್ನಿಲ್ಲ

Date:

Advertisements

2005ರಲ್ಲಿ ಇಂಗ್ಲೆಂಡಿನಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದ ನಂತರ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಕೋಮಾದಲ್ಲಿದ್ದ (ಗಾಢ ನಿದ್ರಾವಸ್ಥೆ) ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅವರು ಜುಲೈ 19ರ ಶನಿವಾರದಂದು ನಿಧನರಾಗಿರುವುದಾಗಿ ಸೌದಿ ಅರೇಬಿಯಾದ ಮಾಧ್ಯಮಗಳು ವರದಿ ಮಾಡಿದೆ.

ರಾಜಕುಮಾರ ತಲಾಲ್ 36 ವರ್ಷ ವಯಸ್ಸಿನವರಾಗಿದ್ದರು. ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳ ಹೊರತಾಗಿಯೂ ಅವರು ಚೇತರಿಸಿಕೊಳ್ಳುವ ಆಶಾಭಾವನೆಯನ್ನು ಅವರ ಕುಟುಂಬವು ಹೊಂದಿತ್ತು. ಆದರೆ, ಶನಿವಾರ ಕೊನೆಯುಸಿರೆಳೆದಿರುವುದಾಗಿ ರಾಜಮನೆತನದ ಅಧಿಕಾರಿಗಳು ಸೌದಿ ಅರೇಬಿಯಾದ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.

ಈ ನಡುವೆ ಕಳೆದ ಜೂನ್ 2025ರಲ್ಲಿ ಅವರು ಕೋಮಾದಿಂದ ಎಚ್ಚರಗೊಂಡಿದ್ದಾರೆ ಎಂದು ತಪ್ಪಾಗಿ ವರದಿಯನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಆದರೆ ಈ ವರದಿಗಳು ಸೌದಿ ರ್‍ಯಾಲಿ ಚಾಲಕ ಅಲ್ ರಾಜಿ ಎಂಬಾತನ ವಿಡಿಯೋವನ್ನು ತಪ್ಪಾಗಿ ಬಳಸಿಕೊಂಡಿದ್ದವು ಎಂದು ಆ ಬಳಿಕ ತಿಳಿದುಬಂದಿತ್ತು.

ಯಾರು ಈ ತಲಾಲ್?

ರಾಜಕುಮಾರ ಅಲ್-ವಲೀದ್ ಸೌದಿ ಅರೇಬಿಯಾದ ಸಂಸ್ಥಾಪಕ ರಾಜ ಅಬ್ದುಲ್ ಅಜೀಜ್ ಅವರ ಮರಿಮೊಮ್ಮಗ. ರಾಜಕುಮಾರ ತಲಾಲ್ ಬಿನ್ ಅಬ್ದುಲಾಜೀಜ್ ಅವರ ಸುಪುತ್ರ. ರಾಜಕುಮಾರ ಅಲ್-ವಲೀದ್ ಸೌದಿ ರಾಜಮನೆತನದ ಉತ್ತರಾಧಿಕಾರಿಯಾಗಿ ಎಲ್ಲರ ಸಮ್ಮುಖದಲ್ಲಿ ರಾರಾಜಿಸಬೇಕಿತ್ತು. ಆದರೆ, ಎಲ್ಲವೂ ಅದೊಂದು ಭೀಕರ ದುರಂತ ಘಟನೆಯಿಂದ ಮಾಸಿ ಹೋಗಿದೆ. ಕಳೆದ 20 ವರ್ಷಗಳಿಂದ ಪ್ರಿನ್ಸ್ ವಾಲಿದ್ ಹಾಸಿಗೆ ಮೇಲೆಯೇ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರಿನ್ಸ್ ಅಲ್-ವಲೀದ್ ಕಳೆದ 20 ವರ್ಷಗಳಿಂದ ವೆಂಟಿಲೇಟರ್ ಸಹಾಯದಲ್ಲಿದ್ದರು., ಫೀಡಿಂಗ್ ಟ್ಯೂಬ್ ಮೂಲಕ ಆಹಾರವನ್ನು ನೀಡಲಾಗುತ್ತಿತ್ತು.

ಮಲಗಿದ್ದಲ್ಲೇ ಇದ್ದದ್ದರಿಂದ ರಾಜಕುಮಾರ ತಲಾಲ್ ಅವರನ್ನು ‘ಸ್ಲೀಪಿಂಗ್ ಪ್ರಿನ್ಸ್‌’ ಎಂದೇ ಗುರುತಿಸಲಾಗುತ್ತಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೋಹಾ | ಕರ್ನಾಟಕ ಸಂಘ ಕತಾರ್, ಐಸಿಸಿ ಸಹಯೋಗದೊಂದಿಗೆ ‘ಎಂಜಿನಿಯರ್ಸ್‌ ಡೇ’ ಆಚರಣೆ

ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿನದ ಅಂಗವಾಗಿ, ಕರ್ನಾಟಕ...

Breaking | ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ನಿಂದ ಮಧ್ಯಂತರ ತಡೆ

ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ...

ಭಾರತ-ಭೂತಾನ್ ನಡುವೆ 2 ಗಡಿಯಾಚೆಗಿನ ರೈಲು ಯೋಜನೆ ಘೋಷಣೆ

ಭೂತಾನ್ ಮತ್ತು ಭಾರತದ ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕ ನಿರ್ಮಿಸುವ...

ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ...

Download Eedina App Android / iOS

X