ಭಾರತ-ಭೂತಾನ್ ನಡುವೆ 2 ಗಡಿಯಾಚೆಗಿನ ರೈಲು ಯೋಜನೆ ಘೋಷಣೆ

Date:

ಭೂತಾನ್ ಮತ್ತು ಭಾರತದ ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕ ನಿರ್ಮಿಸುವ ಯೋಜನೆಯನ್ನು ಉಭಯ ರಾಷ್ಟ್ರಗಳು ಘೋಷಿಸಿವೆ. 4,000 ಕೋಟಿ ರೂ. ವೆಚ್ಚದಲ್ಲಿ ಎರಡು ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತದೆ ಎಂದು ಭಾರತ ಹೇಳಿಕೊಂಡಿದೆ.

- Advertisement -

ಭೂತಾನ್ ಜೊತೆಗಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧವನ್ನು ಹೆಚ್ಚಿಸುವ ಉದ್ದೇಶದಿಂದ ರೈಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಭೂತಾನ್‌ನ ಗೆಲೆಫು ಮತ್ತು ಸಮತ್ಸೆ ನಗರಗಳಿಗೆ ಅಸ್ಸಾಂನ ಕೊಕ್ರಝಾರ್ ಮತ್ತು ಪಶ್ಚಿಮ ಬಂಗಾಳದ ಬನಾರ್ಹತ್‌ ನಗರಗಳಿಂದ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಬನಾರ್ಹತ್ ಮತ್ತು ಸಮತ್ಸೆ ಹಾಗೂ ಕೊಕ್ರಜಾರ್ ಮತ್ತು ಗೆಲೆಫು ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕಗಳನ್ನು ಸ್ಥಾಪಿಸಲು ಎರಡೂ ಸರ್ಕಾರಗಳು ಒಪ್ಪಿಕೊಂಡಿವೆ. ಎರಡು ಯೋಜನೆಗಳ ಅಡಿಯಲ್ಲಿ ಒಟ್ಟು 89 ಕಿಮೀ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

“ಭಾರತ ಮತ್ತು ಭೂತಾನ್ ಅತ್ಯುತ್ತಮ ನಂಬಿಕೆ, ಪರಸ್ಪರ ಗೌರವ ಹಾಗೂ ತಿಳುವಳಿಕೆ ಸಂಬಂಧಗಳನ್ನು ಹಂಚಿಕೊಂಡಿವೆ. ಇದು ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳು, ಜನರ ನಡುವಿನ ಸಂಬಂಧಗಳು ಹಾಗೂ ನಮ್ಮ ಅಭಿವೃದ್ಧಿ ಮತ್ತು ಭದ್ರತಾ ಹಿತಾಸಕ್ತಿಗಳಲ್ಲಿ ಬೇರೂರಿರುವ ಸಂಬಂಧವಾಗಿದೆ” ಎಂದು ಮಿಶ್ರಿ ಹೇಳಿದ್ದಾರೆ.

ಭೂತಾನಿನ ಮೇಲೆ ತನ್ನ ಕಾರ್ಯತಂತ್ರದ ಪ್ರಭಾವವನ್ನು ಹೆಚ್ಚಿಸಲು ಚೀನಾ ನಿರಂತರ ಪ್ರಯತ್ನ ಮಾಡುತ್ತಿದೆ. ಇದೇ ಸಮಯದಲ್ಲಿ ಭಾರತವು ರೈಲು ಯೋಜನೆಗಳನ್ನು ಘೋಷಿಸಿದೆ.

ಈ ಲೇಖನ ಓದಿದ್ದೀರಾ?: ಬೌದ್ಧರು, ಮುಸ್ಲಿಮರನ್ನು ಒಂದು ಮಾಡಿದೆ ಅಸ್ಮಿತೆಯ ಹೋರಾಟ: ಬಿಜೆಪಿ ಕುತಂತ್ರಕ್ಕಿಲ್ಲ ಆಸ್ಪದ

ಕಳೆದ ವರ್ಷ, ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ, ರೈಲು ಸಂಪರ್ಕಗಳನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಕೊಕ್ರಜಾರ್ ಮತ್ತು ಬನಾರ್ಹತ್‌ನಲ್ಲಿರುವ ಭಾರತೀಯ ರೈಲ್ವೇ ನಿಲ್ದಾಣಗಳಿಂದ ಭೂತಾನ್‌ಗೆ ರೈಲು ಸಂಪರ್ಕ ದೊರೆಯಲಿದೆ. ಈ ಮಾರ್ಗಗಳಿಗಾಗಿ ಸುಮಾರು 4,033 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ.

ಕೊಕ್ರಝಾರ್ ಮತ್ತು ಗೆಲೆಫು ನಡುವಿನ 71.39 ಕಿ.ಮೀ ರೈಲು ಮಾರ್ಗದಲ್ಲಿ 69 ಕಿಮೀ ಉದ್ದದ ರೈಲು ಮಾರ್ಗವನ್ನು ಭಾರತವು 3,456 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಿದೆ. ಉಳಿದ 2.39 ಕಿ.ಮೀ ಮಾರ್ಗವನ್ನು ನೇಪಾಳ ನಿರ್ಮಿಸುತ್ತದೆ. ಮಾರ್ಗವು ಆರು ನಿಲ್ದಾಣಗಳು ಇರುತ್ತವೆ. ಎರಡು ವಯಾಡಕ್ಟ್‌ಗಳು, 29 ಪ್ರಮುಖ ಸೇತುವೆಗಳು, 65 ಸಣ್ಣ ಸೇತುವೆಗಳು, ಎರಡು ಗುಡ್‌ಶೆಡ್‌ಗಳು, ಒಂದು ರಸ್ತೆ-ಮೇಲ್ಸೇತುವೆ (ROB) ಮತ್ತು 39 ರಸ್ತೆ-ಕೆಳ ಸೇತುವೆಗಳನ್ನು (RUBs) ರೈಲು ಮಾರ್ಗವು ಒಳಗೊಂಡಿರುತ್ತದೆ. ಅನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಬನಾರ್ಹತ್‌ನಿಂದ ಸಮತ್ಸೆ ನಡುವಿನ ಎರಡನೇ ಮಾರ್ಗವು 20 ಕಿ.ಮೀ ಉದ್ದವಿದ್ದು, ನಡುವೆ ಎರಡು ರೈಲು ನಿಲ್ದಾಣಗಳು ಇರುತ್ತವೆ. ಈ ಮಾರ್ಗವು 577 ಕೋಟಿ ರೂ. ವೆಚ್ಚದಲ್ಲಿ ಮೂರು ವರ್ಷಗಳ ಪೂರ್ಣಗೊಳ್ಳುವ ಗುರಿ ಇದೆ ಎಂದು ವೈಷ್ಣವ್ ವಿವರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...