ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಶಂಕರ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಪೋಷಕ ನಾಗಶೆಟ್ಟಿ ಎಂಬುವರು ʼತಮ್ಮ ಮಗನಿಗೆ ವಸತಿ ಶಾಲೆಗೆ ಪ್ರವೇಶಕ್ಕಾಗಿ ಪ್ರಾಚಾರ್ಯ ಶಂಕರ್ ಅವರು ₹25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರುʼ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಛಲವಿದ್ದರೆ ಮಾತ್ರ ಗುರಿ ಮಟ್ಟಲು ಸಾಧ್ಯ: ಉಪ ವಿಭಾಗಾಧಿಕಾರಿ
ಈ ಬಗ್ಗೆ ನಾಗಶೆಟ್ಟಿ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್ಪಿ ಓಲೇಕಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪ್ರಾಚಾರ್ಯ ಶಂಕರ್ ಅವರನ್ನು ವಸತಿ ಶಾಲೆಯಲ್ಲಿ ಸಾಕ್ಷಿ ಸಮೇತ ಸೆರೆಹಿಡಿದಿದ್ದಾರೆ.