ಟೀಕೆ ಟಿಪ್ಪಣಿಗಳನ್ನು ಪರಿಣಾಮಕಾರಿಯಾಗಿ ಎದುರಿಸಿದಾಗ ಸಾಧನೆಯ ಹಾದಿಯಲ್ಲಿ ನಡೆಯಬಹುದು ಕೃಷ್ಣ, ರಾಮನಿಗೂ ಟೀಕೆ ತಪಲಿಲ್ಲ ಹಾಗೆ ನಾವು ಸಾಮಾಜಿಕವಾಗಿ ಮಾಡುವ ಕೆಲಸಕ್ಕೆ ಟೀಕೆಗಳು ಸಾಮಾನ್ಯ, ಆತ್ಮ ಸಾಕ್ಷೀ ಒಪ್ಪುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ.ನಿ ಪುರುಷೋತ್ತಮ್ ತಿಳಿಸಿದರು.
ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಾಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಮ್ಮೇಳನದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಪತ್ರಕರ್ತರ ಸಮ್ಮೇಳನದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ವರದಿ, ಕಾರ್ಯಕ್ರಮದ ನೇರಪ್ರಸಾರ, ಪೋಟೋ, ವಿಡಿಯೋ ಶೂಟಿಂಗ್‌ಗಳಲ್ಲಿ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರ ಇದಕ್ಕೆ ನಿಮ್ಮನ್ನು ಶ್ಲಾಘಿಸಬೇಕು. ಇಂತಹ ಕೆಲಸಗಳಿಂದ ನಾಯಕತ್ವ ಗುಣ ಬರುತ್ತದೆ. ನಿಮ್ಮ ಕಾರ್ಯಚಟುವಟಿಕೆಗಳನ್ನು ಮೆಚ್ಚಿದ್ದೇವೆ. ಇಲ್ಲಿನ ನಿರ್ದೇಶಕರು ಬಹಳ ಸ್ವಯಂ ಪ್ರೇರಿವಾಗಿ ಕೆಲಸ ಮಾಡುತ್ತಾರೆ. 90 ವರ್ಷಗಳ ಪತ್ರಕರ್ತರ ಸಂಘ ಇತಿಹಾಸ ನಿರ್ಮಿಸಿದೆ. ಎಸ್‌ಎಸ್‌ಐಟಿಯಲ್ಲಿ ಗೃಹ ಸಚಿವರ ಸಲಹೆ ಮಾರ್ಗದರ್ಶನದಂತೆ ಬೃಹತ್ ಗಾತ್ರದ ವೇದಿಕೆಯಲ್ಲಿ ಬಹಳ ಅದ್ದೂರಿಯಾಗಿ ನಡೆದ 39ನೇ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದ ಬಗ್ಗೆ ಹೊರ ಜಿಲ್ಲೆ ಜನರ ಚರ್ಚೆ ಮಾಡುತ್ತಿದ್ದಾರೆ. ಇದರಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗ ಸಮ್ಮೇಳನಕ್ಕೆ ದುಡಿದಿದ್ದೀರಿ ಇದಕ್ಕೆ ನಿಮಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿದರು.

ಡಾ.ಜಿ.ಪರಮೇಶ್ವರ ಅವರು ನೀಡಿದ ಹಣವನ್ನು ಸದ್ವಿನಿಯೋಗವಾಗಲು ಮೀಸಲು ಮಾಡಲಾಗಿದೆ. ಪತ್ರಕರ್ತರ ಸಂಘ ಇಂದು ಅನೇಕ ಜನಪರ ಕೆಲಸ ಮಾಡಿದ್ದೇವೆ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತಯಾರು ಮಾಡಿದ ಸ್ಮರಣ ಸಂಚಿಕೆಯನ್ನು ನೋಡಿದ ಸಚಿವರು ಹಾಡಿ ಹೊಗಳಿದ್ದಾರೆ ಮಾಧ್ಯಮ ಅಧ್ಯಯನ ಕೇಂದ್ರದ ಜೊತೆಗೆ ಅನೇಕ ಕಾರ್ಯಾಗಾರಗಳನ್ನು ಮಾಡಿದ್ದೇವೆ ಇಂತಹ ಕಾರ್ಯಕ್ರಮಗಳು ಇಲ್ಲಿನ ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ ಮುಂದಿನ ದಿನಗಳಲ್ಲಿ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಇನಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗವುದು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್ ಮಾತನಾಡಿ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವು ಅದ್ದೂರಿಯಾದ ಯಶಸ್ಸನ್ನು ಕಂಡಿದೆ. ಈ ಯಶಸ್ಸಿನ ಹಿಂದೆ ಇರುವಂತಹ ಹಲವಾರು ಕೈಗಳಲ್ಲಿ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರು, ಸಹ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಶ್ರಮದ ಕೈಗಳು ಕೂಡ ಕಾರಣವಾಗಿರುವುದು ನಮಗೆ ಸಂತಸ ತಂದುಕೊಟ್ಟಿದೆ. ಈ ನಿಟ್ಟಿನಲ್ಲಿ ಮಾಧ್ಯಮ ವಿದ್ಯಾರ್ಥಿಗಳು ಈ ರೀತಿ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅವಶ್ಯಕ. ಪ್ರಮುಖವಾಗಿ ವಿದ್ಯಾರ್ಥಿಗಳ ಸಹಕಾರ ಹೆಚ್ಚಿನ ಪಾತ್ರವನ್ನು ವಹಿಸಿತು ಹೀಗೆ ಈ ಸಮ್ಮೇಳನದ ಯಶಸ್ಸಿಗೆ ಕಾರಣಕರ್ತರಾದ ಎಲ್ಲ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಇದೇ ಸಂಧರ್ಭದಲಿ ಪತ್ರಕರ್ತರ ಸಮ್ಮೇಳನದಲ್ಲಿ ದುಡಿದಂತಹ ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು,
ಇದೇ ಸಂಧರ್ಭದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ನಿರ್ದೇಶಕರಾದ ಡಾ. ಬಿ.ಟಿ ಮುದ್ದೇಶ್, ಸಹ ಪ್ರಾಧ್ಯಾಪಕರಾದ ಡಾ.ಜ್ಯೋತಿ, ಶ್ವೇತ, ಮಣಿ, ಕಿರಣ್ , ನವೀನ್ ಕುಮಾರ್, ರವಿಕುಮಾರ್, ಶಿವಕುಮಾರ್, ಎಸ್ ಡಿ ಎ ಮಂಜುಳಾ, ಸಹಾಯಕರಾದ ಶಿಲ್ಪ ರೇಡಿಯೋ ಸಿದ್ಧಾರ್ಥದ ಸಂಯೋಜಕರಾದ ಗೌತಮ್ ಎ.ವಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.