ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಕೆಮಿಕಲ್ ಮಿಶ್ರಿತ ಹಾಲು ತಯಾರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಸವಟೂರು ಗ್ರಾಮದ ನರೇಶ್ ರೆಡ್ಡಿ ಎನ್ನುವವರು ಮನೆಯಲ್ಲಿ ಯೂರಿಯಾ, ಸೋಡಾ, ಕೃತಕ ಬಣ್ಣ ಬಳಸಿ ಹಾಲು ತಯಾರಿಕೆ ಮಾಡಿ ಆಂಧ್ರದ ತಿರುಮಲ ಡೈರಿಗೆ ಹಾಲು ಪೂರೈಸುತ್ತಿದ್ದರು ಎಂದು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ.

ಹಾಲನ್ನು ಖಾಸಗಿ ಲ್ಯಾಬ್ ಗೆ ಕಳುಹಿಸಿ ಹಾಲಿನಲ್ಲಿ ಕೆಮಿಕಲ್ ಬಳಕೆ ದೃಢ ಆಗಿದೆ ಎಂದು ವರದಿ ಬಂದಿದ್ದು, ನಂಗಲಿ ಪೊಲೀಸ್ ಠಾಣೆಯಲ್ಲಿ FOOD SAFETY ACT ಮತ್ತು BNS ಕಾಯ್ದೆ ಯಡಿ ಕೇಸ್ ದಾಖಲಿಸಿಕೊಂಡಿದ್ದಾರೆ.