ಕೋಲಾರ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಲ್ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಎಚ್.ವಿ ಸುಬ್ರಮಣಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ ಆದರ್ಶ ಆಯ್ಕೆಯಾದರು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಭವನದ ಸಭಾಂಗಣದಲ್ಲಿ ನಡೆದ 2027-28ರ ಅವಧಿಗೆ ಚುನಾವಣೆ ನಡೆಯಿತು.
ಜಿಲ್ಲಾ ಅಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 8 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅಂತಿಮವಾಗಿ 251 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಉಪಾಧ್ಯಕ್ಷರಾಗಿ ಸುಬ್ರಮಣಿ ಎಚ್ ವಿ 236 ಮತಗಳು, ಪ್ರಧಾನ ಕಾರ್ಯದರ್ಶಿಯಾಗಿ ಆದರ್ಶ್ ಕೆ.ವಿ 230 ಮತಗಳು, ಖಜಾಂಚಿಯಾಗಿ ಗಾಯಿತ್ರಿ ಪಿ 306 ಮತಗಳನ್ನು ಗಳಿಸಿ ಕೊಂಡಿದ್ದಾರೆ. ಇನ್ನೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಂಬರೀಷ್ ವಿ. 325, ಭಗತ್ ವರ್ಮಾ 327, ಲೋಕೇಶ್ ಜಿ. ಕೆ. 388, ಲೋಕೇಶ್ ಗೌಡ 326, ಮಂಜುನಾಥ್ ಕೆ 323, ಸತೀಶ್ ಎಂ. 374 ಮತಗಳನ್ನು ಗಳಿಸಿಕೊಳ್ಳುವ ಮೂಲಕ ಜಯಗಳಿಸಿದ್ದಾರೆ.
ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಲ್. ಶ್ರೀನಿವಾಸ್ ಮಾತನಾಡಿ, ವಕೀಲರ ಸಂಘದ ಶ್ರೇಯೋಭಿವೃದ್ದಿ, ವಕೀಲರ ಹಿತ ಕಾಯುವ ಕೆಲಸವನ್ನು ವಿಶ್ವಾಸದಿಂದ ಮಾಡುತ್ತೇನೆ ಎಂದು ತಿಳಿಸಿದರಲ್ಲದೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿ, ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ವಕೀಲರು ಅಭಿನಂದನೆ ತಿಳಿಸಿದರು.
ಇದನ್ನೂ ಓದಿ: ಕೋಲಾರ | ಮನೆಯಲ್ಲೇ ಕೆಮಿಕಲ್ ಮಿಶ್ರಿತ ಹಾಲು ತಯಾರಿ; ದೂರು ದಾಖಲು