ಸಮಾಜವನ್ನು ಕೋಮುವಾದ ದೌರ್ಜನ್ಯದಿಂದ ಮುಕ್ತಗೊಳಿಸಲು ಸಂವಿಧಾನದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು. ಇತರರಿಗೆ ಸಂವಿಧಾನದ ಆಶಯಗಳನ್ನು ಅರ್ಥಮಾಡಿಸಬೇಕು. ಯುವಕರು ಧರ್ಮ ಜಾತಿಯ ಭೇದ ಭಾವವಿಲ್ಲದೆ ಎಲ್ಲರನ್ನು ಪ್ರೀತಿಸುವಂತಾಗಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.
ಕೋಲಾರ ನಗರದ ಸುವರ್ಣ ಕನ್ನಡ ಭವನದಲ್ಲಿ ನಡೆದ ʼಸಂವಿಧಾನ ಓದು ಅಭಿಯಾನʼದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, “ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಹಂಚಿಕೊಳ್ಳಬೇಕು. ಸಮಯ ಸಿಕ್ಕಾಗ ಜಾತ್ಯತೀತ ಮತ್ತು ಸಮ ಸಮಾಜದ ಬಗ್ಗೆ ಮಾತನಾಡಿ. ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಸಮಾಜದಲ್ಲಿ ಪಸರಿಸಬೇಕು” ಎಂದರು.
ಬೆಂಗಳೂರಿನ ಅನಂತ ನಾಯಕ್ ಮಾತನಾಡಿ, “ಸಂವಿಧಾನದ ಆಶಯಗಳನ್ನು ಮತ್ತು ಮೌಲ್ಯಗಳನ್ನು ಪ್ರಚಾರ ಮಾಡಬೇಕು .ಕೋಮುವಾದ ,ಜಾತಿ ವ್ಯವಸ್ಥೆಯಿಂದ ನಡೆಯುವ ದೌರ್ಜನ್ಯಗಳನ್ನು ಸಂವಿಧಾನ ಮಾತ್ರ ತಡೆಯ ಬಹುದಾಗಿದೆ.ಎಲ್ಲರು ಸಮಾನರೆಂಬ ಭಾವನೆ ಬರಬೇಕಾದರೆ ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಅಲ್ಪ ಸಂಖ್ಯಾತರನ್ನು ಅನುಮಾನದಿಂದ ನೋಡಲಾಗುತ್ತಿದೆ. ಸಮಾಜವನ್ನು ಕೋಮುವಾದ ದೌರ್ಜನ್ಯದಿಂದ ಮುಕ್ತಗೊಳಿಸಲು ಸಂವಿಧಾನದಿಂದ ಮಾತ್ರ ಸಾಧ್ಯ .ಸಮ ಸಮಾಜ ಮತ್ತು ಜಾತಿರಹಿತ ಸಮಾಜ ನಿರ್ಮಾಣ ಮಾಡಲು ಸಂವಿಧಾನವನ್ನು ಅಸ್ತ್ರವನ್ನಾಗಿ ಬಳಸಬೇಕೆಂದು” ತಿಳಿಸಿದರು.
ಇದನ್ನೂ ಓದಿ: ಕೋಲಾರ | ಮನೆಯಲ್ಲೇ ಕೆಮಿಕಲ್ ಮಿಶ್ರಿತ ಹಾಲು ತಯಾರಿ; ದೂರು ದಾಖಲು
“ಸಂವಿಧಾನದ ರಥವನ್ನು ರಾಜ್ಯದ ಎಲ್ಲ ಕಡೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನಿರಂತರವಾಗಿ ಎಲ್ಲೆಡೆ ಎಳೆದುಕೊಂಡು ಹೋಗುತ್ತಿದ್ದಾರೆ. ಅವರೊಂದಿಗೆ ನಾವು ಹೆಗಲು ನೀಡ ಬೇಕು. ಸಂವಿಧಾನದ ಆಶಯಗಳನ್ನು ನಿರಂತರವಾಗಿ ಎಲ್ಲರಿಗೂ ತಲಪಿಸಬೇಕು. ಸಂವಿಧಾನವನ್ನು ಬದಲಿಸುತ್ತೇವೆ ಎಂದು ಒಂದು ಗುಂಪು ಹೇಳುತ್ತಿದೆ. ಅವರಿಗೆ ಸಂವಿಧಾನದ ಆಶಯಗಳ ಬಗ್ಗೆ ಅರಿವು ಇಲ್ಲ. ಪದೇ ಪದೇ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ದೇಶದ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡ ಅನಂತನಾಯಕ್, ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಜೆ.ಜಿ. ಲೇಖಕ ಗೋವಿಂದಪ್ಪ, ಮೌಲಾನ ಅತೀಕ್ ಉರ್ ರೆಹಮಾನ್, ಕೋಲಾರ ಕೂಡ ಅಧ್ಯಕ್ಷ ಹನೀಫ್, ಕೋಮಲ್ ನಿರ್ದೇಶಕ ಷಂಷೀರ್, ರಾಜ್ ವಕ್ಫ್ ಬೋರ್ಡ್ ನಿರ್ದೇಶಕ ಸಚೀನ್ ಜಾವೀದ್, ಬೆಳಕು ಸಂಸ್ಥೆಯ ರಾಧಾಮಣಿ, ದಲಿತ ಮುಖಂಡ ಟಿ.ವಿಜಯಕುಮಾರ್, ರೈತ ಮುಖಂಡ ಅಬ್ಬಣಿ, ಶಿವಪ್ಪ, ಹೂವಳ್ಳಿ ನಾಗರಾಜ್, ಅರಿಫ್ ಉಲ್ಲಾ ಖಾನ್, ಶಶಿಕುಮಾರ್, ಗೋವಿಂದಪ್ಪ, ಗೋಪಿನಾಥ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ ಶ್ರೀನಿವಾಸನ್, ವಿವಿಧೆಡೆಯಿಂದ ಬಂದಿದ್ದ ಪ್ರತಿನಿಧಿಗಳು, ವಿದ್ಯಾರ್ಥಿಗಳು ಇದ್ದರು.