ಗೊಬ್ಬರ, ಯೂರಿಯಾ ಕೊರತೆ ಹೆಚ್ಚಾಗಿ ವಿಜಯನಗರದ ಹಗರಿಬೊಮ್ಮನಹಳ್ಳಿ ಆಗ್ರೋ ಕೇಂದ್ರಗಳ ಮುಂದೆ ಖರೀದಿಗಾಗಿ ರೈತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
2 ತಿಂಗಳುಗಳ ಕಾಲ ಮಳೆ ಅಭಾವ ಕಂಡುಬಂದಿತ್ತು, ಬರಗಾಲದ ಛಾಯೆ ಗೋಚರಿಸುವ ಸಮಯದಲ್ಲೇ, 3-4 ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈಗಾಗಲೇ ರೈತರು ಬತ್ತ, ಕಬ್ಬು, ಸಜ್ಜೆ, ಮೆಕ್ಕೆಜೋಳ, ಹೆಸರು, ಎಳ್ಳು ಮುಂತಾದ ಮುಂಗಾರು ಬೆಳೆಗಳನ್ನು ಬಿತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ರಾಸಾಯನಿಕ ಗೊಬ್ಬರದ ಕೊರತೆ ಜಿಲ್ಲೆಯಲ್ಲಿ ಹೆಚ್ಚಾಗಿದೆ.

ತಾಲೂಕು ಕೃಷಿ ಕೇಂದ್ರದಲ್ಲಿ ಅಲ್ಲದೇ, ಖಾಸಗಿ ಆಗ್ರೋ ಕೇಂದ್ರಗಳಲ್ಲೂ ಯೂರಿಯಾ ಗೊಬ್ಬರದ ಕೊರೆತೆಯಿಂದ ರೈತರು ಪರದಾಡುವಂತಾಗಿದೆ. ರೈತ ಗವಿಯಪ್ಪ ಈದಿನ.ಕಾಮ್‌ನೊಂದಿಗೆ ಮಾತನಾಡಿ, 5 ಎಕರೆ ಇದ್ದರೂ ಒಂದೇ ಚೀಲ ಕೊಡ್ತಿದ್ದಾರ, 1ಎಕರೆ ಇದ್ದರೂ ಅಷ್ಟೇ ಕೊಡ್ತದ್ದಾರ. ಒಂದು ಚೀಲ ಹೊಲದ ಯಾವ ಭಾಗಕ್ಕೂ ಸಾಲದಿಲ್ಲ ಅಳಲು ತೊಡಿಕೊಂಡರು.
ಇದನ್ನೂ ಓದಿ: ವಿಜಯನಗರ | ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಾಹ್ನವಿ ನೇಮಕ