ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯಿಂದ ಕಲ್ಲಿಹಾಳ್, ಅರಹತೋಳಲು ಕ್ಲಸ್ಟರ್ ವ್ಯಾಪ್ತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಎಸ್ ಡಿ ಎಂ ಸಿಯ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಕಾರ್ಯಗಾರ ನಡೆಸಲಾಗಿದೆ.
ಹಾಗೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರುಗಳ ನೇಮಕಾತಿಯ ಬಗ್ಗೆ ಶಿಕ್ಷಣ ಸಚಿವರಿಗೆ ಗಮನಕ್ಕೆ ತರುವ ಮೂಲಕ ಶೀಘ್ರ ನೇಮಕಾತಿ ಮಾಡಬೇಕು ಎಂದು ವೇದಿಕೆಯಿಂದ ಹಕ್ಕೋತ್ತಾಯಯನ್ನ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಎಸ್ ಡಿ ಎಂ ಸಿ ಜಿಲ್ಲಾಧ್ಯಕ್ಷರಾದ ಆರ್ ವೀರಾಚಾರ್ ತಿಳಿಸಿದ್ದಾರೆ.

ಎಸ್ ಡಿ ಎಂ ಸಿ ಯಿಂದ ಎಲ್ ಕೆ ಜಿ ಮತ್ತು ಯು ಕೆ ಜಿ ತರಗತಿಗಳನ್ನು ಉತ್ತಮವಾಗಿ ನೆಡಸಿಕೊಂಡು ಬರುತ್ತಿರುವ ಶಾಲೆಗಳಲ್ಲಿ ದಾಖಲಾತಿಗಳು ಹೆಚ್ಚಾಗಿದೆ ಎಂಬ ವಿಷಯ ಚರ್ಚಿಸಿ ತಿಳಿಸಿದ್ದಾರೆ,ಹಾಗೂ ಶಾಲಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.
ಈ ಒಂದು ಕಾರ್ಯಾಗಾರದಲ್ಲಿ ಜಿಲ್ಲಾ ಅಧ್ಯಕ್ಷರಾದ ಆರ್ ವೀರಾಚಾರ್ ಮತ್ತು ತಾಲ್ಲೂಕ್ ಅಧ್ಯಕ್ಷರಾದ ಕಾಂತರಾಜ್, ಹಾಗೂ ವೇದಿಕಯ, ಪದಾಧಿಕಾರಿಗಳಾದ ಸೀತಾರಾಮ್,ಶ್ರೀಕಾಂತ್, ಬಸವರಾಜ್, ಸಂಗಪ್ಪ ಮತ್ತು ಎರಡು ಕ್ಲಸ್ಟರ್ ನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು.