ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ ಸ್ವಾಮಿ ಪೂಜೆಗೆ ದೇಶಿ ಗೋವಿನ ಹಾಲನ್ನಷ್ಟೇ ಬಳಸಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ವಿಚಾರಣೆ ವೇಳೆ “ಆಗಮ ಶಾಸ್ತ್ರದ ಪ್ರಕಾರ ದೇಶಿ ಮತ್ತು ವಿದೇಶಿ ಮೂಲದ ಹಸುವಿನ ಹಾಲಿನಲ್ಲಿ ವ್ಯತ್ಯಾಸವಿದೆ ಎಂದು ಯುಗ ತುಳಸಿ ಪೌಂಡೇಶನ್ ಪರ ವಕೀಲರು ವಾದಿಸಿದರು. ಆಗ “ಹಸು ಎಂದರೆ ಹಸು ಅಷ್ಟೆ’ ಎಂದು ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಹಾಗೂ ನ್ಯಾಯಮೂರ್ತಿ ಕೋಟೇಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠ ಪ್ರತಿಕ್ರಿಯಿಸಿತು.
ಈ ದಿನ ಸಂಪಾದಕೀಯ | ಪ್ರತಿಭಟಿಸಿದರೆ ಸಾಕು ಜೈಲು ಶಿಕ್ಷೆ; ಇದು ಬಿಜೆಪಿಯ ಅಸಲಿ ಮುಖವೇ?
ಅಲ್ಲದೆ ಭಾಷೆ, ಧರ್ಮ, ಜಾತಿ, ಸಮುದಾಯ, ಮಾನವರಿಗೆ ಮಾತ್ರ. ಆದರೆ ಮನುಷ್ಯರಿಗೂ ಮತ್ತು ಇತರರಿಗೂ ಎಲ್ಲರಿಗೂ ದೇವರೂ ಒಂದೇ. ಇತರೆ ಜೀವಿಗಳ ಸೇವೆ ಮಾಡುವುದರಲ್ಲಿ ದೇವರ ಮೇಲಿನ ನಿಜವಾದ ಭಕ್ತಿ ಅಡಗಿದೆ ಎಂದು ನ್ಯಾಯಪೀಠ ಅಭಿ ಪ್ರಾಯಪಟ್ಟಿತು. ಅಲ್ಲದೆ ಇದು ಮುಂದುವರಿದಲ್ಲಿ ತಿರುಪತಿ ಲಡ್ಡು ಕೂಡ ಸ್ವದೇಶಿಯಾಗಿರಬೇಕು ಎಂದು ಹೇಳುವಿರಿ ಎಂದು ಅರ್ಜಿದಾರರನ್ನು ಟೀಕಿಸಿ ಅರ್ಜಿ ವಜಾಗೊಳಿಸಿತು.
