ಸಾಗರ ಸಮೀಪದ ವರದಹಳ್ಳಿಯ ಗುಡ್ಡದ ಮೇಲೆ ನಿನ್ನೆ ದಿನ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
ಮೃತಪಟ್ಟವರನ್ನು ಮಾರ್ಕೆಟ್ ರಸ್ತೆಯಲ್ಲಿ ಚಿನ್ನಾಭರಣ ಉದ್ಯಮ ನಡೆಸುತ್ತಿದ್ದ ನಿತಿನ್ ಶೇಟ್ (34) ಎಂದು ಗುರುತಿಸಲಾಗಿದೆ. ವರದಹಳ್ಳಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿದ್ದ ನಿತಿನ್, ಅವರ ಬೈಕ್ ವರದಹಳ್ಳಿ ಸಮೀಪ ಪತ್ತೆಯಾಗಿತ್ತು.
ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖ ಕೈಗೊಂಡಿದ್ದಾರೆ