ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದು ಸಂಪೂರ್ಣ ಬೆಂಕಿಗಾಹುತಿಯಾಗಿ ಮನೆಯ ಒಳಗಡೆಯಿದ್ದ ವಿಕಲಚೇತನ ಯುವಕ ಗಂಭೀರವಾಗಿ ಗಾಯಗೊಡು ಸಾವನಪ್ಪಿದ ದಾರುಣ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮುನೀರಾಬಾದ್ ಸಮೀಪದ ಗುಳದಳ್ಳಿ ಗ್ರಾಮದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಗುಳದಳ್ಳಿ ಗ್ರಾಮದ ಹುಲಿಗೆಮ್ಮ ಹನುಮಪ್ಪ ಬೆಣ್ಣೆ ಇವರಿಗೆ ಸೇರಿದ ಮನೆಗೆ ವಿದ್ಯುತ್ ಸ್ಪರ್ಶವಾಗಿ ಸಂಪೂರ್ಣ ಸುಟ್ಟಿದ್ದು ಇವರ ಮಗ ಸೋಮನಾಥ ಹನುಮಪ್ಪ ಬೆಣ್ಣಿ (18) ಅವರ ಮೈ ಬಹುತೇಕ ದೇಹ ಸುಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತನ ತಾಯಿ ಹುಲಿಗೆಮ್ಮ ಕೂಲಿ ಕೆಲಸಕ್ಕೆ ತೆರಳಿದ್ದು, ಅಕ್ಕ ಅನಿತಾ ವಿಕಲಚೇತನನಿಗೆ ಊಟ ಮಾಡಿಸಿ ಶಾಲೆಗೆ ತೆರಳಿದ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಮನೆಯಲ್ಲಿದ್ದ 60 ಸಾವಿರಕ್ಕೂ ಹೆಚ್ಚು ನಗದು, ಹಾಸಿಗೆ ಬಟ್ಟೆ-ಬರೆ, ಪುಸ್ತಕಗಳು ಸುಟ್ಟು ಹೋಗಿದ್ದು, ಸುಮಾರು ರೂ 3.5 ಲಕ್ಷಕ್ಕೂ ಹೆಚ್ಚು. ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ? ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ
ಸ್ಥಳಕ್ಕೆ ತಹಶೀಲ್ದಾರ್, ಪೊಲೀಸ್, ಕೆಇಬಿ ಅಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಪಂ ಪಿಡಿಒ, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
