ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಾಂತ ಕೊರವರ ಅವರು ಚೆಕ್ ಬುಕ್‌ನಲ್ಲಿ ನಕಲಿ ಸಹಿ ಮಾಡಿ ₹31.84 ಲಕ್ಷ ರೂ. ಗ್ರಾಮ ವಿಕಾಸ ನಿಧಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪ ಹೊರಡಲಾಗಿದೆ.
ಮೂಲಗಳ ಪ್ರಕಾರ, ವಿವಿಧ ಏಜೆನ್ಸಿಗಳ ಹೆಸರಿನಲ್ಲಿ ಹಣ ಡ್ರಾ ಮಾಡಲಾಗಿದ್ದು, ಇದರಲ್ಲಿ ಡೇಟಾ ಎಂಟ್ರಿ ಆಪರೇಟರ್‌ಗೂ ಭಾಗವಹಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಒಟ್ಟಾರೆ 12 ಚೆಕ್‌ಗಳ ಮೇಲೆ ನಕಲಿ ಸಹಿ ಮಾಡಿ ಹಣ ತಗೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣ ಬೆಳಕಿಗೆ ಬಂದ ನಂತರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ರಾಜೀ ಪಂಚಾಯಿತಿ ನಡೆಸಿದ್ದಾರೆ. ಈ ವೇಳೆ ಶ್ರೀಕಾಂತ ನಕಲಿ ಸಹಿ ಮೂಲಕ ಹಣ ತೆಗೆದುಕೊಂಡಿರುವುದನ್ನು ಪತ್ರದ ಮೂಲಕ ಒಪ್ಪಿಕೊಂಡು, ಮೂರು ತಿಂಗಳಲ್ಲಿ ಹಣ ಹಿಂತಿರುಗಿಸುವ ಭರವಸೆ ನೀಡಿದ್ದರು. ಆದರೆ ಆ ಅವಧಿ ಕಳೆದರೂ ಹಣ ವಾಪಸ್ ಮಾಡಿಲ್ಲ.
ಇದಕ್ಕೂ ಮುಂದಾಗಿ ಪಿಡಿಓ ಮತ್ತು ಪಂಚಾಯತ್ ಅಧ್ಯಕ್ಷರು ದೂರು ದಾಖಲಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ, ಎನ್ನುವುದು ಸ್ಥಳೀಯರ ಆರೋಪ. ಈ ಹಿನ್ನೆಲೆ ವಿವಿಧ ಅನುಮಾನಗಳು ಉದ್ಭವಿಸುತ್ತಿವೆ.
ಈ ಸಂಬಂಧ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಪ್ರತಿಕ್ರಿಯೆ ನೀಡಿದ್ದು, ಪರಿಶೀಲನೆ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ,” ಎಂದು ತಿಳಿಸಿದ್ದಾರೆ.