ನಾಯಕತ್ವ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಮಂಗಳೂರಿನ ಟೀಮ್ ವಿಜ್ಡಮ್ ಎಜುಕೇಶನ್ ಸಂಸ್ಥೆ ನೀಡಲಾಗುವ ‘ವರ್ಷದ ‘ಡೈನಾಮಿಕ್ ಪರ್ಸನಾಲಿಟಿ ಪ್ರಶಸ್ತಿಗೆ’ ನಗರದ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪ್ರವೀಣ್ ಕುಮಾರ್ ವೈ ಜಿ ಭಾಜನಾಗಿದ್ದಾರೆ.
ಮಂಗಳೂರಿನ ಟೀಮ್ ವಿಜ್ಡಮ್ ಎಜುಕೇಶನ್ ಸಂಸ್ಥೆ ಇತ್ತೀಚಿಗೆ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ‘ಡೈನಾಮಿಕ್ ಪರ್ಸನಾಲಿಟಿ ಪ್ರಶಸ್ತಿಯನ್ನು ಡಾ. ಪ್ರವೀಣ್ ಕುಮಾರ್ ಅವರಿಗೆ ಸಂಸ್ಥೆಯ ಸಿಇಒ ಡಾ. ಗುರುತೇಜ್ ಮತ್ತು ಡಾ. ಫ್ರಾನ್ಸಿಸ್ಕಟ್ ತೇಜ್ ಅವರು ಪ್ರಧಾನ ಮಾಡಿದರು.
ಕ್ರಿಯಾತ್ಮಕ, ನವೀನ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದೇ ರೀತಿ ಡಾ. ಪ್ರವೀಣ್ ಕುಮಾರ್ ಅವರು ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಟೀಮ್ ವಿಜ್ಡಮ್ ಎಜುಕೇಶನ್ ಸಂಸ್ಥೆಯಿಂದ ‘ಡೈನಾಮಿಕ್ ಪರ್ಸನಾಲಿಟಿ ಪ್ರಶಸ್ತಿಯನ್ನು ಪಡೆದರು.
ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯನ್ನು ತರುವಲ್ಲಿ ನಿರತರಾಗಿರುವ ಡಾ. ಪ್ರವೀಣ್ ಕುಮಾರ್ ಅವರಿಗೆ ಡೈನಾಮಿಕ್ ಪರ್ಸನಾಲಿಟಿ ಪ್ರಶಸ್ತಿ ಲಭಿಸಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್.ರವಿಪ್ರಕಾಶ ಸೇರಿದಂತೆ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.