ಭದ್ರಾವತಿ ತಾಲ್ಲೂಕು ಮಟ್ಟದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಸ್ಮರಣಾರ್ಥವಾಗಿ ದಿನಾಂಕ 22-07-2025 ರಂದು ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ನ್ಯೂಟೌನ್, ಭದ್ರಾವತಿಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಮದರ್ ತೆರೇಸಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಸಂಪತ್ ಅನಿಲ ನಾಯ್ಕ ಎಂಬ ವಿದ್ಯಾರ್ಥಿಯು ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರಿಗೆ ಶಾಂತಿನಿಕೇತನ ಚಾರಿಟಬಲ್ ಸೋಸೈಟಿಯ ವತಿಯಿಂದ ಮದರ್ ತೆರೇಸಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರಾದ ರೆವೆರಂಡ್ ಫಾದರ್ ರಾಬಿಟ್ ಮ್ಯಾಥ್, ರೆವೆರಂಡ್ ಫಾದರ್ ಜೋಸೆಪ್, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು, ಅಭಿನಂದನೆಗಳನ್ನು ತಿಳಿಸಿರುತ್ತಾರೆ.