“ನಮ್ಮ ಮುಂದಿನ ಭವಿಷ್ಯದ ನಾಯಕರಾಗುವ ಮಕ್ಕಳು ಈಗ ಬರೀ ಶಿಕ್ಷಣದಿಂದ ಮಾತ್ರ ವಂಚಿತರಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಉದ್ಯೋಗ, ಆರ್ಥಿಕವಾಗಿ, ರಾಜಕೀಯವಾಗಿ ನಾವು ಹಿಂದೆ ಉಳಿಯುತ್ತೇವೆ. ಒಳಮೀಸಲಾತಿ ಶೀಘ್ರದಲ್ಲೇ ಜಾರಿಯಾಗಲಿ. ಈ ಹೋರಾಟಕ್ಕೆ ಸಹೋದರ ಜಾತಿಗಳು ಒಂದಾಗಲಿ” ಎಂದು ದಲಿತ ಹೋರಾಟಗಾರರು ಮುತ್ತು ಬಿಳಿಯಲಿ ಹೇಳಿದರು.
ಗದಗ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಒಳಮೀಸಲಾತಿ ಹೋರಾಟ ಮೂವತ್ತು ವರ್ಷದಿಂದ ನಡೆಯುತ್ತಿದೆ ಸುಪ್ರೀಂ ಕೋರ್ಟಿನ ತೀರ್ಪಿನ ಫಲವಾಗಿ ಕೆಲವೇ ದಿನಗಳಲ್ಲಿ ಒಳಮೀಸಲಾತಿ ಜಾರಿಯಾಗಲಿದೆ. ಆದರೆ ಹೊಲೆ, ಮಾದಿಗರಿಗೆ ಒಳಮೀಸಲಾತಿ ಏಕೆ? ಬೇಕು ಅಂತ ಕೇಳಿದ್ರೆ ಇಲ್ಲಿ ಕೆಳಗೆ ಗದಗ ಸಮಾಜ ಕಲ್ಯಾಣ ಇಲಾಖೆಯು ಈ ಪ್ರಸಕ್ತ ಸಾಲಿನ ಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಬಾಲಕರ ವಸತಿ ನಿಲಯಕ್ಕೆ ಆಯ್ಕೆ ಆಗಿರುವ ಪಟ್ಟಿಯನ್ನು ನೀವು ಒಮ್ಮೆ ಗಮನಿಸಿ” ಎಂದು ತಿಳಿಸಿದರು.

“ಈ ಪಟ್ಟಿಯಲ್ಲಿ ಮೊದಲು ಬಾಲಕಿಯರ ವಸತಿ ನಿಲಯದ 44 ಬಾಲಕಿಯರ ಪಟ್ಟಿಯಲ್ಲಿ ಚಲವಾದಿ ಬಾಲಕಿಯರು ಆಯ್ಕೆ ಆಗಿದ್ದು, ಕೇವಲ 04, ಇನ್ನೂ ಮಾದಿಗ ಬಾಲಕಿಯರ ಸಂಖ್ಯೆ 08, ಇನ್ನೂಳಿದ ಸಂಖ್ಯೆಯಲ್ಲಿ ಬಹುತೇಕ ಪಾಲು ಸ್ಪರ್ಶ ಜಾತಿಯವರೇ ಆಯ್ಕೆಯಾಗಿದ್ದಾರೆ” ಎಂದರು.
“ಇನ್ನೂ ಬಾಲಕರ ವಸತಿ ನಿಲಯದ ಪಟ್ಟಿಯನ್ನು ನೋಡಿದರೇ ತುಂಬಾ ಆಘಾತ ಹಾಗೂ ಆಶ್ಚರ್ಯ ಅಗುತ್ತದೆ. ದುರಂತವೆಂದರೆ 23 ಸಂಖ್ಯೆಯ ಬಾಲಕರ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಚಲವಾದಿ ವಿಧ್ಯಾರ್ಥಿ ಇಲ್ಲ ಎಂಬುದೇ ದುರಂತ” ಎಂದು ಹೇಳಿದರು.
“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟ ಮೂರು ಸಂದೇಶಗಳು ಶಿಕ್ಷಣ, ಸಂಘಟನೆ,ಹೋರಾಟ ಮೊದಲು ಶಿಕ್ಷಣಕ್ಕೆ ನಮ್ಮ ಸಮುದಾಯ ಒತ್ತು ಕೊಡಬೇಕು. ನಮ್ಮ ದಲಿತ ಸಮುದಾಯ ಆಳುವ ವರ್ಗದಲ್ಲಿ ಇರಬೇಕು ಎಂಬ ಕನಸನ್ನ ಕಂಡವರು ಬಾಬಾ ಸಾಹೇಬರು. ಆದರೇ ಇವತ್ತು ನಮ್ಮ ಮುಂದಿನ ಭವಿಷ್ಯದ ನಾಯಕರಾಗುವ ನಮ್ಮ ಹೊಲೆ, ಮಾದಿಗ ವಿಧ್ಯಾರ್ಥಿಗಳು ಉದ್ಯೋಗ ಪಡೆಯೋದಿರ್ಲೀ ಮೊದಲು ಶಿಕ್ಷಣದಿಂದಾನೆ ವಂಚಿತರಾಗುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದಯವಿಟ್ಟು ನಮ್ಮ ಹೊಲೆ, ಮಾದಿಗ ಬಂಧುಗಳೇ ನಿಮ್ಮ ನಿಮ್ಮ ಮನೆಯಲ್ಲಿರುವ ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಶಾಲೆಗೆ ಸೇರಿಸಿ, ಜಿಲ್ಲೆಯಲ್ಲಿರುವ ನಮ್ಮ ಎರಡು ಸಮಾಜದ ವಿದ್ಯಾರ್ಥಿಗಳೇ, ನಿಮಗೆ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗದಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಾವು ಹಾಸ್ಟೆಲಿಗೆ ಸೇರಿಸುವ ವ್ಯವಸ್ಥೆಯನ್ನು ಮಾಡುತ್ತೇವೆ” ಎಂದು ಸಮಾಜದ ವಿದ್ಯಾರ್ಥಿಗಳಿಗೆ ತಿಳಿಸಿದರು.
“ನಮ್ಮ ಮುಂದಿನ ಭವಿಷ್ಯದ ಮಕ್ಕಳು ಈಗ ಬರೀ ಶಿಕ್ಷಣದಿಂದ ಮಾತ್ರ ವಂಚಿತರಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಉದ್ಯೋಗ, ಆರ್ಥಿಕವಾಗಿ, ರಾಜಕೀಯವಾಗಿ ನಾವು ಹಿಂದೆ ಉಳಿಯುತ್ತೇವೆ. ಒಳಮೀಸಲಾತಿ ಶೀಘ್ರದಲ್ಲೇ ಜಾರಿಯಾಗಲಿ. ಈ ಹೋರಾಟಕ್ಕೆ ಸಹೋದರ ಜಾತಿಗಳು ಒಂದಾಗಲಿ” ಎಂದು ಮುತ್ತು ಬಿಳಿಯಲಿ ಒತ್ತಾಯಿಸಿದರು.