ಶಿವಮೊಗ್ಗ, ಕಾರಿನಲ್ಲಿ ತೆರಳುತ್ತಿದ್ದವರನ್ನು ಕೂಗಿ ಕರೆದ ಅಪರಿಚಿತರು, ಜಗಳ ತೆಗೆದು ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ ಸಾಗರ ರಸ್ತೆಯ ಬಾರ್ ಒಂದರ ಮುಂದೆ ಕಳೆದ ರಾತ್ರಿ ೧೧.೩೦ರ ಹೊತ್ತಿಗೆ ಘಟನೆ ಸಂಭವಿಸಿದೆ.
ಉದ್ಯಮಿ ಪ್ರದೀಪ್, ಯೋಗೀಶ್ ಗೌಡ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ್, ಯೋಗೀಶ್ ಗೌಡ ಮತ್ತು ದಾಮೋದರ ಎಂಬುವವರು ಗಾಡಿಕೊಪ್ಪದ ಸಮೀಪದ ಬಿರಿಯಾನಿ ಹೊಟೇಲ್‌ನಲ್ಲಿ ಊಟ ಮುಗಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದರು.
ಸಾಗರ ರಸ್ತೆಯ ಬಾರ್ ಒಂದರ ಮುಂದೆ ಆರೇಳು ಜನರು ಗುಂಪಾಗಿದ್ದರು. ಕಾರು ಅವರನ್ನು ದಾಟಿ ಹೋಗುತ್ತಿದ್ದಂತೆ ಅವರು ಜೋರಾಗಿ ಹೋಯ್ ಎಂದು ಕೂಗಿದ್ದರು.
ಪರಿಚಿತರಿರಬಹುದೆಂದು ಪ್ರದೀಪ್ ಕಾರು ನಿಧಾನ ಮಾಡಿ ಹಾರನ್ ಮಾಡಿದ್ದಾರೆ. ಆಗ ಗುಂಪಿನಲ್ಲಿದ್ದವರು ಅವಾಚ್ಯವಾಗಿ ನಿಂದಿಸಿ, ಹೋಗು ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಆಗ ಕಾರಿನಲ್ಲಿದ್ದವರು ಬೈದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆಗ ಗುಂಪಿನಲ್ಲಿದ್ದವರು ಬೈಕುಗಳನ್ನು ತಂದು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.