ವಿಜಯನಗರ | ಮಕ್ಕಳ ಸಾಹಿತ್ಯಕ್ಕೆ ಅಂತರಾಳದ ಅಭಿವ್ಯಕ್ತಿ ಅತ್ಯಗತ್ಯ: ಡಾ. ಕೆ ಶಿವಲಿಂಗಪ್ಪ ಹಂದಿಹಾಳು

Date:

Advertisements

ಮಕ್ಕಳ ಸಾಹಿತ್ಯವು ಕೇವಲ ಕಥೆ ಹೇಳುವುದಲ್ಲದೆ, ಮಕ್ಕಳ ಆಲೋಚನೆಗಳು, ಭಾವನೆಗಳು, ಪ್ರಶ್ನೆಗಳು ಮತ್ತು ಅವರ ಸುಪ್ತ ಕನಸುಗಳನ್ನು ಪ್ರತಿಬಿಂಬಿಸಬೇಕು. ಇದು ಮಕ್ಕಳ ಜಗತ್ತನ್ನು ಅವರ ದೃಷ್ಟಿಕೋನದಿಂದಲೇ ನೋಡಲು ಸಹಾಯ ಮಾಡುತ್ತದೆ. ಅಂತರಾಳದ ಅಭಿವ್ಯಕ್ತಿ ಹೊಂದಿರುವ ಮಕ್ಕಳ ಸಾಹಿತ್ಯವು ಮಕ್ಕಳ ಮನಸ್ಸನ್ನು ತಲುಪುತ್ತದೆ ಮತ್ತು ಅವರ ಸಮಗ್ರ ಬೆಳವಣಿಗೆಗೆ ಸಹಾಯಕವಾಗುತ್ತದೆ. ಇದು ಕೇವಲ ಓದುವಿಕೆಯ ಅನುಭವವಲ್ಲದೆ, ಮಕ್ಕಳ ಆಂತರಿಕ ಜಗತ್ತನ್ನು ಅರಳಿಸುವ ಒಂದು ಪ್ರಕ್ರಿಯೆಯಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ. ಶಿವಲಿಂಗಪ್ಪ ಹಂದಿಹಾಳು ಅವರು ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಪಂಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಮತ್ತು ಬಾಲ ಸಾಹಿತ್ಯ ಪುರಸ್ಕೃತರ ವಿಶೇಷ ಉಪನ್ಯಾಸ ಹಾಗೂ ಮಕ್ಕಳ ಸಾಹಿತ್ಯದ ಅನನ್ಯತೆ ಮತ್ತು ಬಾಲ್ಯತನ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಬಾಲ್ಯ ವಯೋಮಿತಿಗೆ ಸಂಬಂಧಿಸಿದಲ್ಲ ಅದು ವರ್ತನೆಗೆ ಸಂಬಂಧಿಸಿದ್ದು, ಮಕ್ಕಳು ಓದಬಹುದಾದ ಸಾಹಿತ್ಯವನ್ನು ಮಕ್ಕಳ ಸಾಹಿತ್ಯವೆಂದು ತೀರ್ಮಾನ ಮಾಡಿದ್ದೇವೆ. ಮಕ್ಕಳ ಸಾಹಿತ್ಯವನ್ನು ನಾಲ್ಕು ವಿಧದಲ್ಲಿ ಹೇಳಬಹುದು. ಮಕ್ಕಳ ಸಾಹಿತ್ಯದ ಮೇಲೆ ಪರಂಪರೆಯ ಪ್ರಭಾವ, ಮಕ್ಕಳ ಸಾಹಿತ್ಯ ಹುಟ್ಟು, ಮಕ್ಕಳ ಸಾಹಿತ್ಯದ ಮೇಲಿನ ತಪ್ಪು ಕಲ್ಪನೆ, ಮಕ್ಕಳ ಸಾಹಿತ್ಯದಲ್ಲಿನ ತಾತ್ವಿಕತೆಗಳೇನು? ಎಂಬುದು ಮಕ್ಕಳ ಸಾಹಿತ್ಯಕ್ಕೆ ಮೂಲ ಜಾನಪದ, ಪುರಾಣ, ಪಂಚತಂತ್ರಗಳಲ್ಲಿ ಕಾಣಬಹುದು.

Advertisements

ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಹುಟ್ಟಲಿಕ್ಕೆ ಕಾರಣ ಮಿಷನರಿಗಳು ಮತ್ತು ಶಾಲೆಗಳು ಆರಂಭದಲ್ಲಿ ಪಠ್ಯ ನೀಡುವ ಸಮಯದಲ್ಲಿ ಮಕ್ಕಳ ಸಾಹಿತ್ಯ ಹುಟ್ಟಿತು. ಶೈಕ್ಷಣಿಕ ಉದ್ದೇಶದಿಂದ ನವೋದಯ ಕಾಲದಲ್ಲಿ ಅನೇಕ ವ್ಯಕ್ತಿಗಳು ಬಾಲ್ಯ ಸಾಹಿತ್ಯ ಬರೆದರು. ಮಕ್ಕಳ ಸಾಹಿತ್ಯ ಎಂದರೆ ಮಕ್ಕಳೇ ಬರೆದಿದ್ದು, ಮಕ್ಕಳಿಗಾಗಿ ಬರೆದಿದ್ದು, ಮಕ್ಕಳಿಗಾಗಿ ದೊಡ್ಡವರು ಬರೆದಿದ್ದು, ಮಕ್ಕಳಿಗಾಗಿ ದೊಡ್ಡವರು ಆರಿಸಿದ್ದನ್ನು ಮಕ್ಕಳ ಸಾಹಿತ್ಯ ಎಂದುಕೊಂಡಿದ್ದೇವೆ. ಆದರೆ ಸಾಹಿತ್ಯದ ಮೂಲ ಬೇರು ನಮ್ಮ ಜಾನಪದವಾಗಿದೆ.

ಮಕ್ಕಳ ಸಾಹಿತ್ಯಕ್ಕೆ ದೀರ್ಘ ಕಾಲದ ಪರಂಪರೆ ಇದ್ದು, ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದಾದರೂ ಮಕ್ಕಳ ಸಾಹಿತ್ಯ ಎಂಬ ಹೆಸರನ್ನು ಹೊತ್ತು ಪ್ರತ್ಯೇಕ ಸಾಹಿತ್ಯದ ಪ್ರಕಾರವಾಗಿ ಬೆಳೆದು ಬಂದದ್ದು ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ. ಜಾನಪದ ಸಾಹಿತ್ಯವನ್ನು ಮಕ್ಕಳಿಗೆ ಸರಳವಾಗಿ ಹೇಳುವುದರ ಮೂಲಕ ಸಾಹಿತಿ ತನ್ನ ಬರವಣಿಗೆಯಲ್ಲಿ ಬಾಲ್ಯದ ಮುಗ್ದತೆಯನ್ನು ರೂಢಿಸಿಕೊಳ್ಳಬೇಕು. ಇನ್ನು ಪ್ರಬುದ್ಧ ಮನಸ್ಸು ಕಟ್ಟಿಕೊಡುವ ಕಲ್ಪನೆಯ ಸಾಹಿತ್ಯವೇ ಮಕ್ಕಳ ಸಾಹಿತ್ಯವಾಗಿದೆ. ಯುವ ಬರಹಗಾರರು, ಪ್ರಸ್ತುತ ಕಾಲಘಟ್ಟದಲ್ಲಿ ಕಳೆದು ಹೋಗುತ್ತಿರುವ ಬಾಲ್ಯವನ್ನು ಕಟ್ಟುವ ಅಗತ್ಯವಿದೆ” ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕೃತ ಆರ್ ದಿಲೀಪ್‌ಕುಮಾರ ಪರಂಪರೆಯ ಕಾವ್ಯಾನುಸಂಧಾನ ಹಾಗೂ ನನ್ನ ಗ್ರಹಿಕೆಗಳು ಎನ್ನುವ ವಿಶೇಷ ಉಪನ್ಯಾಸ ನೀಡಿ, “ಓದುಗ ತನ್ನ ಪರಂಪರೆಯನ್ನು ಕಟ್ಟಿ ಮತ್ತೆ ಅದನ್ನೇ ಮುರಿಯುತ್ತಾನೆ. ನಾವು ನಿಂತಿರುವ ಹೆಜ್ಜೆಯನ್ನು ಹಾಗೂ ಹಿಂದಿನ ಹೆಜ್ಜೆಯನ್ನು ಹರಿಯಬೇಕು. ರಂಗದ ಮೇಲೆ ನಾಟಕವನ್ನು ಬರೆಯುವುದು ಬಹಳ ಸುಲಭ. ಆದರೆ ಆಕಾಶವಾಣಿಯಲ್ಲಿ ಬರೆಯುವುದು ಬಹಳ ಕಷ್ಟ, ಇಲ್ಲಿ ಎಲ್ಲವನ್ನೂ ಶಬ್ದದ ಮೂಲಕವೇ ತೋರಿಸಬೇಕಾಗುತ್ತದೆ.

ನಮ್ಮ ಬರವಣಿಗೆಗಳು ಪ್ರಜ್ಞಾಪೂರಕವಾಗಿ ಇರಬೇಕು. ಇಂದು ಗ್ರಂಥ ಸಂಪಾದನೆಯನ್ನು ಹೊಸ ರೀತಿಯಾಗಿ ನೋಡದಿದ್ದರೆ ಅನುಸಂಧಾನವಾಗುವುದಿಲ್ಲ. ಅನುಸಂಧಾನ ಮಾಡುವಾಗ ಲಯ ಬಹಳ ಮುಖ್ಯ. ಪರಿಭಾಷೆಯನ್ನು ಬಳಸುವವರನ್ನು ಸೂಕ್ಷ್ಮವಾಗಿ ನೋಡಬೇಕಾಗಿದೆ. ಹಿಂದೆ ಅವಕಾಶ ಇರಲಿಲ್ಲ, ಇಂದು ಇದೆ. ನಾವು ಕಲಿಯಬೇಕಷ್ಟೆ. ಭಾಷೆ ಕಲಿಯಲು ಯಾವುದೇ ಜಾತಿ ಭೇದ ಇಲ್ಲ ಹಾಗೂ ಬಸವಣ್ಣನವರ 1700 ವಚನಗಳಲ್ಲಿ ಕೇವಲ 300ಕ್ಕೂ ಅಧಿಕ ವಚನಗಳನ್ನು ಮಾತ್ರ ಬಳಸಿದ್ದೇವೆಯೇ ವಿನಃ ಉಳಿದ ವಚನಗಳನ್ನು ಬಳಸಲಾಗುತ್ತಿಲ್ಲ.

ಬಳಸಿದ ವಚನಗಳನ್ನೇ ಬಳಸುವುದನ್ನು ಬಿಟ್ಟು, ಇನ್ನುಳಿದ ವಚನಗಳ ಮೂಲಕ ನಾವು ಬಸವಣ್ಣನವರ ಶಿಕ್ಷಣ ಕಟ್ಟಲು ಪ್ರಯತ್ನಪಡಬೇಕು. ಹಾಗೆ ಒಂದಿಷ್ಟು ಸಂದರ್ಭದ ಬಗ್ಗೆ ಮಾತ್ರ ಪಂಪನನ್ನು ಪ್ರಸ್ತುತಪಡಿಸುತ್ತೇವೆ. ಹೌದು ಹೀಗೆ ಕಾಲ ಕಾಲಘಟ್ಟದಲ್ಲಿ ಮತ್ತು ಬೇರೆ ಬೇರೆ ಸಾಂಸ್ಕೃತಿಕ ಹಿನ್ನೆಲೆಯಿಂದ ಮುಂದೆ ಬಂದಿತೆಂದು ತಿಳಿಯಬೇಕು ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ನಿರಂತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಈಗ ಅನೇಕ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡುತ್ತ ಬಂದಿದೆ. ಕನ್ನಡದಲ್ಲಿ ಬಾಲ ಸಾಹಿತ್ಯ ಎನ್ನುವುದಕ್ಕೆ ತುಂಬಾ ಪರಂಪರೆ ಇದೆ. ಆದರೆ ಪ್ರಾಶಸ್ತ್ಯವಿಲ್ಲ. ಮಕ್ಕಳಿಗೆ ಬಾಲ್ಯದಲ್ಲಿ ಸಾಹಿತ್ಯದ ಕುರಿತು ಅರಿವು ಮೂಡಿಸಿದರೆ ಅವರ ಮುಂದಿನ ನಡುವಳಿಕೆಯಲ್ಲಿ ನಾವು ಅಗಾಧವಾದ ಬದಲಾವಣೆ ಕಾಣಬಹುದು” ಎಂದರು.

ಇದನ್ನೂ ಓದಿದ್ದೀರಾ? ಟ್ರಾಫಿಕ್ ಎಕ್ಸ್‌ಪರ್ಟ್ ಡಿಜಿ ಆದೇಶ: ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನೀಗುವುದೇ?

“ಎಳೆಯ ಮನಸ್ಸುಗಳಲ್ಲಿ ಪ್ರೀತಿ, ವಿಶ್ವಾಸ, ಧೈಯ, ಧರ್ಮ, ಕರುಣೆ, ಅಂತಃಕರಣ, ಸಹನೆ, ಸಹಮತ, ಸಹಬಾಳ್ವೆ ಇಂತಹ ವಿಚಾರಗಳನ್ನು ಆಕರ್ಷಕವಾಗಿ ಸಾಹಿತ್ಯದ ಮೂಲಕ ಒಳ್ಳೆಯ ಮನಸ್ಸುಗಳನ್ನು ನೀಡಿದರೆ ಅವರ ಮನಸ್ಸು ವಿಕಾಸಗೊಳ್ಳುತ್ತದೆ. ಬಾಲ್ಯತನದ ಮನಸ್ಸುಗಳು ಹಸಿ ಗೋಡೆಗಳಂತೆ ಆ ಮನಸ್ಸುಗಳನ್ನು ನಾವು ಹೇಗೆ ಬೇಕೋ ಹಾಗೆ ರೂಪಿಸಬಹುದು. ಇತ್ತೀಚಿನ ಪೋಷಕರು ಮಕ್ಕಳಿಗೆ ಬಾಹ್ಯ ಬೇಡಿಕೆ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಂತರಂಗ ಬೆಳವಣಿಗೆ ನೀಡುವಲ್ಲಿ ಪೋಷಕರು ವಿಫಲವಾಗಿದ್ದಾರೆ” ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ, ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಸಂವಾದಕರಾದ ಯಲ್ಲಪ್ಪ ಹಂದ್ರಾಳ, ಡಾ. ಎಂ ಮಲ್ಲಿಕಾರ್ಜುನಗೌಡ, ಡಾ. ನಾಗಣ್ಣ ಕಿಲಾರಿ, ಡಾ. ಸತೀಶ ಪಾಟೀಲ್, ಡಾ. ವೆಂಕಟೇಶ ಇಂದ್ವಾಡಿ, ನಿರಂಜನ್ ಎಚ್.ಎಂ, ವಿಶಾಲ ಮ್ಯಾಸಾರ, ಡಾ, ಪ್ರಹ್ಲಾದ ಡಿ, ವಿವಿಧ ವಿಭಾಗಗಳ ಮುಖಸ್ಥರು, ಪ್ರಾಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X