ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧ ಬೀದಿ ನಾಟಕಗಳ ಮೂಲಕ ಶಾಲಾ,ಕಾಲೇಜು ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮಾದಕ ದ್ರವ್ಯ ವಿರೋಧಿ ದಿನ ಅಂಗವಾಗಿ ಜಾಗೃತಿ ಮೂಡಿಸುವುದರ ಕುರಿತು ಚಿಕ್ಕಮಗಳೂರು ನಗರದ ಸೇಂಟ್ ಮೇರಿಸ್ ಕಾಲೇಜಿನಲ್ಲಿ ಬುಧವಾರ ಅಯೋಜಿಸಲಾಗಿತ್ತು.

ಶಾಲಾ ಕಾಲೇಜು ಮಕ್ಕಳಲ್ಲಿ ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಸಂಬಂಧಪಟ್ಟ ಕಾನೂನುಗಳ ಕುರಿತಾಗಿ ಗಮನಸೆಳೆಯಬೇಕಾಗಿದೆ. ಹಾಗೆಯೇ, ಕಾರ್ಯಕ್ರಮಕ್ಕೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಮಕ್ಕಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಜಾಗೃತಿ ಮೂಡಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅನುದಾನದ ಹಣ ದುರುಪಯೋಗ: ಗ್ರಾ ಪಂ ಉಪಾಧ್ಯಕ್ಷೆ ನಂದಿನಿ ಸಂತೋಷ್ ಕರ್ತವ್ಯದಿಂದ ವಜಾ
ಈ ವೇಳೆ ಪೊಲೀಸ್ ಅಧಿಕಾರಿ ರುದ್ರೇಶ್ ಆರ್‌ಪಿಐ ಮತ್ತು ಸಿಬ್ಬಂದಿ ಜಿಲ್ಲಾ ಮೀಸಲು ಪೊಲೀಸ್ ಸಶಸ್ತ್ರ ದಳ ಹಾಗೂ ನಗರ ಠಾಣಾ ಪೊಲೀಸರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇನ್ನಿತರರಿದ್ದರು.