ಹಾರ್ಟ್ ಸಂಸ್ಥೆ ಮೈಸೂರು, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹೆಚ್‍ಡಿ ಕೋಟೆ, ಬಿ. ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಬಿ. ಮಟಕೆರೆ, ಅವಾಂಟ್ ಆಸ್ಪತ್ರೆ ಮೈಸೂರು ಹಾಗೂ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಈ ದಿನ ಬಿ ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್, ಬಿ ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವದಾಸ್, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚಂದ್ರಶೇಖರ್, ಮೈಸೂರು ಅವಾಂಟ್ ಬಿಕೆಜಿ ಆಸ್ಪತ್ರೆಯ ಡಾ. ಶಶಾಂಕ್, ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ ದೀಪವನ್ನು ಬೆಳಗಿಸುವ ಮೂಲಕ ಚಾಲನೆ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್ ಮಾತನಾಡಿ ” ಸರಗೂರು ತಾಲೂಕು ಕಾಡಂಚಿನ ಗ್ರಾಮ ಬಿ. ಮಟಕೆರೆ ಭಾಗದಲ್ಲಿ ಗಿರಿಜನರು, ರೈತರು, ಕೂಲಿ ಕಾರ್ಮಿಕರು, ಹೆಚ್ಚಾಗಿದ್ದು, ಇವರಿಗೆ ಅಗತ್ಯ ಇರುವ ಸೇವೆಗಳಾದ ಹೃದಯ ಸಂಬಂದಿ ಮತ್ತು ಶ್ವಾಸಕೋಶ ಸಮಸ್ಯೆಗಳ ತಪಾಸಣೆ ನಡೆಸಿ ಪ್ರಾಥಮಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಉಚಿತ ಶಿಬಿರವನ್ನು ಆಯೋಜಿಸಿದ್ದು, ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯ ಸುಧಾರಿಸಿಕೊಳ್ಳುವಂತೆ ” ತಿಳಿಸಿದರು.
ಬಿ. ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವದಾಸ್ ಮಾತನಾಡಿ ‘ ಹಣವನ್ನು ಎಷ್ಟದರೂ ಸಂಪಾದನೆ ಮಾಡಬಹುದು. ಅದರೆ, ಆರೋಗ್ಯ ಸರಿಯಾಗಿ ಇಟ್ಟುಕೊಳ್ಳುವುದು ತುಂಬಾ ಕಷ್ಟ. ಇವತ್ತಿನ ಒತ್ತಡದ ಜೀವನದಲ್ಲಿ ಇಂತಹ ಆರೋಗ್ಯ ಶಿಬಿರಗಳು ನಮ್ಮ ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗಿದೆ ‘ ಎಂದು ತಿಳಿಸಿದರು.

ಡಾ. ಚಂದ್ರಶೇಖರ್ ಮಾತನಾಡಿ ‘ ಹಿಂದಿನ ದಿನಗಳಲ್ಲಿ ಹಣವಂತರು ಮಾತ್ರ ಆರೋಗ್ಯ ಹದಗೆಟ್ಟಾಗ ಮೈಸೂರಿನ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಯವರೇ ಗ್ರಾಮೀಣ ಪ್ರದೇಶಕ್ಕೆ ಬಂದು ಆರೋಗ್ಯ ಶಿಬಿರಗಳನ್ನು ಮಾಡುತ್ತಿರುವುದರಿಂದ ಈ ಭಾಗದ ರೈತರು, ಬಡವರಿಗೆ ಕೂಲಿಕಾರ್ಮಿಕರಿಗೆ ಆರೋಗ್ಯ ಸುಧಾರಿಸಿಕೊಳ್ಳಲು ಅನುಕೂಲವಾಗಲಿದೆ ‘ ಎಂದು ತಿಳಿಸಿದರು.
ಶಿಬಿರದಲ್ಲಿ 80 ಜನರಿಗೆ ಸಕ್ಕರೆ ಕಾಯಿಲೆ ಮತ್ತು ಬಿಪಿ ಪರೀಕ್ಷೆ, 52 ಜನರಿಗೆ ಕಣ್ಣಿನ ಪರೀಕ್ಷೆ, 11 ಜನರಿಗೆ ಪೊರೆ ಇದ್ದು ಇವರನ್ನು ಶಸ್ತ್ರ ಚಿಕಿತ್ಸೆಗೆ ರೆಪರಲ್ ಮಾಡಲಾಯಿತು. 80 ಜನರನ್ನು ಹೃದಯ ರೋಗ ತಜ್ಞರು ತಪಾಸಣೆ ನಡೆಸಿದರು. 20 ರೋಗಿಗಳಿಗೆ ಹೃದಯ ತೊಂದರೆ, ಸ್ಪೈನ್ ತೊಂದರೆ, ಮಹಿಳೆಯರಲ್ಲಿ ಮೂಳೆ ತೊಂದರೆ ಇದ್ದು ಹೆಚ್ಚಿನ ಚಿಕಿತ್ಸೆಗಳಿಗೆ ಸಂಬಂಧಪಟ್ಟವರಿಗೆ ರೆಪರಲ್ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಡಾ. ಬಿ. ಆರ್. ಅಂಬೇಡ್ಕರ್ ನಾಮಫಲಕ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕುಮಾರ್
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಆರೋಗ್ಯ ಶಿಕ್ಷಣಾಧಿಕಾರಿ ಶರಣಪ್ಪ, ಅರ್ಚನಾ, ಆಶಾ ಮೆಂಟರ್ ರೇಖಾ, ಬಿ. ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಜಲಜ, ಅನಿತಾ, ಗ್ರೂಪ್ ಡಿ ರಾಜೇಶ್ ಮಸಳ್ಳಿ, ಮೈಸೂರಿನ ಅವಾಂಟ್ ಬಿಕೆಜಿ ಆಸ್ಪತ್ರೆಯ ಶಮಂತ್, ಪ್ರಶಾಂತ್, ಮತ್ತು ತಂಡ ಹಾಗೂ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಮಹೇಶ್, ಆಶಾ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.