“ಅತಿಯಾದ ಮಳೆಯಿಂದ ಬಿತ್ತನೆ ಮಾಡಿದ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಶೇಂಗಾ ವ ಇತರೇ ಬೆಳೆಗಳು ಜವಳು ಹತ್ತಿ ಅಲ್ಲಿಯೇ ಕುಂಠಿತಗೊಂಡು ಹಾಳಾಗುತ್ತಿವೆ. ಅದಕ್ಕೆ ಯೂರಿಯಾ ಗೊಬ್ಬರ ಹಾಕಿದರೆ ಬೆಳೆಯು ಸುಧಾರಣೆ ಆಗುತ್ತದೆ. ಎಂದು ರೈತರುಗಳು ಯೂರಿಯಾ ಗೊಬ್ಬರ ಖರೀದಿಸಲು ಮುಂದಾಗಿದ್ದು, ಯೂರಿಯಾ ಗೊಬ್ಬರವೇ ಸಿಗುತ್ತಿಲ್ಲ. ರೈತರು ಕಂಗಲಾಗಿದ್ದಾರೆ ” ಎಂದು ರೈತರು ಹೇಳಿದರು.
ಹಾವೇರಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರಿಗೆ ಯೂರಿಯಾ ಗೊಬ್ಬರ ಒದಗಿಸುವಂತೆ ಜಿಲ್ಲಾಡಳಿತದಲ್ಲಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.
“ಗೋಬ್ಬರವನ್ನು ಅಂಗಡಿಕಾರರು ಮಾರದೇ ದಲ್ಲಾಲಿಗಳ ಮುಖಾಂತರ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಬಹಳ ತೊಂದರೆ ಆಗುತ್ತಿದೆ. ರೈತರುಗಳು ಗೊಬ್ಬರದ ಅಂಗಡಿಯ ಮುಂದೆ ಸಾಲಾಗಿ ನಿಂತರು ಕೂಡಾ ಅವರಿಗೆ ಗೋಬ್ಬರ ಸಿಗುತ್ತಿಲ್ಲ. ಇದರಿಂದ ಬೇಸತ್ತು ಬಿತ್ತನೆ ಮಾಡಿದ ಬೆಳೆಯನ್ನು ಉಳಿಸಿಕೊಳ್ಳಲು ಆಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ
“ದಲ್ಲಾಲಿಗಳ ಮೂಲಕ ಮಾರಾಟ ಮಾಡುವದನ್ನು ಬಂದ ಮಾಡಿಸಿ, ನಿಗಧಿತ ದರಕ್ಕೆ ಸಲೀಸಾಗಿ ಜಿಲ್ಲೆಯಾದ್ಯಂತ ರೈತರುಗಳಿಗೆ ಯೂರಿಯಾ ಗೊಬ್ಬರವನ್ನು ಒದಗಿಸಬೇಕು” ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ರಿಯಾಜ್ ಅಹ್ಮದ್, ಎಂ ಡಿ ಕಾಲೇಬಾಗ ಇನ್ನೂ ಇತರರು ಇದ್ದರು.