ಬಳ್ಳಾರಿ ತಾಲೂಕಿನ ಸಂಜೀವನ ಕೋಟೆ ಗ್ರಾಮದಲ್ಲಿ ಜಾನುವಾರಿಗಳಿಗೆ ಹುಲ್ಲು ಕೊಯ್ಯಲು ಜಮೀನಿಗೆ ಹೊರಟಿದ್ದ ರೈತನ ಮೇಲೆ ಕರಡಿಗಳು ದಾಳಿ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿವೆ.
ರಾಜ (55) ಕರಡಿ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿ. ಮುಂಜಾನೆ ಹೊಲದ ಕಡೆ ಹೊರಟಿದ್ದವನ ಮೇಲೆ ಕುಂಬಾರ ಕುಂಟೆ ಪ್ರದೇಶದಲ್ಲಿ ಮರಿ ಕರಡಿಯೊಂದು ದಾಳಿ ನಡೆಸಿದೆ. ಪಕ್ಕದಲ್ಲಿದ್ದ ತಾಯಿ ಕರಡಿ ಸಹ ಈತನ ಮೇಲೆ ಮುಗಿಬಿದ್ದು ಮುಖಮೂತಿ ತಲೆಯನ್ನು ಕಚ್ಚಿ ಮಾಂಸ ಕಂಡವನ್ನು ಕಿತ್ತುಹಾಕಿವೆ. ಸ್ವಲ್ಪ ದೂರದಲ್ಲಿದ್ದ ಸಾರ್ವಜನಿಕರು ಕರಡಿ ದಾಳಿ ಮಾಡುತ್ತಿರುವುದನ್ನ ನೋಡಿ ಓಡಿ ಬಂದು ಓಡಿಸಿದ್ದಾರೆ.
ಗಂಭೀರ ಹಾಗೂ ಮಾರಣಾಂತಿಕವಾಗಿ ಗಾಯಗೊಂಡ ರೈತನನ್ನು ನಗರದ ಬಿಎಂಅರ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಡಿ ದಾಳಿಗೊಳಗಾದ ವ್ಯಕ್ತಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: ಬಳ್ಳಾರಿ | ಬಗರು ಹುಕುಂ ಭೂಮಿ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಿ: ದಸಂಸ ಆಗ್ರಹ