ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಪ್ರಕೃತಿ ವಿಕೋಪ, ವಾತಾವರಣದಲ್ಲಿ ತೇವಾಂಶ ಹೆಚ್ಚಳದಿಂದ ರೋಗಗಳು ಬರುತ್ತಿದೆ. ಬೆಳೆ ವಿಮೆ ಪಾವತಿಸಲಾದ ಎಲ್ಲಾ ರೈತರಿಗೆ ವಿಮಾ ಮೊತ್ತ ಪಾವತಿಸಬೇಕು. ತೆಂಗು ನಾರಿನ ಅಭಿವೃದ್ಧಿ ನಿಗಮ ಮತ್ತು ಇತರೆಡೆಗಳಲ್ಲಿ ಕಳಪೆ ರಸಗೊಬ್ಬರ, ಬೀಜ, ಕೀಟನಾಶಕ ವಿತರಣೆಯಾಗುತ್ತಿದ್ದು, ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು , ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಚಿತ್ರದುರ್ಗ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.

“ಹೊಸದುರ್ಗ ತಾಲೂಕಿನಲ್ಲಿ ತೆಂಗು ಅಭಿವೃದ್ಧಿ ಯೋಜನೆಯಲ್ಲಿ ವಿತರಿಸುತ್ತಿರುವ ಗೊಬ್ಬರ ಹಾಗೂ ಕೀಟನಾಶಕ ಕಳಪೆಯಾಗಿದ್ದು ಮತ್ತು ರೈತರಿಗೆ ವಿತರಿಸದೆ ಹಣ ಪಡೆದಿರುತ್ತಾರೆ ಮತ್ತು ಜಿಲ್ಲೆಯ ತಾಲೂಕುಗಳಲ್ಲಿ ಗೊಬ್ಬರ, ಬೀಜ ಹಾಗೂ ಪರಿಕರಗಳು ಬಹಳಷ್ಟು ಕಳಪೆ ಹಾಗೂ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದು, ನಕಲಿ ದಾಖಲೆ ಸೃಷ್ಟಿಸಿ ಬಿಲ್ ಮಾಡಲಾಗುತ್ತದೆ” ಎಂದು ಆರೋಪಿಸಿದರು.
“ಆದ್ದರಿಂದ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗಾಗಿ ಅಡಿಕೆ ಬೆಳೆಗೆ ವಿಮಾ ಮೊತ್ತ ಪಾವತಿಸದೇ ಇದ್ದರೇ ತಮ್ಮ ಇಲಾಖೆ ಮುಂಭಾಗದಲ್ಲಿ 06 ತಾಲ್ಲೂಕಿನ ರೈತರೊಂದಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು” ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಯೂರಿಯಾ ರಸಗೊಬ್ಬರ ಅಭಾವ; ರೈತರ ಬೆಳೆಗಳಿಗೆ ಅಗತ್ಯ ಗೊಬ್ಬರ ಒದಗಿಸಲು ರೈತ ಸಂಘ ಆಗ್ರಹ
ಈ ಪ್ರತಿಭಟನೆಯಲ್ಲಿ ರಂಗಸ್ವಾಮಿ, ಹೊಳಲ್ಕೆರೆ ರಂಗಣ್ಣ, ಜಯಣ್ಣ, ವೀರಭದ್ರಪ್ಪ, ಹಿರಿಯೂರು ಸಿದ್ರಾಮಣ್ಣ, ಸಣ್ಣ ತಿಮ್ಮಣ್ಣ, ಗಿರೀಶ್, ಚಳ್ಳಕೆರೆ ಶ್ರೀಕಂಠ ಮೂರ್ತಿ, ತಿಪ್ಪೇಸ್ವಾಮಿ, ಚನ್ನಕೇಶವ, ಹೊಸದುರ್ಗ ರಾಮಣ್ಣ, ಪ್ರಸನ್ನ, ಈರಣ್ಣ, ರಾಮಣ್ಣ, ಮೀಸೆ ಗೌಡ ಹಾಗೂ ಇನ್ನಿತರ ರೈತ ಮುಖಂಡರು ಭಾಗವಹಿಸಿದ್ದರು.